ಮೈಸೂರು : ನಂಜನಗೂಡಿನ ನಂಜುಂಡೇಶ್ವರ ದೇವಸ್ಥಾನದಲ್ಲಿ ಹುಂಡಿಗಳ ಎಣಿಕೆ ಕಾರ್ಯ ನಡೆಯಿತು. ಬ್ಯಾಂಕ್ ಆಫ್ ಬರೋಡ ಸಿಬ್ಬಂದಿಗಳು ಎಣಿಕೆ ಕಾರ್ಯ ಮಾಡಿದರು. ಒಟ್ಟಾರೆ ಹುಂಡಿಯಲ್ಲಿ 2,11,49,728 ನಗದು, 58 ಗ್ರಾಂ ಚಿನ್ನ.2 ಕೆಜಿ 500 ಗ್ರಾಂ ಬೆಳ್ಳಿ ಅಲ್ಲದೇ ,46 ವಿದೇಶಿ ಕರೆನ್ಸಿಗಳು ಕೂಡ ಸಂಗ್ರಹವಾಗಿದೆ.
ನಂಜನಗೂಡಿನಲ್ಲಿ 15 ದಿನಗಳ ಹಿಂದೆ ದೊಡ್ಡ ಜಾತ್ರೆ ನಡೆದಿದ್ದು, ಈ ವೇಳೆಯಲ್ಲಿ ನಂಜುಂಡೇಶ್ವರ ದರ್ಶನ ಪಡೆಯಲು ಲಕ್ಷಾಂತರ ಮಂದಿ ಹಾಜರಿದ್ದರು ಪರಿಣಾಮ, ನಂಜುಂಡೇಶ್ವರ ಹುಂಡಿಯಲ್ಲಿ ಆದಾಯದ ಪ್ರಮಾಣ ಹೆಚ್ಚಳವಾಗಿದೆ. ಕಳೆದ ನಾಲ್ಕೈದು ತಿಂಗಳಿನಿಂದ ಪ್ರತಿ ತಿಂಗಳು , ಹುಂಡಿ ಎಣಿಕೆ ಮಾಡುತ್ತಿದ್ದು ಒಂದು ಕೋಟಿಯೊಳಗೆ ಕಾಣಿಕೆ ಸೀಮಿತವಾಗಿತ್ತು. ಆದರೆ ಈಗ, 2 ಕೋಟಿ ರೂ.ದಾಟಿದೆ. ಈ ಬಾರಿ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಉತ್ತರ ಭಾರತ ಸೇರಿದಂತೆ ದೇಶದ ನಾನಾ ರಾಜ್ಯಗಳಿಂದ ಭಕ್ತಾದಿಗಳು ಆಗಮಿಸಿದ್ದರು. ಎಂದು ಮಾಹಿತಿ ತಿಳಿದಿದೆ


