ಮಹಾರಾಷ್ಟ್ರ : 19 ನೇ ವಯಸ್ಸಿಗೇ 180 ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿಯೊಬ್ಬನನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದು, ಆತ ಸೇರಿದಂತೆ ಕುಟುಂಬದವರು ವಾಸವಿದ್ದ ಮನೆಯನ್ನು ಜೆಸಿಬಿಯಿಂದ ಕೆಡವಿ ಹಾಕಲಾಗಿದೆ.
ಅಮರಾವತಿ ಜಿಲ್ಲೆ ಪರಾಟ್ವಾಡ ನಗರದವನಾದ ಆರೋಪಿ ಮೊಹಮದ್ ಅಯಾಜ್ ಅಲಿಯಾಸ್ ತನ್ವೀರ್ ಈ ವರೆಗೆ 180 ಅಪ್ರಾಪ್ತ ಬಾಲಕಿಯರಿಗೆ ಇಲ್ಲಸಲ್ಲದ ಆಮಿಷ ತೋರಿಸಿ ಲೈಂಗಿಕ ಹಲ್ಲೆ, ದೌರ್ಜನ್ಯ ಹಾಗೂ ಅನುಚಿತ ವೀಡಿಯೋ ರೆಕಾರ್ಡಿಂಗ್ ಮಾಡುತ್ತಿದ್ದನೆAದು ಆರೋಪಿಸಲಾಗಿದೆ. ಈತ ಅಕ್ರಮವಾಗಿ ಕಟ್ಟಿದ್ದನೆನ್ನಲಾದ ಮನೆಯನ್ನು ಅಚಲ್‌ಪುರ ಪುರಸಭೆಯ ತಂಡವು ಸ್ಥಳೀಯ ಬಿಜೆಪಿ ಶಾಸಕ ಪ್ರವೀಣ್ ತಯಾಡೆ ಎದುರಲ್ಲೇ ಜೆಸಿಬಿ ಬಳಸಿ ಕೆಡವಿದೆ. ಈ ಸಂದರ್ಭದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ಏ ರ್ಪಡಿಸಲಾಗಿತ್ತು. ಆರೋಪಿಯು ಎಐಎಂಐಎಆ ಪಕ್ಷದ ಕಾರ್ಯಕರ್ತನಾಗಿದ್ದನೆನ್ನಲಾಗಿದೆ. ಆರೋಪಿ ತನ್ವೀರ್‌ನನ್ನು ಸ್ಥಳೀಯ ಪೊಲೀಸರು ಶನಿವಾರವೇ ಬಂಧಿಸಿದ್ದಾರೆ.
ಈತನು ವಾಟ್ಸಾಪ್ ಮೂಲಕ ಅಪ್ರಾಪ್ತ ಬಾಲಕಿಯರಿಗೆ ಆಮಿಷವೊಡ್ಡಿ ತನ್ನ `ಪ್ರೀತಿಯ ಬಲೆ’ಗೆ ಬೀಳಿಸಿಕೊಂಡು ಅವರನ್ನು ಮುಂಬೈ ಕರೆದೊಯ್ದು ಈವರೆಗೆ ೩೫೦ ಅಶ್ಲೀಲ ವೀಡಿಯೋಗಳನ್ನು ಚಿತ್ರಿಸಿದ್ದಾನೆ.


