ಮಂಗಳೂರು : ನಗರದ ಎ.ಜೆ ಆಸ್ಪತ್ರೆಯ ಸಮೀಪ ಇರುವ ಇನ್ಸ್ಟಾ ಮಾರ್ಟ್ನಲ್ಲಿ ಲಿಫ್ಟ್ ಅವಘಡ ಸಂಭವಿಸಿ ಬೆಳಾಲು ಪೂಂಜಕೆರೆಯ ಯುವಕ ಮೃತಪಟ್ಟ ಘಟನೆ ನಡೆದಿದೆ.
ಸ್ಟಾಕ್ ನ ಗೋದಾಮಿನಿಂದ ಲಿಫ್ಟ್ ಬಳಿಗೆ ವಸ್ತುಗಳನ್ನು ಸಾಗಿಸುವ ವೇಳೆ ಅವಘಡ ಸಂಭವಿಸಿದ್ದು, ಗಂಭೀರವಾಗಿ ಗಾಯಗೊಂಡ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಘಟನೆ ಬಳಿಕ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಅವಘಡಕ್ಕೆ ನಿಖರ ಕಾರಣ ಏನು ಎಂಬುದರ ಕುರಿತು ತನಿಖೆ ಮುಂದುವರಿದಿದೆ.


