Monday, July 6, 2026
Homeರಾಜ್ಯಚಿತ್ರದುರ್ಗ : ಲವ್,ಸೆಕ್ಸ್,ದೋಖ ; RSI ವಿರುದ್ಧ ಯುವತಿಯಿಂದ ಗಂಭೀರ ಆರೋಪ, FIR ದಾಖಲಾಗುತ್ತಿದ್ದಂತೆ ಅಧಿಕಾರಿ...

ಚಿತ್ರದುರ್ಗ : ಲವ್,ಸೆಕ್ಸ್,ದೋಖ ; RSI ವಿರುದ್ಧ ಯುವತಿಯಿಂದ ಗಂಭೀರ ಆರೋಪ, FIR ದಾಖಲಾಗುತ್ತಿದ್ದಂತೆ ಅಧಿಕಾರಿ ನಾಪತ್ತೆ.

ಚಿತ್ರದುರ್ಗ : ಚಿತ್ರದುರ್ಗ ಸಶಸ್ತ್ರ ಮೀಸಲು ಪಡೆಯ (DAR) ಪೊಲೀಸ್ ಇನ್ಸ್‌ಪೆಕ್ಟರ್ ವರುಣ್ ಕುಮಾರ್ ವಿರುದ್ಧ ಯುವತಿಗೆ ಮದುವೆಯ ಭರವಸೆ ನೀಡಿ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡು ಮೋಸ ಮಾಡಿದ ಆರೋಪ ಕೇಳಿಬಂದಿದೆ. ಈ ಸಂಬಂಧ ದಾವಣಗೆರೆ ಮೂಲದ ಪೂರ್ಣಿಮಾ ಎಂಬ ಯುವತಿ ಚಿತ್ರದುರ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, FIR ದಾಖಲಾಗುತ್ತಿದ್ದಂತೆ RSI ವರುಣ್ ಕುಮಾರ್ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ದೂರುದಾರೆಯ ಪ್ರಕಾರ, ಸುಮಾರು ಒಂದು ವರ್ಷದ ಹಿಂದೆ ಇನ್‌ಸ್ಟಾಗ್ರಾಂ ಮೂಲಕ ಇಬ್ಬರಿಗೂ ಪರಿಚಯವಾಗಿತ್ತು. ಬಳಿಕ ಪರಸ್ಪರ ಪ್ರೀತಿಸುತ್ತಿದ್ದು, ಈ ಅವಧಿಯಲ್ಲಿ ವರುಣ್ ಕುಮಾರ್ ಮದುವೆಯಾಗುವುದಾಗಿ ನಂಬಿಸಿ ಹಲವು ಬಾರಿ ಲೈಂಗಿಕ ಸಂಪರ್ಕ ಬೆಳೆಸಿದ್ದಾರೆ ಎನ್ನಲಾಗಿದೆ. ಯುವತಿ ನೀಡಿರುವ ದೂರಿನಲ್ಲಿ, ತಾನು ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಮದುವೆಗೆ ಒತ್ತಾಯಿಸಿದಾಗ ಗರ್ಭಪಾತದ ಮಾತ್ರೆ ನೀಡಲಾಗಿದೆ ಎಂದು ಆರೋಪಿಸಲಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ಮಹಿಳಾ ಪೊಲೀಸ್ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದು, ಆರೋಪಿ ಅಧಿಕಾರಿಯ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular