ಕೋಲ್ಕತಾ : ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದ ಸರ್ಕಾರ ಬಾಂಗ್ಲಾದೇಶ ಗಡಿಯುದ್ದಕ್ಕೂ ಭದ್ರತಾ ಬೇಲಿ ನಿರ್ಮಿಸಲು ಮುಂದಾಗಿದೆ. ಈ ಕ್ರಮಕ್ಕೆ ಬಾಂಗ್ಲಾದೇಶ ವಿರೋಧ ವ್ಯಕ್ತಪಡಿಸಿರುವುದಾಗಿ ವರದಿಯಾಗಿದೆ. ರಾಜ್ಯ ಸಚಿವ ಸಂಪುಟವು ಗಡಿ ಪ್ರದೇಶದಲ್ಲಿ ಸುಮಾರು 600 ಎಕರೆ ಭೂಮಿ ಸ್ವಾಧೀನಕ್ಕೆ ಅನುಮೋದನೆ ನೀಡಿದ್ದು, ಅದನ್ನು ಗಡಿ ಭದ್ರತಾ ಪಡೆ (BSF)ಗೆ ಹಸ್ತಾಂತರಿಸಲು ತೀರ್ಮಾನಿಸಲಾಗಿದೆ. ಗಡಿ ಬೇಲಿ ಕಾಮಗಾರಿ 45 ದಿನಗಳೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಒಳನುಸುಳುವಿಕೆ ತಡೆ ಮುಖ್ಯ ಉದ್ದೇಶವಾಗಿದೆ. ಬಾಂಗ್ಲಾದೇಶದಿಂದ ನಡೆಯುತ್ತಿರುವ ಅಕ್ರಮ ಒಳನುಸುಳುವಿಕೆ, ಮಾದಕ ವಸ್ತುಗಳ ಸಾಗಣೆ ಹಾಗೂ ಜಾನುವಾರು ಕಳ್ಳಸಾಗಣೆ ದೇಶದ ಭದ್ರತೆಗೆ ಸವಾಲಾಗಿದೆ ಎಂದು ಬಿಜೆಪಿ ಸರ್ಕಾರ ಹೇಳಿದೆ. ಭಾರತ ಮತ್ತು ಬಾಂಗ್ಲಾದೇಶ ನಡುವೆ ಒಟ್ಟು 4,096 ಕಿ.ಮೀ ಗಡಿ ಇದ್ದು, ಅದರಲ್ಲಿ 2,216 ಕಿ.ಮೀ ಗಡಿ ಪಶ್ಚಿಮ ಬಂಗಾಳದಲ್ಲಿಯೇ ಹರಿದಿದೆ. ಹೀಗಾಗಿ ಈ ಪ್ರದೇಶವನ್ನು ಅತೀ ಸೂಕ್ಷ್ಮ ಗಡಿ ವಲಯವೆಂದು ಪರಿಗಣಿಸಲಾಗಿದೆ.
ಒಳನುಸುಳುವಿಕೆ ವಿಚಾರ ಹಲವು ವರ್ಷಗಳಿಂದ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಬಿಜೆಪಿ, ಹಿಂದಿನ ಸರ್ಕಾರಗಳು ಮತ ಬ್ಯಾಂಕ್ ರಾಜಕಾರಣಕ್ಕಾಗಿ ಅಕ್ರಮ ವಲಸಿಗರಿಗೆ ಆಶ್ರಯ ನೀಡಿದ್ದವು ಎಂದು ಆರೋಪಿಸುತ್ತಿದ್ದು, ವಿರೋಧ ಪಕ್ಷಗಳು ಇದನ್ನು ರಾಜಕೀಯ ಲಾಭಕ್ಕಾಗಿ ಬಳಸಲಾಗುತ್ತಿದೆ ಎಂದು ತಿರುಗೇಟು ನೀಡುತ್ತಿವೆ.
ಭೌಗೋಳಿಕ ಅಡೆತಡೆ ಇರುವ ಪ್ರದೇಶಗಳಲ್ಲಿ ಕೇವಲ ತಂತಿ ಬೇಲಿ ಮಾತ್ರವಲ್ಲದೆ ತಂತ್ರಜ್ಞಾನ ಆಧಾರಿತ “ಸ್ಮಾರ್ಟ್ ಬೇಲಿ” ವ್ಯವಸ್ಥೆಯನ್ನೂ ಜಾರಿಗೊಳಿಸಲು ಯೋಜಿಸಲಾಗಿದೆ.ಇದರಲ್ಲಿ ಥರ್ಮಲ್ ಇಮೇಜಿಂಗ್ ಕ್ಯಾಮೆರಾಗಳು,ಇನ್ಫ್ರಾರೆಡ್ ಸೆನ್ಸಾರ್ಗಳು,ಭೂಗತ ನಿಗಾ ವ್ಯವಸ್ಥೆ ಬಿಎಸ್ಎಫ್ ಜಲಪಡೆ ನಿಗಾ ವ್ಯವಸ್ಥೆಅಳವಡಿಸಲು ಯೋಜನೆ ರೂಪಿಸಲಾಗಿದೆ. ಈಗಾಗಲೇ 1,647.7 ಕಿ.ಮೀ ತಂತಿ ಬೇಲಿ ನಿರ್ಮಾಣವಾಗಿದೆಇನ್ನೂ 569 ಕಿ.ಮೀ ಗಡಿಯಲ್ಲಿ ಬೇಲಿ ಕಾಮಗಾರಿ ಬಾಕಿಯಿದೆನದಿ, ಜೌಗು ಪ್ರದೇಶ ಹಾಗೂ ಗುಡ್ಡಗಾಡು ಪ್ರದೇಶಗಳಿಂದಾಗಿ 112.8 ಕಿ.ಮೀ ಭಾಗದಲ್ಲಿ ಬೇಲಿ ನಿರ್ಮಾಣ ಕಷ್ಟಕರವಾಗಿದೆ. ಪಶ್ಚಿಮ ಬಂಗಾಳದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಗಡಿ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಈ ಕ್ರಮ ರಾಜಕೀಯ ಹಾಗೂ ಭದ್ರತಾ ವಲಯಗಳಲ್ಲಿ ಚರ್ಚೆಗೆ ಕಾರಣವಾಗಿದೆ.


