ಕೊಲಂಬೋ : ಆರ್‌ಸಿಬಿ ತಂಡದ ವೇಗಿ ನುವಾನ್ ತುಷಾರ ಶ್ರೀಲಂಕಾ ಕ್ರಿಕೆಟ್ ಮಂಡಳಿ ವಿರುದ್ಧ ಹೂಡಿದ್ದ ಮೊಕದ್ದಮೆಯನ್ನು ಹಿಂಪಡೆದು ಕ್ಷಮೆಯಾಚಿಸಿದ್ದಾರೆ. ಐಪಿಎಲ್ 2026ರಲ್ಲಿ ಆಡಲು ಎನ್‌ಒಸಿ ನಿರಾಕರಿಸಿದ್ದನ್ನು ಪ್ರಶ್ನಿಸಿ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ದೈಹಿಕ ಸಾಮರ್ಥ್ಯದ ಪರೀಕ್ಷೆಯಲ್ಲಿ ಉತ್ತೀರ್ಣರಾಗದ ಕಾರಣ ಮಂಡಳಿಯು ಅವರಿಗೆ ಅನುಮತಿ ನಿರಾಕರಿಸಿತ್ತು.
ಸದ್ಯ ಐಪಿಎಲ್ ಸೀಸನ್ ಅಂತಿಮ ಹಂತದಲ್ಲಿರುವುದರಿಂದ , ಅವರು ಕಾನೂನು ಹೋರಾಟ ಕೈಬಿಟ್ಟು ಮಂಡಳಿಯೊAದಿಗೆ ರಾಜಿ ಮಾಡಿಕೊಂಡಿದ್ದಾರೆ. ಇದರಿಂದ
ಆರ್ ಸಿ ಬಿ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಐಪಿಎಲ್‌ನಲ್ಲಿ ಭಾಗವಹಿಸಲು ತನ್ನ ದೇಶದ ಆಟಗಾರರಿಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ಫಿಟ್ನೆಸ್ ಸರ್ಟಿಫಿಕೇಟ್
ಪಡೆದುಕೊಳ್ಳಲು ನಿರ್ದೇಶಿಸಿತ್ತು. ಆದ್ರೆ, ಈ ವಿಚಾರದಲ್ಲಿ ವಿಳಂಬ ತೋರಿದ ಕಾರಣ, ತನ್ನ ಕ್ರಿಕೆಟ್ ಮಂಡಳಿ ವಿರುದ್ಧವೇ ತುಷಾರ ಕೋರ್ಟ್ ಮೆಟ್ಟಿಲೇರಿದ್ದರು. ಹೀಗಾಗಿ,
ಈಗ ಕ್ಷಮೆ ಯಾಚಿಸಿದ್ದಾರೆ.


