Monday, August 17, 2026
Homeವಿದೇಶಟೆಹರಾನ್ : ಹೊರ್ಮುಜ್ ಜಲಸಂಧಿಯಲ್ಲಿ ಹಾದುಹೋಗಿರುವ ಇಂಟರ್‌ನೆಟ್ ಕಟ್ ಮಾಡುವುದಾಗಿ ಇರಾನ್ ಬೆದರಿಕೆ ಬಾಂಬ್.

ಟೆಹರಾನ್ : ಹೊರ್ಮುಜ್ ಜಲಸಂಧಿಯಲ್ಲಿ ಹಾದುಹೋಗಿರುವ ಇಂಟರ್‌ನೆಟ್ ಕಟ್ ಮಾಡುವುದಾಗಿ ಇರಾನ್ ಬೆದರಿಕೆ ಬಾಂಬ್.

ಟೆಹರಾನ್ : ಹೊರ್ಮುಜ್ ಜಲಸಂಧಿಯಲ್ಲಿರುವ ಇಂಟರ್‌ನೆಟ್ ಕಟ್ ಮಾಡುವುದಾಗಿ ಇರಾನ್ ಸೇನೆ ಐಆರ್‌ಜಿಸಿ ಬೆದರಿಕೆ ಹಾಕಿದೆ. ಇದರಿಂದ ಭಾರತ ಸೇರಿದಂತೆ ಹಲವಾರು ದೇಶಗಳ ಇಂಟರ್ನೆಟ್ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇದೆ. ಕೊಲ್ಲಿಯುದ್ಧ ಮತ್ತೊಂದು ಹಂತಕ್ಕೆ ಹೋಗುವ ಲಕ್ಷಣ ಕಾಣುತ್ತಿದೆ.

ಭಾರತವು ಇಂಟರ್‌ನೆಟ್ ಸಂಪರ್ಕಕ್ಕಾಗಿ ಪಶ್ಚಿಮ ಏಷ್ಯಾದ ಈ ಕೇಬಲ್ ಮಾರ್ಗಗಳ ಮೇಲೆ ಶೇ. ೬೦ ರಷ್ಟು ಅವಲಂಬಿತವಾಗಿದೆ. ಜಗತ್ತಿನ ಬಹುತೇಕ ಅಂತರ್ಜಾಲ ಕೇಬಲ್‌ಗಳು ಹೊರ್ಮುಜ್ ಜಲಸಂಧಿಯ ಸಾಗರದಾಳದಲ್ಲಿ ಹಾದುಹೋಗಿವೆ. ಹೊರ್ಮುಜ್ ಜಲಸಂಧಿ ಅದಕ್ಕಿಂತ ಹೆಚ್ಚಾಗಿ ಇದೊಂದು ಪ್ರಮುಖ `ಡಿಜಿಟಲ್ ಕೇಬಲ್ ಕೇಂದ್ರ’ವಾಗಿದೆ. ಜಲಸAಧಿಯ ಸಾಗರದಾಳದಲ್ಲಿ ಏಷ್ಯಾ, ಯೂರೋಪ್ ಮತ್ತು ಪಶ್ಚಿಮ ಏಷ್ಯಾಗಳನ್ನು ಸಂಪರ್ಕಿಸುವ ಕೆಲವು ಅಂತಾರಾಷ್ಟಿçÃಯ ಫೈಬರ್ ಆಪ್ಟಿಕ್ ಕೇಬಲ್‌ಗಳು ಹಾದುಹೋಗಿವೆ. ಇವುಗಳು ತುಂಡಾದರೆ ಸಂಬAಧಪಟ್ಟ ಹಲವಾರು ದೇಶಗಳಲ್ಲಿ ಅಂತರ್ಜಾಲ ವ್ಯವಸ್ಥೆಯೇ ಅಸ್ತವ್ಯಸ್ಥವಾಗಿ ಅಲ್ಲೋಲಕಲ್ಲೋಲ ಉಂಟಾಗಲಿದೆ.

ಹೊರ್ಮುಜ್ ಜಲಸಂಧಿಯಲ್ಲಿ ಮೈನ್‌ಗಳನ್ನು ಅಳವಡಿಸುವ ಅಥವಾ ಅಮೆರಿಕದ ನೌಕಾಪಡೆಗೆ ಅಡ್ಡಿಪಡಿಸುವ ಯಾವುದೇ ಇರಾನ್ ಹಡಗುಗಳನ್ನು ಕಂಡ ತಕ್ಷಣವೇ ಹೊಡೆದುರುಳಿಸಿ ಎಂದು ನೌಕಾಪಡೆಗೆ ಟ್ರಂಪ್ ಖಡಕ್ ಸೂಚನೆ ನೀಡಿದ್ದಾರೆ. ಜಲಸಂಧಿಯಲ್ಲಿ ಹಡಗುಗಳ ಸಂಚಾರಕ್ಕೆ ಅಡ್ಡಿಪಡಿಸಲು ಸಮುದ್ರ ಮೈನ್‌ಗಳನ್ನು ಹರಡುವ ಇರಾನ್‌ನ ಸಣ್ಣ ದೋಣಿ ಅಥವಾ ಹಡಗುಗಳನ್ನು ಸಂಪೂರ್ಣವಾಗಿ ನಾಶಪಡಿಸಲು ಸೂಚಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular