Thursday, April 23, 2026
Flats for sale
Homeದೇಶಇಂದೋರ್ : ಮಹಾ ಕುಂಭಮೇಳದ ಮೊನಾಲಿಸಾ ಭೋಸ್ಲೆ ಈಗ ಗರ್ಭಿಣಿ.

ಇಂದೋರ್ : ಮಹಾ ಕುಂಭಮೇಳದ ಮೊನಾಲಿಸಾ ಭೋಸ್ಲೆ ಈಗ ಗರ್ಭಿಣಿ.

ಇಂದೋರ್ : ಮಹಾ ಕುಂಭಮೇಳದ ಸಂದರ್ಭದಲ್ಲಿ ರುದ್ರಾಕ್ಷಿ ಮಾಲೆ ಮಾರುತ್ತಾ ರಾತ್ರೋರಾತ್ರಿ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದ್ದ ಅಪ್ರಾಪ್ತೆ ಮೊನಾಲಿಸಾ ಭೋಸ್ಲೆ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಮೊನಾಲಿಸಾ ಗರ್ಭಿಣಿಯಾಗಿದ್ದಾರೆ ಎಂಬ ವಿಷಯವನ್ನು ಅವರ ಪತಿ ಫರ್ಮಾನ್ ಖಾನ್ ಪೊಲೀಸರಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಕಳೆದ ಮಾರ್ಚ್ ತಿಂಗಳಲ್ಲಿ ಕೇರಳದ ದೇವಸ್ಥಾನವೊಂದರಲ್ಲಿ ಮೊನಾಲಿಸಾ ಮತ್ತು ನಟ ಫರ್ಮಾನ್ ಖಾನ್ ಅಂತರ್-ಧರ್ಮೀಯ ವಿವಾಹವಾಗಿದ್ದರು. ಈ ವಿವಾಹವು ದೇಶಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿತ್ತು. ಆದರೆ, ಮೊನಾಲಿಸಾ ಅವರ ಪೋಷಕರು ಆಕೆ ಇನ್ನೂ ಅಪ್ರಾಪ್ತೆ ಎಂದು ಆರೋಪಿಸಿ ಮಧ್ಯಪ್ರದೇಶದಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಮಧ್ಯಪ್ರದೇಶ ಪೊಲೀಸರು ಫರ್ಮಾನ್ ಖಾನ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ಪ್ರಸ್ತುತ ಕೇರಳದ ರಹಸ್ಯ ಸ್ಥಳವೊಂದರಲ್ಲಿ ತಲೆಮರೆಸಿಕೊಂಡಿರುವ ಈ ಜೋಡಿ, ಪೊಲೀಸರ ವಿಚಾರಣೆಯಿಂದ ರಕ್ಷಣೆ ಕೋರಿದ್ದಾರೆ. ಇದೇ ವೇಳೆ ಫರ್ಮಾನ್ ಖಾನ್ ತಮ್ಮ ಪತ್ನಿ ಮೊನಾಲಿಸಾ ಗರ್ಭಿಣಿಯಾಗಿದ್ದಾರೆ ಎಂದು ವರದಿಯಾಗಿದೆ. ಇತ್ತೀಚೆಗೆ ಪತಿಯ ಮೇಲೆ ಪೋಕ್ಸೋ ಪ್ರಕರಣದ ದಾಖಲಾದ ಬೆನ್ನಲ್ಲೇ ಮೊನಾಲಿಸಾ ನಾಪತ್ತೆ ಆಗಿದ್ದಳು.

RELATED ARTICLES

LEAVE A REPLY

Please enter your comment!
Please enter your name here

Most Popular