ಕ್ಯಾಲಿಫೋರ್ನಿಯಾ : ವಿಶ್ವದ ಪ್ರಖ್ಯಾತ ತಂತ್ರಜ್ಞಾನ ಸಂಸ್ಥೆ ಆಪಲ್ ತನ್ನ ನಾಯಕತ್ವದಲ್ಲಿ ಮಹತ್ವದ ಬದಲಾವಣೆಯನ್ನು ಘೋಷಿಸಿದೆ. ಸುದೀರ್ಘ 15 ವರ್ಷಗಳ ಕಾಲ ಕಂಪನಿಯನ್ನು ಯಶಸ್ವಿಯಾಗಿ ಮುನ್ನಡೆಸಿದ ಟಿಮ್ ಕುಕ್ ಅವರು ಸಿಇಒ ಸ್ಥಾನದಿಂದ ಕೆಳಗಿಳಿಯಲು ನಿರ್ಧರಿಸಿದ್ದು, ಅವರ ಜಾಗಕ್ಕೆ ಹಾರ್ಡ್ವೇರ್ ಎಂಜಿನಿಯರಿAಗ್ ವಿಭಾಗದ ಮುಖ್ಯಸ್ಥರಾಗಿರುವ ಜಾನ್ ಟೆರ್ನಸ್ ಅವರನ್ನು ನೂತನ ಸಿಇಒ ಆಗಿ ನೇಮಕ ಮಾಡಲಾಗಿದೆ.
2026 ರ ಸೆಪ್ಟಂಬರ್ ಒಂದರಿAದ ಜಾನ್ ಟೆರ್ನಸ್ ಅಧಿಕೃತವಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಟಿಮ್ ಕುಕ್ ಇನ್ನು ಆಪಲ್ ಸಂಸ್ಥೆಯ ಎಕ್ಸಿಕ್ಯೂಟಿವ್ ಚೇರ್‌ಮನ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.


