ಬೆಳ್ತಂಗಡಿ : ನದಿಯ ಅಣೆಕಟ್ಟಿನ ಸೀಳಿನ ಬಳಿ ಕುಳಿತ ಭಂಗಿಯಲ್ಲಿ ಯುವಕನೊಬ್ಬನ ಮೃತದೇಹವು ಜನವರಿ 10 ಮಂಗಳವಾರ ಸಂಜೆ ಇಲ್ಲಿ ಪತ್ತೆಯಾಗಿದೆ.
ತಾಲೂಕಿನ ಲಾಯಿಲ ಗ್ರಾಮದ ಅಯೋಧ್ಯಾನಗರ ನಿವಾಸಿ ಕಿರಣ ಗಾಣಿಗ (27) ಮೃತ ವ್ಯಕ್ತಿ. ಸಂಗಟಿನಗರ ರಸ್ತೆಯ ಸೋಮಾವತಿ ನದಿಗೆ ನಿರ್ಮಿಸಲಾದ ಅಣೆಕಟ್ಟಿನ ಸೀಳಿನ ಬಳಿ ಅವರ ಪಾರ್ಥಿವ ಶರೀರ ಪತ್ತೆಯಾಗಿದೆ.
ಬೆಳ್ತಂಗಡಿ ಉಪನಿರೀಕ್ಷಕ ಅರ್ಜುನ್ ಮತ್ತು ತಂಡ ಸ್ಥಳ ಪರಿಶೀಲನೆ ನಡೆಸಿ ಕಿರಣ್ ಗಾಣಿಗ ಅವರ ಪಾರ್ಥಿವ ಶರೀರವನ್ನು ಮರಣೋತ್ತರ ಪರೀಕ್ಷೆಗಾಗಿ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಲಾಯಿಲ ಗ್ರಾ.ಪಂ.ಉಪಾಧ್ಯಕ್ಷ ಗಣೇಶ್, ಜಿ.ಪಂ.ಸದಸ್ಯ ಅರವಿಂದ್ ಸ್ಥಳ ಪರಿಶೀಲನೆಗೆ ಪೊಲೀಸರಿಗೆ ಸಹಕರಿಸಿದರು.
ಕಿರಣ್ ಸಾವಿಗೆ ಕಾರಣವೇನು ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.