ಭಾರತೀಯ ನಟಿ ಬಾಲಿವುಡ್ ನಲ್ಲಿ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿರುವ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಇದೀಗ ಗ್ಲೋಬಲ್ ಐಕಾನ್ (Global Icon) ಆಗಿ ಗುರುತಿಸಿಕೊಂಡಿದ್ದಾರೆ. ಪ್ರಿಯಾಂಕಾ ಚೋಪ್ರಾ ಜೋನಸ್ ತಮ್ಮ ವೃತ್ತಿಜೀವನದಲ್ಲಿ ಹಲವು ಕ್ಷೇತ್ರಗಳಲ್ಲಿ ಮಾಡುವ ಮೂಲಕ ಎಲ್ಲೆಡೆ ಗುರುತಿಸಿಕೊಂಡಿದ್ದು, ಉದ್ಯಮಿಯಾಗಿಯೂ ಅವರು ಯಶಸ್ವಿಯಾಗಿದ್ದಾರೆ (Success).
ಸದ್ಯ ಬಾಲಿವುಡ್ ನಿಂದ ದೂರವೇ ಇರುವ ಪಿಗ್ಗಿ, ಒಂದಲ್ಲ ಎರಡಲ್ಲ ಬದಲಾಗಿ ಸಾಕಷ್ಟು ಉದ್ಯಮಗಳಲ್ಲಿ ತೊಡಗಿಸಿಕೊಂಡಿರುವ ಪ್ರಿಯಾಂಕಾ ಹೊಸ ಹೊಸ ಕ್ಷೇತ್ರಗಳಲ್ಲೂ ಕಾಲಿಟ್ಟಿದ್ದಾರೆ. ಪ್ರೊಡಕ್ಷನ್ ಹೌಸ್ ನಿಂದ ಹಿಡಿದು ಹೇರ್ ಕೇರ್ ಪ್ರಾಡಕ್ಟ್ ಬ್ರಾಂಡ್ ವರೆಗೂ ಅವರ ವ್ಯವಹಾರ ಹರಡಿದೆ. ಹಾಗಿದ್ರೆ ಯಾವ್ಯಾದ ಉದ್ಯಮಗಳನ್ನು ಅವರು ನಡೆಸುತ್ತಿದ್ದಾರೆ? ಹೇಗೆ ನಡೆಸುತ್ತಿದ್ದಾರೆ ಎಂಬುದನ್ನು ತಿಳಿಯೋಣ.
ಲೇಖಕಿ ಪ್ರಿಯಾಂಕಾ : ನಟಿ ಪ್ರಿಯಾಂಕಾ ಚೋಪ್ರಾ ಬರೀ ನಟಿ ಮಾತ್ರವಲ್ಲ. ಆಕೆ ಒಳ್ಳಯ ಲೇಖಕಿ ಕೂಡ. ತಮ್ಮ ಜೀವನದ ಅನುಭವಗಳ ಬಗ್ಗೆಯೇ ಮೆಮೊಯಿರ್ ಅನ್ ಫಿನಿಶ್ಡ್ ಎಂಬ ಬುಕ್ ಬರೆದು ಬಿಡುಗಡೆ ಮಾಡಿದ್ದಾರೆ. ಸಾಕಷ್ಟು ಜನಪ್ರಿಯವಾಗಿರೋ ಈ ಪುಸ್ತಕದ ಬಗ್ಗೆ ಒಳ್ಳೆಯ ವಿಮರ್ಶೆಗಳು ಕೇಳಿಬಂದಿವೆ.
ಹೇರ್ ಕೇರ್ ಪ್ರಾಡಕ್ಟ್: ಪ್ರಿಯಾಂಕಾ ಚೋಪ್ರಾ ಕೋವಿಡ್ ಅವಧಿಯಲ್ಲಿ ಆಕೆಯ ಹೇರ್ ಕೇರ್ ಬ್ರಾಂಡ್ ಅನೊಮಲೈ ಲಾಂಚ್ ಮಾಡಿದ್ದಾರೆ. ಸಸ್ಯಾಹಾರಿ ಮತ್ತು ಸುಸ್ಥಿರ ಹೇರ್‌ಕೇರ್ ಅನೊಮಲೈ ಕೈಗೆಟುಕುವ ಮತ್ತು ರಾಸಾಯನಿಕ-ಮುಕ್ತ ಉತ್ಪನ್ನಗಳನ್ನು ಹೊಂದಿದೆ. ಪ್ರಿಯಾಂಕಾ ಕೂದಲ ರಕ್ಷಣೆಯ ಬ್ರಾಂಡ್ ಅನ್ನು ಫೌಂಡೇಶನ್‌ನೊಂದಿಗೆ ಪ್ರಾರಂಭಿಸಿದರು.
ನ್ಯೂಯಾರ್ಕ್ ನಲ್ಲಿ ರೆಸ್ಟೋರೆಂಟ್ : ಪ್ರಿಯಾಂಕಾ ಹೋಟೆಲ್ ಉದ್ಯಮದಲ್ಲೂ ತೊಡಗಿಸಿಕೊಂಡಿದ್ದಾರೆ. 2021 ರ ಮಾರ್ಚ್ ನಲ್ಲಿ ನ್ಯೂಯಾರ್ಕ್ ನಲ್ಲಿ ಸೋನಾ ಅನ್ನೋ ಇಂಡಿಯನ್ ರೆಸ್ಟೋರೆಂಟ್ ಅನ್ನು ಪ್ರಿಯಾಂಕಾ ಆರಂಭಿಸಿದ್ದಾರೆ. ಇದು ಪ್ರೈವೇಟ್ ಡೈನಿಂಗ್ ರೂಮ್ ಹೊಂದಿದ್ದು, ಇದರ ಹೆಸರು ಮಿಮಿಸ್.
ಹೋಮ್ ವೇರ್ ಉದ್ಯಮ: ಪ್ರಿಯಾಂಕಾ ಇತ್ತೀಚಿಗೆ ಸೋನಾ ಹೋಮ್ ವೇರ್ ಉದ್ಯಮವನ್ನೂ ಆರಂಭಿಸಿದ್ದಾರೆ. ಭಾರತೀಯ ಪಾರಂಪರಿಕ ಹಾಗೂ ಸಂಸ್ಕೃತಿಯನ್ನು ಬಿಂಬಿಸುವಂತಹ ಮನೆ ಅಲಂಕಾರಿಕ ಬ್ರಾಂಡ್ ಇದಾಗಿದ್ದು, ಸಖತ್ ಫೇಮಸ್ ಆಗಿದೆ.
ಪ್ರೊಡಕ್ಷನ್ ಹೌಸ್: ಪರ್ಪಲ್ ಪೆಬ್ಬಲ್ ಅನ್ನೋವಂಥ ಪ್ರೊಡಕ್ಷನ್ ಹೌಸ್ ಕೂಡ ಹೊಂದಿದ್ದಾರೆ ಪ್ರಿಯಾಂಕಾ. ಪರ್ಪಲ್ ಪೆಬಲ್ ಪಿಕ್ಚರ್ಸ್ ಭಾರತೀಯ ಚಲನಚಿತ್ರ ನಿರ್ಮಾಣ ಕಂಪನಿಯಾಗಿದ್ದು, ನಟಿ ಮತ್ತು ನಿರ್ಮಾಪಕಿ ಪ್ರಿಯಾಂಕಾ ಚೋಪ್ರಾ ಸ್ಥಾಪಿಸಿದ್ದಾರೆ.
ಇದು ಮಹಾರಾಷ್ಟ್ರದ ಮುಂಬೈನಲ್ಲಿದೆ. ಕಂಪನಿಯು ಸಣ್ಣ ಬಜೆಟ್ ಚಲನಚಿತ್ರಗಳನ್ನು ನಿರ್ಮಿಸುವ ಗುರಿಯನ್ನು ಹೊಂದಿದ್ದು, ಇದು ಹೆಚ್ಚಾಗಿ ಮೂಲ ಕಥೆಗಳನ್ನು ಬೆಂಬಲಿಸುತ್ತದೆ. ಬರಹಗಾರರು, ನಟರು, ನಿರ್ದೇಶಕರು ಮತ್ತು ತಂತ್ರಜ್ಞರಂತಹ ಹೊಸ ಪ್ರತಿಭೆಗಳನ್ನು ಇದು ಉತ್ತೇಜಿಸುತ್ತದೆ.
ಡೇಟಿಂಗ್ ಆಪ್‌ನಲ್ಲಿ ಹೂಡಿಕೆ: ಡೇಟಿಂಗ್ ಅಪ್ಲಿಕೇಶ್ ಆಗಿರುವ ಬಂಬಲ್ ನಲ್ಲೂ ಕೂಡ ಇವರು ಹೂಡಿಕೆ ಮಾಡಿದ್ದಾರೆ. 2014 ರಲ್ಲಿ ಸ್ಥಾಪಿಸಲಾದ ಆನ್‌ಲೈನ್ ಡೇಟಿಂಗ್ ಅಪ್ಲಿಕೇಶನ್ ಮಹಿಳಾ ನೇತೃತ್ವದ ಕಂಪನಿಯಾಗಿದೆ. ವಿಟ್ನಿ ವೋಲ್ಫ್ ಹರ್ಡ್ ಅದರ CEO ಆಗಿದ್ದಾರೆ. ಪ್ರಿಯಾಂಕಾ 2018 ರಲ್ಲಿ ಕಂಪನಿಯಲ್ಲಿ ಹೂಡಿಕೆ ಮಾಡಿದರು ಮತ್ತು ಡೇಟಿಂಗ್ ಅಪ್ಲಿಕೇಶನ್‌ನ ಭಾರತದಲ್ಲಿ ಬಿಡುಗಡೆಯ ಸಮಯದಲ್ಲಿ ಸಲಹೆಗಾರರಾದರು.
BON V!V ಜೊತೆ ಹೂಡಿಕೆ : ಇನ್ನು ಪ್ರಿಯಾಂಕಾ ಚೋಪ್ರಾ ಶುದ್ಧ ನೀರಿನ ಬ್ರಾಂಡ್ ಆಗಿರುವ BON V!V ಜೊತೆಗೆ ಕೂಡ ಕೈಜೋಡಿಸಿದ್ದಾರೆ. ಏಪ್ರಿಲ್ 2021 ರ ಮಧ್ಯದಲ್ಲಿ, ನಟಿ ಸ್ಪಾರ್ಕ್ಲಿಂಗ್ ವಾಟರ್ ಬ್ರ್ಯಾಂಡ್ BON V!V ಸ್ಟೋ ಜೊತೆಗೆ ಯುನೈಟೆಡ್ ಸ್ಟೇಟ್ಸ್‌ನಾದ್ಯಂತ ಲಭ್ಯವಿರುವ ಹೊಸ ಪರಿಮಳವನ್ನು ಸೃಷ್ಟಿಸಿದರು. ಇಷ್ಟೊಂದು ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಪ್ರಿಯಾಂಕಾ.