Monday, March 17, 2025
Flats for sale
Homeಜಿಲ್ಲೆಮಂಗಳೂರು : ಸುಳ್ಯದ ಜಾತ್ರೆಯ ಸಂತೆಯಲ್ಲಿ ಮತ್ತೆ ಧರ್ಮ ದಂಗಲ್ ಆರಂಭ..!

ಮಂಗಳೂರು : ಸುಳ್ಯದ ಜಾತ್ರೆಯ ಸಂತೆಯಲ್ಲಿ ಮತ್ತೆ ಧರ್ಮ ದಂಗಲ್ ಆರಂಭ..!

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆ ಸುಳ್ಯದ ಶ್ರೀಚನ್ನಕೇಶವ ದೇವಸ್ಥಾನದಲ್ಲಿ ಜ.12 ರವರೆಗೆ ನಡೆಯಲಿರೋ ವರ್ಷಾವದಿ ಸಾಂಪ್ರದಾಯಿಕ ಜಾತ್ರೆಯಲ್ಲಿ ವ್ಯಾಪಾರ ನಡೆಸಲು ಹಿಂದೂ ಅಥವಾ ಮುಸ್ಲಿಂ ಎಂಬ ಭೇದಭಾವ ಇರಲಿಲ್ಲ .

ಪ್ರತಿ ವರ್ಷ, 100 ಕ್ಕೂ ಹೆಚ್ಚು ಮುಸ್ಲಿಂ ಮಾರಾಟಗಾರರು ಹಿಂದೂ ಸ್ಟಾಲ್ ಮಾಲೀಕರೊಂದಿಗೆ ಸ್ಟಾಲ್‌ಗಳನ್ನು ಸ್ಥಾಪಿಸುತಿದ್ದರು . ಆದರೆ ಈ ಬಾರಿ ಮುಸ್ಲಿಂ ಮಾರಾಟಗಾರರನ್ನು ನಿಷೇಧಿಸಲಾಗಿದೆ.

ಕಳೆದ ಕೆಲವು ಸಮಯದ ಹಿಂದೆ ದೇವಸ್ಥಾನದ ಜಾತ್ರೆಗಳಲ್ಲಿ ಮುಸ್ಲಿಮರಿಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿ ಕರ್ನಾಟಕದಾದ್ಯಂತ ಭಿತ್ತಿಪತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು .

ಜ.6 ಕ್ಕೆ ಸಂತೆಯ ಏಲಂ. ಜ.3 ರಂದು ನಡೆದ ಮೀಟಿಂಗ್ ನಲ್ಲಿ ಎಲ್ಲಾ ಧರ್ಮದವರಿಗೂ ಮುಕ್ತ ಅವಕಾಶ ನೀಡಬೇಕಂತ ತಿರ್ಮಾನಿಸಲಾಗಿತ್ತು .

ಹಿಂದು ಸಂಘಟನೆಗಳ ಒತ್ತಡದಿಂದ ನಿನ್ನೆ ಸಂಜೆ ದಿಡೀರ್ ತುರ್ತುಸಭೆ ಕರೆದು ಹಿಂದು ಧರ್ಮದವರಿಗೆ ಮಾತ್ರ ಅವಕಾಶ ಅಂತಾ ನಿರ್ಧರಿಸಲಾಗಿದೆ .

ಏಲಂ ನಲ್ಲಿ ಹಿಂದು ಧರ್ಮದವರು ಮಾತ್ರ ಭಾಗವಹಿಸಲು ಅವಕಾಶ ಕೋರಲಾಗಿದೆ, ಒಟ್ಟಿನಲ್ಲಿ ಹಲಾಲ್ ಜಟ್ಕಾ ಅಭಿಯಾನದ ಪ್ರಭಾವ ಜಾತ್ರೆಯ ಸಂತೆಯಲ್ಲಿ ಒಂದು ಧರ್ಮ ದಂಗಾಲ್ ಆಗಿ ಮಾರ್ಪಡಾಗುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular