ಮಂಗಳೂರು : ಭಾರತೀಯ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅವರು ಜನವರಿ 7ರ ಶನಿವಾರದಂದು ಬೆಂಗಳೂರಿನಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ.

ವಿಮಾನ ನಿಲ್ದಾಣದಿಂದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಕಾಸರಗೋಡಿಗೆ ತೆರಳುತ್ತಿದ್ದರು.
ಎಂ ಎಸ್ ಧೋನಿ ಅವರನ್ನು ಶಾಸಕ ಯು ಟಿ ಖಾದರ್ ಅವರ ಸಹೋದರ ಯು ಟಿ ಇಫ್ತಿಕರ್ ಅಲಿ ಸ್ವಾಗತಿಸಿದರು.
ಅವರು ಡಾ.ಶಾಜೀರ್ ಗಫಾರ್ ಅವರ ತಂದೆ ಪ್ರೊ.ಕೆ.ಕೆ ಅಬ್ದುಲ್ ಗಫಾರ್ ಅವರ ಆತ್ಮಕಥನ ಬಿಡುಗಡೆಗಾಗಿ ಬೇಕಲದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.