Sunday, March 16, 2025
Flats for sale
Homeಜಿಲ್ಲೆಮಂಗಳೂರು ; ಮಂಗಳೂರಿನಲ್ಲಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ !

ಮಂಗಳೂರು ; ಮಂಗಳೂರಿನಲ್ಲಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ !

ಮಂಗಳೂರು, : ತುಳಸಿಯ ಮಹತ್ವ ದಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ “ಶುದ್ಧ ತುಳಸಿ ಎಲೆಯ ಮಾಲೆಯನ್ನು ಧರಿಸಿದರೆ ಕೋವಿಡ್ ಸೋಂಕಿಗೆ ಒಳಗಾಗುವುದಿಲ್ಲ. ಇಂತಹ ಮಾಲೆಯು ಔಷಧೀಯ ಗುಣಗಳನ್ನು ಹೊಂದಿದೆ’ ಎಂದು ಸಂಸದೆ ಪ್ರಜ್ಞಾಸಿಂಗ್ ಠಾಕೂರ್ ಹೇಳಿದ್ದಾರೆ. ಅವರು ಶನಿವಾರ ಡಿಸೆಂಬರ್ 24 ರಂದು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದರು.

“ಕೋವಿಡ್ ಮತ್ತೆ ವಿದೇಶಗಳಲ್ಲಿ ಹರಡುತ್ತಿದೆ. ಬೂಸ್ಟರ್ ಡೋಜ್‌ಗಳನ್ನು ತೆಗೆದುಕೊಂಡು ಸಾಂಪ್ರದಾಯಿಕ ಔಷಧೀಯ ವಿಧಾನಗಳನ್ನು ಅಳವಡಿಸಿಕೊಳ್ಳಿ, ”ಎಂದು ಅವರು ಹೇಳಿದರು.

ಶಿವಮೊಗ್ಗದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಹೊರಟಿದ್ದ ಅವರು ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು.

ವಿಮಾನ ನಿಲ್ದಾಣದಲ್ಲಿ ಸುರತ್ಕಲ್ ಶಾಸಕ ಭರತ್ ಶೆಟ್ಟಿ ಹಾಗೂ ಹಿಂದೂ ಜಾಗರಣ ವೇದಿಕೆ ಸದಸ್ಯರು ಸ್ವಾಗತಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular