ವೈದ್ಯರೇ ಗಾಂಜಾವ್ಯಸನಿಗಳಾದರೆ ರೋಗಿಗಳ ಕಥೆ ಏನು ?
ಮಂಗಳೂರು ; ಮಂಗಳೂರಿನಲ್ಲಿ ವೈದ್ಯರು ಮತ್ತು ವೈದ್ಯರ ಗಾಂಜಾ ಲೋಕ ಪ್ರಕರಣದಲ್ಲಿ ಮತ್ತೆ ಒಂಭತ್ತು ಜನರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಇಬ್ಬರು ವೈದ್ಯರು ಸೇರಿ ಏಳು ಮಂದಿ ವೈದ್ಯ ವಿದ್ಯಾರ್ಥಿಗಳ ಬಂಧನವಾಗಿದೆ.
ಶ್ರೀನಿವಾಸ ಆಸ್ಪತ್ರೆಯ ಕರ್ನಾಟಕದ ವೈದ್ಯ ಸಿದ್ದಾರ್ಥ್ ಪವಸ್ಕರ್(29) ಮತ್ತು ದುರ್ಗಾ ಸಂಜೀವಿನಿ ಆಸ್ಪತ್ರೆಯ ಕರ್ನಾಟಕದ ವೈದ್ಯ ಡಾ.ಸುಧೀಂದ್ರ(34) ಹಾಗೂ ಮಂಗಳೂರಿನ ಕೆ.ಎಂ.ಸಿ ಮೆಡಿಕಲ್ ಕಾಲೇಜಿನ ಏಳು ಮಂದಿ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ
ಉತ್ತರ ಪ್ರದೇಶದ ವಿದುಶ್ ಕುಮಾರ್(27), ದೆಹಲಿಯ ಶರಣ್ಯ(23), ಕೇರಳದ ಸೂರ್ಯಜಿತ್ ದೇವ್(20), ಕೇರಳದ ಆಯೇಷಾ ಮಹಮ್ಮದ್(23), ತೆಲಂಗಾಣದ ಪ್ರಣಯ್ ನಟರಾಜ್(24), ತೆಲಂಗಾಣದ ಚೈತನ್ಯಾ(23), ಉತ್ತರ ಪ್ರದೇಶದ ಇಶ್ ಮಿದ್ದ(24) ಬಂಧಿತ ವಿದ್ಯಾರ್ಥಿಗಳು
ಏಳು ಮಂದಿ ವಿದ್ಯಾರ್ಥಿಗಳು ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಯ ವೈದ್ಯ ವಿದ್ಯಾರ್ಥಿಗಳೆಂದು ತಿಳಿಯಲಾಗಿದೆ.
ಈವರೆಗೆ ಡಾಕ್ಟರ್ಸ್ ಗಾಂಜಾ ಕೇಸ್ ನಲ್ಲಿ ಬಂಧಿತರ ಸಂಖ್ಯೆ 24ಕ್ಕೆ ಏರಿಕೆಯಾಗಿದೆ.