ಮಂಗಳೂರು : ನಗರದ ಹೊರವಲಯದ ಎಕ್ಕಾರು ಸಮೀಪದ ದಶಮಿ ಹೋಟೆಲ್ ಬಳಿ ಬುಲೆಟ್ ಬೈಕ್ ಹಾಗೂ ರಾಜಕುಮಾರ್ ಸರ್ವಿಸ್ ಬಸ್ ನಡುವೆ ಭೀಕರ ಅಪಘಾತ ಸಂಭವಿಸಿ ಬೈಕ್ ಸವಾರ ಮೃತಪಟ್ಟ ಘಟನೆ ಸೋಮವಾರ ನಡೆದಿದೆ.

ಮೃತರನ್ನು ಕಿನ್ನಿಗೋಳಿ ರಾಜರತ್ನಪುರ ಮೀನಾಬೆಟ್ಟು ನಿವಾಸಿ ಪಕೀರಬ್ಬ ಅಬ್ದುಲ್ ಖಾದರ್ ಪುತ್ರ ಮೊಹಮ್ಮದ್ ಬಷೀರ್ (52) ಎಂದು ತಿಳಿದುಬಂದಿದೆ.ಈತ ಪ್ರಸ್ತುತ ಬಜಪೆ ಪ್ಲಾಮಾ ರೆಸಿಡೆನ್ಸಿ ಯಲ್ಲಿ ನೆಲೆಸಿದ್ದರು.
ಅಪಘಾತದ ತೀವ್ರತೆಗೆ ಬೈಕ್ ಸವಾರನ ತಲೆಗೆ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದ್ದು ಈ ಕುರಿತು ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



