Thursday, March 27, 2025
Flats for sale
Homeಜಿಲ್ಲೆಮಂಗಳೂರು ; ಬಾಂಗ್ಲಾದೇಶದಲ್ಲಿ ನಡೆಯುವ ಹಿಂದೂಗಳ ಮೇಲೆ ಹಲ್ಲೆಯ ವಿರುದ್ಧ ಕ್ರಮ ,ವಕ್ಫ್ ಆಕ್ಟ್ ರದ್ದುಗೊಳಿಸುವಂತೆ...

ಮಂಗಳೂರು ; ಬಾಂಗ್ಲಾದೇಶದಲ್ಲಿ ನಡೆಯುವ ಹಿಂದೂಗಳ ಮೇಲೆ ಹಲ್ಲೆಯ ವಿರುದ್ಧ ಕ್ರಮ ,ವಕ್ಫ್ ಆಕ್ಟ್ ರದ್ದುಗೊಳಿಸುವಂತೆ ಅಖಿಲ ಭಾರತೀಯ ಸಂತ ಸಮಿತಿ ಕೇಂದ್ರ ಸರಕಾರಕ್ಕೆ ಆಗ್ರಹ..!

ಮಂಗಳೂರು ; ನಮ್ಮ ಭಾರತ ರಾಜ್ಯವು ವಿಶ್ವಗುರು ಎಂಬ ಸ್ಥಾನಕ್ಕೆ ತಲುಪುವಂತಹ ಪ್ರವರ್ತನೆ ಕಳೆದ ಹತ್ತು ವರ್ಷದಿಂದ ಸನಾತನ ಧರ್ಮಾಧಿಷ್ಟ ಮೋದಿಜಿ ಸರಕಾರದಲ್ಲಿ ಮಾಡುವಂತಹ ಈ ಸಂಧರ್ಭದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹಿಂದೂ ಸಂಸ್ಕೃತಿಯ ಹಾಗೂ ಹಿಂದೂ ಮಠ ಮಂದಿರಗಳು ನಡಿಸಿಕೊಂಡು ಬರುತ್ತಿದ್ದಾರೆ. ಇತ್ತೀಚಿಗೆ ಬಾಂಗ್ಲಾದೇಶದಲ್ಲಿ ಮುಸ್ಲಿಂ ತೀವ್ರವಾದಿಗಳು ಹಿಂದೂಗಳ ಮೇಲೆ ಶಕ್ತವಾದ ಹಲ್ಲೆ ನಡೆಸುತ್ತಿದ್ದಾರೆ. ಚಿನ್ಮಯ ಕೃಷ್ಣ ದಾಸ್ ಸ್ವಾಮೀಜಿಯವರ ನ್ನು ಬಂಧನ ಕ್ಕೊಳಪಡಿಸಿದ್ದಾರೆ. ಬಾಂಗ್ಲಾದೇಶದಲ್ಲಿ ನಡೆಯುವ ಅಲ್ಪ ಸಂಖ್ಯಾತರಾದ ಹಿಂದೂಗಳ ವಿರುದ್ಧ ನಿರಂತರವಾಗಿ ಹಲ್ಲೆಗಳು ನಡೆಯುತ್ತಿದೆ. ಭಾರತ ಸರಕಾರ ಬಾಂಗ್ಲಾದೇಶಕ್ಕೆ ಎಚ್ಚರಿಕೆ ನೀಡಬೇಕು ಇಲ್ಲವಾದಲ್ಲಿ ಸೈನಿಕ ಅಕ್ರಮಣ ನಡೆಸಿ ಹಿಂದೂಗಳಿಗೆ ರಕ್ಷಣೆವನೀಡಿ ಬಾಂಗ್ಲಾದೇಶ ವನ್ನು ಭಾರತಕ್ಕೆ ಲಯಗೊಳಿಸಬೇಕೆಂದು ಅಖಿಲ ಭಾರತ ಸಂತ ಸಮಿತಿ ಕರ್ನಾಟಕ ಕಮಿಟಿಯ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಸರಕಾರಕ್ಕೆ ಒತ್ತಾಯಿಸಿದ್ದಾರೆ.

ವಕ್ಘ್ ಆಕ್ಟ್ ನಿಂದ ಹಲವು ಸ್ಥಳಗಳು ಮಠ ಹಾಗೂ ರೈತರ ಆಸ್ತಿಯು ದೋಚುವ ಪರಿಸ್ಥಿತಿ ಈ ಆಕ್ಟಿನ ಪರಿಣಾಮ ಜನ ಮನದಲ್ಲಿ ಆತಂಕದ ಪರಿಸ್ಥಿತಿ ತುಂಬಾ ನಷ್ಟ ವನ್ನುಂಟು ಮಾಡುತ್ತಿದೆ .ಕಾಲಂತರದಿಂದ ತಮ್ಮ ಕೈವಶವಿದ್ದ ಆಸ್ತಿ ಕಳೆದುಕೊಳ್ಳುವಂತಹ ಸ್ಥಿತಿ ಆದರಿಂದ ಇಂತಹ ಆಕ್ಟನ್ನು ಶೀಘ್ರ ರದ್ದುಗೊಳಿಸಬೇಕೆಂದು ಅಖಿಲ ಭಾರತೀಯ ಸಂತ ಸಮಿತಿ ಕರ್ನಾಟಕ ರಾಜ್ಯ ಅಧ್ಯಕ್ಷ ಮಹಾಮಂಡಲೇಶ್ವರ ವಿದ್ಯಾನಂದ ಸರಸ್ವತಿ ಸುದ್ದಿ ಗೋಷ್ಟಿ ಯಲ್ಲಿ ತಿಳಿಸಿದ್ದಾರೆ.

ಬಾಂಗ್ಲಾದೇಶದಲ್ಲಿ ಹಿಂದೂಗಳಿಗೆ ಪ್ರತ್ಯೇಕ ಭಾಗ ಮಾಡಲಿಎಂದು ಸಂತರು ಅಗ್ರಹಿಸಿದ್ದಾರೆ.ಈ ರೀತಿ ಹಿಂದುಗಳಿಗೆ ದೌರ್ಜನ್ಯ ನಡೆದರೆ ದೇಶಾದ್ಯಂತ ಸಮಾವೇಶ ದ ಜೊತೆಗೆ ಉಗ್ರ ಹೋರಾಟ ನಡೆಯಲಿದೆ,ಎಲ್ಲಾ ಮಠ ಮಂದಿರಗಳಿಗೆ ಬೇಟಿ ನೀಡಿ ಉಗ್ರ ಹೋರಾಟಕ್ಕೆ ಅಯೋಜನೆ ಮಾಡಿತ್ತಿದ್ದೆದ್ದು ಹಿಂದೂಗಳನ್ನು ಹಿಬ್ಬಾಗ ಮಾಡಿದ್ದು ಈ ಹಿಂದಿನ ಸರಕಾರ ಆದರಿಂದ ವಕ್ಘ್ ಬೋರ್ಡ್ ರದ್ದುಗೊಳಿಸಿ ಏಕರೂಪದ ಕಾನೂನು ಜಾರಿಗೊಳಿಸಲಿ ಸಂತ ಸಮಾಜ ಅಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಓಂ ಶ್ರೀ ಮಠದ ಮಾತಾಶ್ರೀ ಶಿವಜ್ಞಾಮಯೀ ಸರಸ್ವತಿ,ಅಖಿಲ ಭಾರತೀಯ ಸಂತ ಸಮಿತಿ ಕೋಶಾಧಿಕಾರಿ ಶ್ರೀ ಮಹಾಬಲೇಶ್ವರ ಸರಸ್ವತಿ ಸ್ವಾಮೀಜಿ,ಮುಖ್ಯ ಕಾರ್ಯದರ್ಶಿ ಶ್ರೀ ರಾಜೇಶ್ ನಾಥ್ ಗುರೂಜಿ,ಪ್ರಾಂತ ಸಂಘಟನಾ ಕಾರ್ಯದರ್ಶಿ ಶ್ರೀ ನಿಶ್ಚಲ ನಿರಂಜನ ಕೇಂದ್ರ ಸ್ವಾಮೀಜಿ,ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಶ್ರೀ ಮೋಹನದಾಸ ಸ್ವಾಮೀಜಿ,ಕಾಸರಗೋಡು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ತೀರ್ಥ ಸ್ವಾಮೀಜಿ,ಮಂಗಳೂರು ಚಿತ್ರಾಪುರ ಮಠದ ವಿಧ್ಯೆನ್ದ್ರ ತೀರ್ಥ ಪಾದಂಗಳರವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular