Friday, March 28, 2025
Flats for sale
Homeದೇಶಚಂಡೀಗಡ ; ರಿಷಬ್ ಪಂತ್ ರವರನ್ನು ರಕ್ಷಿಸಿದ ಕಂಡಕ್ಟರ್ ,ಚಾಲಕನಿಗೆ ಹರಿಯಾಣ ಸಾರಿಗೆ ಇಲಾಖೆಯಿಂದ ಸನ್ಮಾನ.

ಚಂಡೀಗಡ ; ರಿಷಬ್ ಪಂತ್ ರವರನ್ನು ರಕ್ಷಿಸಿದ ಕಂಡಕ್ಟರ್ ,ಚಾಲಕನಿಗೆ ಹರಿಯಾಣ ಸಾರಿಗೆ ಇಲಾಖೆಯಿಂದ ಸನ್ಮಾನ.

ಚಂಡೀಗಢ: ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡ ನಂತರ ಕ್ರಿಕೆಟಿಗ ರಿಷಬ್ ಪಂತ್ ಅವರು ಐಷಾರಾಮಿ ಕಾರಿನಿಂದ ಹೊರಬರಲು ಸಹಾಯ ಮಾಡಿದ ತನ್ನ ಚಾಲಕ ಸುಶೀಲ್ ಕುಮಾರ್ ಮತ್ತು ಕಂಡಕ್ಟರ್ ಪರಮ್‌ಜೀತ್ ಅವರನ್ನು ಹರಿಯಾಣ ಸಾರಿಗೆ ಇಲಾಖೆ ಶುಕ್ರವಾರ ಗೌರವಿಸಿದೆ.

ಮೂಲಗಳ ಪ್ರಕಾರ, ರಾಜ್ಯ ಸರ್ಕಾರ ಕೂಡ ಇಬ್ಬರನ್ನು ಸನ್ಮಾನಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಪಾಣಿಪತ್‌ಗೆ ಹಿಂದಿರುಗಿದಾಗ ನಾವು ಅವರಿಗೆ ನಮ್ಮ ಕಚೇರಿಯಲ್ಲಿ ಪ್ರಶಂಸಾ ಪತ್ರ ಮತ್ತು ಶೀಲ್ಡ್ ಅನ್ನು ನೀಡಿದ್ದೇವೆ ಎಂದು ಹರಿಯಾಣ ಸಾರಿಗೆ ಇಲಾಖೆಯ ಪಾಣಿಪತ್ ಡಿಪೋ ಜನರಲ್ ಮ್ಯಾನೇಜರ್ ಕುಲದೀಪ್ ಜಾಂಗ್ರಾ ದೂರವಾಣಿಯಲ್ಲಿ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆಯುತ್ತಿದ್ದನ್ನು ಕಂಡ ಸುಶೀಲ್ ಕುಮಾರ್, ಬಸ್ ನಿಲ್ಲಿಸಿ ತಮ್ಮ ಕಂಡಕ್ಟರ್ ಜೊತೆಗೆ ಸಹಾಯಕ್ಕೆ ಧಾವಿಸಿದ್ದಾರೆ. ಚಾಲಕ ಮತ್ತು ಕಂಡಕ್ಟರ್ ಇಬ್ಬರೂ ಮಾನವೀಯತೆ ಮೆರೆದಿದ್ದು, ಪ್ರತಿಯೊಬ್ಬರಿಗೆ ಉದಾಹರಣೆಯಾಗಿದ್ದಾರೆ ಎಂದು ಜಾಂಗ್ರಾ ಹೇಳಿದರು.
ಪಾಣಿಪತ್‌ಗೆ ತೆರಳುತ್ತಿದ್ದ ಬಸ್ ಹರಿದ್ವಾರದಿಂದ ಮುಂಜಾನೆ 4:25 ಕ್ಕೆ ಹೊರಟು ಸುಮಾರು ಒಂದು ಗಂಟೆಯ ನಂತರ ಅಪಘಾತ ಸ್ಥಳಕ್ಕೆ ತಲುಪಿದೆ. ಪಂತ್ ಅವರನ್ನು ಕಾರಿನಿಂದ ಹೊರತೆಗೆದ ಕೆಲವೇ ನಿಮಿಷಗಳಲ್ಲಿ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಚಾಲಕ ಮತ್ತು ಕಂಡಕ್ಟರ್ ನಮಗೆ ತಿಳಿಸಿದರು.

ಹರಿಯಾಣ ಸಾರಿಗೆ ಸಚಿವ ಮೂಲ ಚಾಂದ್ ಶರ್ಮಾ ಮಾತನಾಡಿ, ಸುಶೀಲ್ ಕುಮಾರ್ ಮತ್ತು ಪರಮ್‌ಜೀತ್ ಇಬ್ಬರೂ ಮಾನವೀಯತೆ ಮೆರೆದಿದ್ದಾರೆ ಮತ್ತು ತಕ್ಷಣವೇ ಪಂತ್‌ ನೆರವಿಗೆ ಧಾವಿಸಿದ್ದಾರೆ ಎಂದರು.

ಭಾರತದ ಸ್ಟಾರ್ ಕ್ರಿಕೆಟಿಗ 25 ವರ್ಷದ ರಿಷಬ್ ಪಂತ್ ಶುಕ್ರವಾರ ಮುಂಜಾನೆ ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿದ್ದು, ತಮ್ಮ ಐಷಾರಾಮಿ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಾಗ ಅವರು ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ.

ತನ್ನ ತಾಯಿಗೆ ಸರ್ಪೈಸ್ ನೀಡಲು ತನ್ನ ತವರೂರಾದ ರೂರ್ಕಿಗೆ ತೆರಳುತ್ತಿದ್ದಾಗ, ಉತ್ತರಾಖಂಡದ ಹರಿದ್ವಾರ ಜಿಲ್ಲೆಯ ಮಂಗಳೌರ್‌ನಲ್ಲಿ ನಡೆದ ಅಪಘಾತದ ನಂತರ ತಲೆ, ಬೆನ್ನು ಮತ್ತು ಪಾದಗಳಿಗೆ ಗಾಯಗಳಾಗಿವೆ. ಆದರೆ, ಅವರು ಸ್ಥಿರವಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಸಂಪೂರ್ಣ ಜಖಂಗೊಂಡಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular