ಕುಂದಾಪುರ : ಕತಾರ್‌ನಲ್ಲಿ ಕೆಲಸ ಮಾಡುತ್ತಿದ್ದ ತಾಲೂಕಿನ ಕೋಟ ಸಮೀಪದ ಪಾಕುಕರೆ ಮೂಲದ ಮೊಹಮ್ಮದ್ (45) ಗುರುವಾರ ಮಿದುಳು ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ.
ಮೊಹಮ್ಮದ್ ಕಳೆದ 14 ವರ್ಷಗಳಿಂದ ಕತಾರ್‌ನ ಸನಾಯಾದಲ್ಲಿ ಕೆಲಸ ಮಾಡುತ್ತಿದ್ದು. ನಾಲ್ಕು ದಿನಗಳ ಹಿಂದೆ ಕರ್ತವ್ಯದಲ್ಲಿದ್ದಾಗ ಕುಸಿದು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದರು. ಗುರುವಾರ ಅವರು ಸಾವಿಗೀಡಾಗಿದ್ದಾರೆ.
ಮಹಮ್ಮದ್ ಅವರು ತಾಯಿ ಮತ್ತು ಪತ್ನಿಯನ್ನು ಅಗಲಿದ್ದಾರೆ. ಕೋಟತಟ್ಟು ಪಡುಕರೆ ಹಿದಾಯುತುಲ್ ಇಸ್ಲಾಂ ಮದ್ರಸದ ಕಾರ್ಯದರ್ಶಿ ಹಾಗೂ ಕೆ.ಸಿ.ಎಫ್ ಕತಾರ್ ಸನಯ ಘಟಕದ ಅಝೀಝೆಯ ವಲಯದ ಅಧ್ಯಕ್ಷರಾಗಿದ್ದರು.