ಬೆಂಗಳೂರು :ಕಾಂತಾರ ಯಶಸ್ವಿ ಹಾದಿಗೆ ಮತ್ತೊಂದು ಪ್ರಶ್ಶಸ್ತಿ ತಲುಪಿದೆ ಪ್ರತಿ ವರ್ಷದಂತೆ ಈ ವರ್ಷವೂ IMDbಯ ಟಾಪ್ 10ರಲ್ಲಿ ಸ್ಥಾನ ಪಡೆದ ಸಿನಿಮಾಗಳಿಗೆ IMDb ವಿಶೇಷ ಸ್ಮರಣಿಕೆಯನ್ನು ಕಳುಹಿಸಿದೆ.
ರಕ್ಷಿತ್ ಶೆಟ್ಟಿ ನಟಿಸಿದ 777 ಚಾರ್ಲಿ ಸಿನಿಮಾ ಟಾಪ್ 10ರಲ್ಲಿ ಸ್ಥಾನ ಪಡೆದಿದ್ದು, ಶೀರ್ಷಿಕೆಯ ಅಚ್ಚಿರುವ ಸ್ಮರಣಿಕೆಯನ್ನು ಪರಮ್‌ವಾ ಸ್ಟುಡಿಯೋಸ್‌ಗೆ ಕಳುಹಿಸಿಕೊಟ್ಟಿದೆ. ನಿರ್ದೇಶಕ ಕಿರಣ್ ರಾಜ್ ಸ್ಮರಣಿಕೆಯೊಂದಿಗೆ.
ನಿರ್ಮಾಪಕ ವಿಜಯ್ ಕಿರಗಂದೂರು ಅವರಿಗೆ ಡಬಲ್ ಧಮಾಕಾ. ಕೆಜಿಎಫ್ ಮತ್ತು ಕಾಂತಾರ ಸಿನಿಮಾ ನಿರ್ಮಾಣ ಮಾಡಿ, ಆ ಎರಡು ಸಿನಿಮಾಗಳು IMDbಯ ಟಾಪ್ 10ರಲ್ಲಿ ಸ್ಥಾನಪಡೆದಿವೆ.
ಎಲ್ಲೆಡೆ ಸದ್ದು ಮಾಡಿದ ಕಾಂತಾರ ಸಿನಿಮಾ, ದಾಖಲೆಗಳ ವಿಚಾರದಲ್ಲಿಯೂ ಹೊಸ ಇತಿಹಾಸ ಬರೆದಿದೆ. ಈ ಸಿನಿಮಾ IMDb ರ್ಯಾಂಕಿಂಗ್‌ನಲ್ಲಿಯೂ ಟಾಪ್ 10ರಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ.