Monday, March 17, 2025
Flats for sale
Homeಕ್ರೈಂಬೆಂಗಳೂರು: 10 ವರ್ಷದ ಮಗಳನ್ನು ಕೊಂದು ತಾಯಿ ಆತ್ಮಹತ್ಯೆ ಯತ್ನ.

ಬೆಂಗಳೂರು: 10 ವರ್ಷದ ಮಗಳನ್ನು ಕೊಂದು ತಾಯಿ ಆತ್ಮಹತ್ಯೆ ಯತ್ನ.

ಬೆಂಗಳೂರು: 10 ವರ್ಷದ ಮಗಳನ್ನು ಕೊಂದು ತಾಯಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬ್ಯಾಡರಹಳ್ಳಿಯಲ್ಲಿ ನಡೆದಿದೆ.

ಪ್ರಿಯಾಂಕಾ (10) ಕೊಲೆಯಾದ ಬಾಲಕಿ ಅಂಗವೈಕಲ್ಯತೆಯಿಂದ ಬಳಲುತಿದ್ದಳು. ಆತ್ಮಹತ್ಯೆಗೆ ಯತ್ನಿಸಿರುವ ತಾಯಿ ಸುಮಾ (28) ಅವರನ್ನು ಸಹೋದರಿ ಮತ್ತು ನೆರೆಹೊರೆಯವರು ರಕ್ಷಿಸಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸುಂಕದಕಟ್ಟೆ ಪ್ರಸನ್ನ ಬಡಾವಣೆಯ ಸುಮಾ, ನಂಜಪ್ಪ ಅವರನ್ನು ಮದುವೆಯಾಗಿದ್ದರು. ದಂಪತಿಗೆ ಪ್ರಿಯಾಂಕಾ ಸೇರಿ ಇಬ್ಬರು ಮಕ್ಕಳಿದ್ದರು. ಎರಡು ವರ್ಷದ ಹಿಂದೆ ಮಗ ತೀರಿಕೊಂಡಿದ್ದ. ನಂತರ, ಪತಿ ಸಹ ಸಾವನ್ನಪ್ಪಿದ್ದರು

ಮಗಳು ಪ್ರಿಯಾಂಕಾಗೆ ಅಂಗವೈಕಲ್ಯವಿತ್ತು, ಹೀಗಾಗಿ ಆಕೆಯನ್ನು ಯಾರಾದರೂ ಒಬ್ಬರು ನೋಡಿಕೊಳ್ಳಬೇಕಾಗಿತ್ತು.ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಸುಮಾ, ಅದರಿಂದ ಬಂದ ವೇತನದಲ್ಲಿ ಜೀವನ ನಿರ್ವಹಣೆ ಮಾಡುತ್ತಿದ್ದರು. ಇದರಿಂದ ಸುಮಾ ಕೆಲಸಕ್ಕೆ ಹೋಗುವುದು ಕಷ್ಟವಾಗಿತ್ತು ಎನ್ನಲಾಗಿದೆ.

ಸಂಬಂಧಿಕರು ಹಾಗೂ ಸ್ಥಳೀಯರ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸುಮಾ ಅವರು ಸದ್ಯ ಹೇಳಿಕೆ ನೀಡುವ ಸ್ಥಿತಿಯಲ್ಲಿಲ್ಲ. ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ನಂತರ ವೈದ್ಯರ ಸಲಹೆ ಪಡೆದು ಹೇಳಿಕೆ ಪಡೆಯಲಾಗುವುದು’ ಎಂದು ತಿಳಿಸಿವೆ.

RELATED ARTICLES

LEAVE A REPLY

Please enter your comment!
Please enter your name here

Most Popular