Wednesday, May 13, 2026
Flats for sale
Homeಕ್ರೀಡೆಮಂಗಳೂರು : ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ ಚಿಂತನ್ ಎಸ್. ಶೆಟ್ಟಿ ಸಾಧನೆ,ನಾಲ್ಕು ಪದಕಗಳೊಂದಿಗೆ ರಾಷ್ಟ್ರೀಯ...

ಮಂಗಳೂರು : ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ ಚಿಂತನ್ ಎಸ್. ಶೆಟ್ಟಿ ಸಾಧನೆ,ನಾಲ್ಕು ಪದಕಗಳೊಂದಿಗೆ ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗೆ ಆಯ್ಕೆ.

ಮಂಗಳೂರು : ಎನ್‌ಆರ್‌ಜೆ ಕರ್ನಾಟಕ ಸೀನಿಯರ್ ರಾಜ್ಯ ಮಟ್ಟದ ಈಜು ಸ್ಪರ್ಧೆ–2026ರಲ್ಲಿ ಮಂಗಳೂರಿನ ಪ್ರತಿಭಾವಂತ ಈಜುಗಾರ ಚಿಂತನ್ ಎಸ್. ಶೆಟ್ಟಿ ಅತ್ಯುತ್ತಮ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ.

ಚಿಂತನ್ 50 ಮೀಟರ್ ಹಾಗೂ 100 ಮೀಟರ್ ಬಟರ್‌ಫ್ಲೈ ವಿಭಾಗಗಳಲ್ಲಿ ಚಿನ್ನದ ಪದಕ ಗೆದ್ದಿದ್ದು, 200 ಮೀಟರ್ ಇಂಡಿವಿಜುವಲ್ ಮೆಡ್ಲೇನಲ್ಲಿ ಬೆಳ್ಳಿ ಹಾಗೂ 100 ಮೀಟರ್ ಫ್ರೀಸ್ಟೈಲ್‌ನಲ್ಲಿ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ.

ಈ ಸಾಧನೆಯ ಹಿನ್ನೆಲೆಯಲ್ಲಿ ಅವರು ಜೂನ್ 16ರಿಂದ ಗುಜರಾತ್‌ನ ಅಹಮದಾಬಾದ್‌ನ ವೀರ್ ಸಾವರ್ಕರ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ನಡೆಯಲಿರುವ 79ನೇ ಸೀನಿಯರ್ ನ್ಯಾಷನಲ್ ಅಕ್ವಾಟಿಕ್ ಚಾಂಪಿಯನ್‌ಶಿಪ್–2026ರಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.

ಚಿಂತನ್ ಪ್ರಸ್ತುತ ಬೆಂಗಳೂರಿನ ಲಕ್ಷ್ಯನ್ ಅಕಾಡೆಮಿ ಆಫ್ ಸ್ಪೋರ್ಟ್ಸ್‌ನಲ್ಲಿ ತರಬೇತಿ ಪಡೆಯುತ್ತಿದ್ದು, ಮಂಗಳೂರಿನ ಬಂಟ್ಸ್ ಹಾಸ್ಟೆಲ್‌ನ ಶ್ರೀ ರಾಮಕೃಷ್ಣ ಕಾಲೇಜಿನ ವಿದ್ಯಾರ್ಥಿಯಾಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular