ಬೆಂಗಳೂರು: ಬೆಂಗಳೂರಿನಲ್ಲಿ ದಿನ ದಿನ ರೋಲ್ ಕಾಲ್ ಅಫ್ತ ವಸೂಲ್ ದಾಂಧಲೆ ಗಳು ಹೆಚ್ಚುತ್ತಲೇ ಇದೆ ಪುಡಿ ರೌಡಿಗಳ ಅಟ್ಟಹಾಸ ಮತ್ತೆ ಮುಂದುವರೆದಿದ್ದು, ಹಫ್ತಾ ನೀಡದ ಕಾರಣ ಬೆಳ್ತಂಗಡಿ ಮೂಲದ ಮೀನಿನ ವ್ಯಾಪಾರಿಯ ಮೇಲೆ ಲಾಂಗ್ ಬೀಸಿ ದಾಂಧಲೆ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ .
ಬೆಂಗಳೂರಿನ ಬಾಣಸವಾಡಿಯ ಜೈಭಾರತ್ ನಗರದಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು ,ವ್ಯಕ್ತಿ ಹಣ ಕೊಡದಕ್ಕೆ ತಲವಾರು ಬೀಸಿದ ವಿಡಿಯೋ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ
ಪುಡಿರೌಡಿ ಸುರೇಶ್ ಬೆಳ್ತಂಗಡಿಯ ಮನೋಜ್ ಎಂಬವರ ಮೀನಿನ ಅಂಗಡಿಗೆ ತೆರಳಿ ಹಫ್ತಾ ಕೇಳಿದ್ದಾನೆ. ಳಿಕ ರಾತ್ರಿಯ ವೇಳೆ ಬಂದು ಲಾಂಗ್ ಹಿಡಿದುಕೊಂಡು ಅಂಗಡಿ ಮಾಲಕ ಮನೋಜ್ ಮೇಲೆ ಮಾರಕಾಸ್ತ್ರವನ್ನು ಬೀಸಿ ರಂಪಾಟ ನಡೆಸಿದ್ದಾನೆ.
ಈ ಘಟನೆಯ ದೃಶ್ಯಗಳು ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಬಾಣಸವಾಡಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.