ಬೆಂಗಳೂರು : ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್ ಸಿನಿಮಾ ಅಂತೂ ಬಿಡುಗಡೆ ದಿನಾಂಕ ಘೋಷಿಸಿದೆ. ಈ ಹಿಂದೆ ಅನೇಕ ಬಾರಿ ಬಿಡುಗಡೆಯನ್ನು ಅಭಿಮಾನಿಗಳು ನಿರೀಕ್ಷಿಸಿದ್ದರಾದರೂ ಯಾಕೋ ಕಾಲ ಕೂಡಿ ಬಂದಿರಲಿಲ್ಲ.
ಖುದ್ದು ಸುದೀಪ್ ಸಹ ಇನ್ನೇನು ಬಂದೇಬಿಡುತ್ತೆ’ ಎAದಿದ್ದರೂ. ಅದಾಗಿ ಮೂರು ತಿಂಗಳ ನಂತರ ಡೇಟ್ ಅನೌನ್ಸ್ ಮಾಡಲಾಗಿದೆ. ಅಂದಹಾಗೆ ಇದೇ ಡಿಸೆಂಬರ್ 25ರಂದು
ಮ್ಯಾಕ್ಸ್’ ಬಿಡುಗಡೆ ಎಂದು ಚಿತ್ರತಂಡ ಘೋಷಿಸಿದೆ. ಈ ಮೂಲಕ ಅಭಿಮಾನಿಗಳ ಬಹುಕಾಲದ ಬೇಡಿಕೆಯನ್ನು ಒಂದುಮಟ್ಟಕ್ಕೆ ಪೂರೈಸಿದೆ ಚಿತ್ರತಂಡ. ಮ್ಯಾಕ್ಸ್ ಚಿತ್ರಕ್ಕೆ ವಿಜಯ್ ಕಾರ್ತಿಕೇಯ ಆ್ಯಕ್ಷನ್ ಕಟ್ ಹೇಳಿದ್ದಾರೆ.
ಸುದೀಪ್, ವರಲಕ್ಷ್ಮಿ ಶರತ್‌ಕುಮಾರ್, ಸಂಯುಕ್ತ ಹೊರನಾಡು, ಪ್ರಮೋದ್ ಶೆಟ್ಟಿ ಮುಂತಾದವರು ಈ ಚಿತ್ರದಲ್ಲಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆಯಿರುವ ಈ ಚಿತ್ರವನ್ನು ಕಲೈಪುಲಿ ಎಸ್ ತನು ವಿ.ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಹಾಗೂ ಸುದೀಪ್ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಜಂಟಿಯಾಗಿ ನಿರ್ಮಿಸಿದ್ದಾರೆ.