ಕ್ಯಾನ್‌ಬೆರಾ : ಸಧ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ ಕ್ರಿಕೆಟ್ ತಂಡ, ಗುರುವಾರ ಇಲ್ಲಿರುವ ಸಂಸತ್ ಭವನದಲ್ಲಿ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರನ್ನು ಬೇಟಿ ಮಾಡಿದರು.
ಟೀಮ್ ಇಂಡಿಯಾ ಆಟಗಾರರನ್ನು ಭೇಟಿ ಮಾಡಿದ್ದಾರೆ. ಈ ಭೇಟಿ ನಂತರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಟೀಮ್ ಇಂಡಿಯಾದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಜಸ್‌ಪ್ರೀತ್ ಬುಮ್ರಾ ಅವರೊಂದಿಗೆ ಆಂಥೋನಿ ಅಲ್ಬನೀಸ್ ಮಾತುಕತೆ ನಡೆಸಿದ್ದಾರೆ.
ಈ ವೇಳೆ ಪರ್ತ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಸಿ ಗಮನ ಸೆಳೆದ ಹಿರಿಯ ಕ್ರಿಕೆಟ್ ಪಟು ವಿರಾಟ್ ಕೊಹ್ಲಿ ಅವರನ್ನು ಆಂಥೋನಿ ಅಲ್ಬನೀಸ್ ಹೊಗಳಿದ್ದಾರೆ.