ಮಂಗಳೂರು : ಪಾಲೆಮಾರ್ ಇವೆಂಟ್ಸ್ ಸೊಲ್ಯೂಷನ್ ವತಿಯಿಂದ ಮಂಗಳೂರಿನಲ್ಲಿ ಮೊದಲ ಬಾರಿಗೆ ವಿಶ್ವ ದಾಖಲೆ ಪುರಸ್ಕೃತ ಖ್ಯಾತ ಮೇಕಪ್ ತಜ್ಞೆ ಡಾ. ದುರ್ಗಾ ವೆಂಕಟೇಶ್ ಅವರ “ಸ್ಟೀಮ್-ಪ್ರೂಫ್, ಡ್ರ್ಯಾಗ್-ಪ್ರೂಫ್” ಪ್ರೊಫೆಷನಲ್ ಮೇಕಪ್ ಮಾಸ್ಟರ್‌ಕ್ಲಾಸ್ ಪಾಲೆಮಾರ್ ಗಾರ್ಡನ್‌ನಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಉದ್ಘಾಟಿಸಿ, ಇಂತಹ ತರಬೇತಿ ಕಾರ್ಯಕ್ರಮಗಳು ಮೇಕಪ್ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವವರಿಗೆ ವೃತ್ತಿಪರ ಕೌಶಲ್ಯ ಬೆಳೆಸಲು ಸಹಕಾರಿಯಾಗಲಿದ್ದು, ಮುಂದೆಯೂ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಯೋಜನೆ ಇದೆ ಎಂದು ತಿಳಿಸಿದರು.
ಮೇಕಪ್ ತಜ್ಞೆ ಡಾ. ದುರ್ಗಾ ವೆಂಕಟೇಶ್ ಮಾತನಾಡಿ, ಮಂಗಳೂರಿನಲ್ಲಿ ಮೊದಲ ಬಾರಿಗೆ ತರಬೇತಿ ನೀಡುತ್ತಿರುವ ಸಂತಸ ವ್ಯಕ್ತಪಡಿಸಿದರು. ತಮ್ಮ ಅನುಭವವನ್ನು ಹಂಚಿಕೊಳ್ಳುವ ಮೂಲಕ ಹೊಸ ತಜ್ಞರು ವೃತ್ತಿಪರವಾಗಿ ಬೆಳೆಯಬೇಕು ಎಂಬುದು ತಮ್ಮ ಉದ್ದೇಶ ಎಂದು ಹೇಳಿದರು.
ಎಂಟು ಬಾರಿ ವಿಶ್ವ ದಾಖಲೆ ನಿರ್ಮಿಸಿರುವ ಹಾಗೂ ಗೌರವ ಡಾಕ್ಟರೇಟ್ ಪಡೆದಿರುವ ಡಾ. ದುರ್ಗಾ ವೆಂಕಟೇಶ್, ಮಳೆ, ಬೆವರು ಹಾಗೂ ಆವಿಯಿಂದಲೂ ಹಾಳಾಗದ ವೃತ್ತಿಪರ ಮೇಕಪ್ ತಂತ್ರಗಳ ಕುರಿತು ವಿಶೇಷ ತರಬೇತಿ ನೀಡಿದರು.
ಒಂದು ದಿನದ ಈ ಮಾಸ್ಟರ್‌ಕ್ಲಾಸ್‌ನಲ್ಲಿ 400ಕ್ಕೂ ಹೆಚ್ಚು ಮಂದಿ ಭಾಗವಹಿಸಿ ವೃತ್ತಿಪರ ಮೇಕಪ್ ತಂತ್ರಗಳ ಕುರಿತು ತರಬೇತಿ ಪಡೆದರು. ಕಾರ್ಯಕ್ರಮದ ಕೊನೆಯಲ್ಲಿ ಭಾಗವಹಿಸಿದ್ದವರ ಪ್ರಶ್ನೆಗಳಿಗೆ ಉತ್ತರಿಸಿ ಅವರ ಸಂದೇಹಗಳನ್ನು ನಿವಾರಿಸಿದರು. ಕಾರ್ಯಕ್ರಮವನ್ನು ಪಾಲೆಮಾರ್ ಇವೆಂಟ್ಸ್ ಸೊಲ್ಯೂಷನ್ ವತಿಯಿಂದ ಲಾವಣ್ಯ ಹಾಗೂ ರವಿರಾಜ್ ಸಂಯೋಜಿಸಿದ್ದರು.


