Wednesday, June 24, 2026
Flats for sale
HomeUncategorizedಮಂಗಳೂರು : ಕುಕ್ಕರ್ ಬಾಂಬ್ ಸ್ಫೋಟದ ಅಪರಾಧಿಗೆ ಶಿಕ್ಷೆ : ಕಂಕನಾಡಿ ಬ್ರಹ್ಮ ಬೈದರ್ಕಳ...

ಮಂಗಳೂರು : ಕುಕ್ಕರ್ ಬಾಂಬ್ ಸ್ಫೋಟದ ಅಪರಾಧಿಗೆ ಶಿಕ್ಷೆ : ಕಂಕನಾಡಿ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದಲ್ಲಿ ವಿಶ್ವ ಹಿಂದೂ ಪರಿಷತ್ ವತಿಯಿಂದ ವಿಶೇಷ ಪೂಜೆ.

ಮಂಗಳೂರು : ಕುಕ್ಕರ್ ಬಾಂಬ್ ಸ್ಫೋಟದ ಅಪರಾಧಿಗೆ ಶಿಕ್ಷೆ ಪ್ರಕಟ ಹಿನ್ನೆಲೆ ಮಂಗಳೂರಿನ ಕಂಕನಾಡಿ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದಲ್ಲಿ ವಿಶ್ವ ಹಿಂದೂ ಪರಿಷತ್ ನಿಂದ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಲಾಯಿತು.

NIA ವಿಶೇಷ ಕೋರ್ಟ್ ನೀಡಿದ ತೀರ್ಪನ್ನು ವಿಶ್ವ ಹಿಂದೂ ಪರಿಷತ್ ಸ್ವಾಗತಿಸಿದ್ದು ಅಪರಾಧಿ ಮಹಮ್ಮದ್ ಶಾರೀಕ್ ಗೆ ಗಲ್ಲು ಶಿಕ್ಷೆ ನೀಡಬೇಕೆಂದು ಪ್ರಾರ್ಥನೆ ಮೂಲಕ ಬೇಡಿಕೊಂಡಿದ್ದಾರೆ. ಘಟನೆಯ ಸಂದರ್ಭ ಭಾರಿ‌ ದೊಡ್ಡ ಗಂಡಾಂತರ ನಡೆಯುತ್ತಿದ್ದು ದೈವಗಳ ಕಾರಣಿಕ ಶಕ್ತಿಯಿಂದ ತಪ್ಪಿದೆ ಎಂದು ಈ ಸಂದರ್ಭದಲ್ಲಿ ಹೇಳಿದ್ದಾರೆ. ಇದೀಗ ದೈವಗಳ ಕಾರಣಿಕ ಶಕ್ತಿಯಿಂದಲೇ ಅಪರಾಧ ಸಾಬೀತಗಿದ್ದು ಹೀಗಾಗಿ ಬ್ರಹ್ಮ ಬೈದೇರ್ಕಳ ಗರಡಿ ಕ್ಷೇತ್ರದಲ್ಲಿ VHP ಮುಖಂಡ‌ ಶರಣ್ ಪಂಪುವೆಲ್ ನೇತ್ರತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಶಿಕ್ಷೆಯ ಪ್ರಮಾಣ ಇನ್ನಷ್ಟು ವರ್ಷ ಹೆಚ್ಚು ಮಾಡಲು ಅನುಗ್ರಹಿಸುವಂತೆ ಕೋರಿಕೊಂಡಿದ್ದಾರೆ.

ಬಳಿಕ ಮಾತನಾಡಿದ ವಿಶ್ವಹಿಂದೂ ಪರಿಷತ್ ನ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್ ವೆಲ್ ಈತ ಕದ್ರಿ ದೇವಸ್ಥಾನವನ್ನು ಟಾರ್ಗೆಟ್ ಮಾಡಿದ್ದ ಇದೀಗ ಸಮಾಜಕ್ಕೆ ಇಡೀ ದೇಶಕ್ಕೆ ಭಯೋತ್ಪಾದಕ ಕೃತ್ಯ ಗೊತ್ತಾಗಿದೆ. ಬಾಂಬ್ ಬ್ಲಾಸ್ಟ್ ಆಟೋದಲ್ಲೇ ಆಗಿ ರಕ್ಷಿಸಿದ್ದು ಕೋಟಿ-ಚೆನ್ನಯರ ಪುಣ್ಯಕ್ಷೇತ್ರದ ಕಾರಣಿಕ,ಮಂಗಳೂರುನ್ನು ರಕ್ಷಣೆ ಮಾಡಿದ್ದು ನಮ್ಮ ದೈವ ದೇವರುಗಳು,ಇವತ್ತು ಆತನಿಗೆ ಕೇವಲ ಹತ್ತು ವರ್ಷಗಳ ಶಿಕ್ಷೆ ನೀಡಿದೆ ,ಆತನಿಗೆ ಶಿಕ್ಷೆ ಪ್ರಮಾಣ ಹೆಚ್ಚಾಗಬೇಕು,ಆತನಿಗೆ ಜೀವಾವಧಿ ಶಿಕ್ಷೆಯಾಗಬೇಕು,ಇವತ್ತು ಸತ್ಯಕ್ಕೆ ಜಯ ಸಿಕ್ಕಿದೆ ಇಂತಹ ಭಯೋತ್ಪಾದಕ ಕೃತ್ಯಗಳು ಇನ್ನು ನಡೆಯದಂತೆ ಎನ್ ಐ ಎ ಕಚೇರಿ ಮಂಗಳೂರಿನಲ್ಲಿ ಆರಂಭ ಮಾಡಬೇಕು ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಹೇಳಿಕೆ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular