ಮಂಗಳೂರು : ರಾ.ಹೆ. 66ರ ನಂತೂರ್ ಪಂಪ್ ವೆಲ್ ನಡುವಿನ ರಾಷ್ಟ್ರೀಯ ಹೆದ್ದಾರಿ ತಾರೆತೋಟ ಬಳಿ ಭೀಕರ ಅಪಘಾತ ನಡೆದಿತ್ತು ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಸಾವನಪ್ಪಿದ್ದಾರೆ.
ಮಂಗಳೂರಿನ ನಾಗುರಿ ನಿವಾಸಿ,ಹಿರಿಯ ಛಾಯಾಗ್ರಾಹಕ ಕೆ.ಮೋಹನ್ ಚಂದರ್(64)ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆ. ತಲೆಗೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿದ್ದ ಮೋಹನ್ ಚಂದರ್ ಸಾವನಪ್ಪಿದ್ದಾರೆ.
ಎರಡು ದಿನಗಳಿಂದ ಆಸ್ಪತ್ರೆಯಲ್ಲಿ ಜೀವ-ಮರಣ ಹೋರಾಟ ನಡೆಸಿದ್ದ ಮೋಹನ್ ಚಂದರ್ ಇಂದು ನಿಧನರಾದರು.
ನಗರದ ಪದವಿನಂಗಡಿಯ ನವ್ಯ ಸ್ಟುಡಿಯೋ ಮಾಲೀಕರಾಗಿದ್ದ ಮೋಹನ್ ಚಂದರ್ ರವರು ಪತ್ನಿ,ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಬೈಕ್ ಸವಾರ ಬೆಳ್ತಂಗಡಿಯ ಕಾರ್ಯತಡ್ಕ ನಿವಾಸಿ ಗೋಪಾಲಕೃಷ್ಣನ ಅತಿವೇಗ, ಅಜಾಗರೂಕ ಚಾಲನೆ ಈ ಅಪಘಾತಕ್ಕೆ ಮುಖ್ಯ ಕಾರಣವಾಗಿದೆ.ಗೋಪಾಲಕೃಷ್ಣ ತನ್ನ ಬೈಕ್‌ನಲ್ಲಿ ಮೋಹನ್ ಚಂದರ್ ಸ್ಕೂಟರನ್ನು ಓವರ್‌ಟೇಕ್ ಮಾಡುವ ವೇಳೆ ಡಿಕ್ಕಿಹೊಡೆದಿದ್ದಾರೆ. ನಿಯಂತ್ರಣ ತಪ್ಪಿ ಟಿಪ್ಪರ್‌ಗೆ ಡಿಕ್ಕಿ ಹೊಡೆದು ಬೈಕ್ ಸವಾರ ಗೋಪಾಲಕೃಷ್ಣ ಸ್ಥಳದಲ್ಲೇ ಸಾವನಪ್ಪಿದ್ದಾರೆ.
ಸ್ಕೂಟರ್ ಸವಾರ ಮೋಹನ್ ಚಂದರ್ ಅವರ ತಲೆಗೆ ಗಂಭೀರ ಗಾಯಗಾಳಾದ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಅಪಘಾತದ ದೃಶ್ಯ ಟೆಂಪೋವೊಂದರ ಡ್ಯಾಶ್‌ಬೋರ್ಡ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮೋಹನ್ ಚಂದರ್ ಮನೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಮೇ 10 ರಂದು ಮಗಳ ಮದುವೆ ನಿಶ್ಚಯವಾಗಿತ್ತು ಎಲ್ಲಾ ತಯಾರಿ ನಡೆದಿತ್ತು. ಸಂಭ್ರಮದ ಮನೆಯಲ್ಲಿ ಶೋಕದ ವಾತಾವರಣ ಉಂಟಾಗಿದೆ. ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಜೀವ ಕಳೆದುಕೊಂಡಿದ್ದು ವಿಪರ್ಯಾಸ.
ಅನೇಕ ಸಂಘ ಸಂಸ್ಥೆಗಳಲ್ಲಿ ಮೋಹನ್ ಚಂದರ ರವರು ಸಕ್ರಿಯರಾಗಿದ್ದು
ಗೋಪಾಲಕೃಷ್ಣನ ನಿರ್ಲಕ್ಷ್ಯದ ಚಾಲನೆಗೆ ಎರಡು ಮನೆಗಳ ದೀಪ ಆರಿ ಹೋಗಿರುವುದು ಅಘಾತಕಾರಿ ಸಂಗತಿಯಾಗಿದೆ.


