Saturday, July 18, 2026
Homeರಾಜ್ಯಬೆಂಗಳೂರು : ಮನೆಯ ಪಾರ್ಕಿಂಗ್ ಜಾಗದಲ್ಲಿ ಕಟ್ಟಿಹಾಕಿದ್ದ ಮೂರು ಹಸು, ಒಂದು ಕರುವನ್ನು ಕದ್ದು ಕಾರಿನಲ್ಲಿ...

ಬೆಂಗಳೂರು : ಮನೆಯ ಪಾರ್ಕಿಂಗ್ ಜಾಗದಲ್ಲಿ ಕಟ್ಟಿಹಾಕಿದ್ದ ಮೂರು ಹಸು, ಒಂದು ಕರುವನ್ನು ಕದ್ದು ಕಾರಿನಲ್ಲಿ ತುಂಬಿಸಿ ಪರಾರಿಯಾದ ಖದೀಮರು.

ಬೆಂಗಳೂರು : ಕಾರಿನಲ್ಲಿ ಬಂದ ಕಳ್ಳರು ಮನೆಯ ಪಾರ್ಕಿಂಗ್ ಜಾಗದಲ್ಲಿ ಕಟ್ಟಿಹಾಕಿದ್ದ ಮೂರು ಹಸು, ಒಂದು ಕರುವನ್ನು ಕದ್ದು ಪರಾರಿಯಾಗಿರುವ ಘಟನೆ ಎಲೆಕ್ಟಾçನಿಕ್ ಸಿಟಿ ಬಳಿ ನಡೆದಿದೆ.

ಇಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಯಲ್ಲಿ ವಾಸವಿರುವ ಪ್ರಸಾದ್ ಎಂಬುವವರು ಹಸು ಸಾಕಾಣಿಕೆ ಮತ್ತು ಹಾಲು ಮಾರಾಟವನ್ನೇ ತಮ್ಮ ಜೀವನೋಪಾಯವನ್ನಾಗಿ ಮಾಡಿಕೊಂಡಿದ್ದರು. ತಮ್ಮ ಮನೆಯ ಪಾರ್ಕಿಂಗ್ ಜಾಗದಲ್ಲೇ ಹಸುಗಳನ್ನು ಕಟ್ಟಿ ಸಾಕುತ್ತಿದ್ದರು. ಏ.14ರ ರಾತ್ರಿ ಹಸುಗಳಿಗೆ ಹುಲ್ಲು ಹಾಕಿ, ಅವುಗಳ ಆರೈಕೆ ಮಾಡಿ ಪ್ರಸಾದ್ ಮಲಗಿದ್ದರು. ಆದರೆ, ಬೆಳಗ್ಗೆ ಎದ್ದು ನೋಡಿದಾಗ ಪಾರ್ಕಿಂಗ್ ಜಾಗ ಖಾಲಿಯಾಗಿತ್ತು. ಕಟ್ಟಿಹಾಕಿದ್ದ ಮೂರೂ ಹಸುಗಳು ಕಳ್ಳತನವಾಗಿದ್ದವು. ಕಳ್ಳತನವಾದ ಹಸುಗಳ ಅಂದಾಜು ಮೌಲ್ಯ 1.40 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.ಕಳ್ಳತನವಾದ ಹಸುಗಳನ್ನು ಕಡಿಯಲು (ಮಾಂಸಕ್ಕಾಗಿ) ಹೊತ್ತೊಯ್ದಿದ್ದಾರೆಯೇ ಅಥವಾ ಬೇರೆ ಎಲ್ಲಾದರೂ ಮಾರಾಟ ಮಾಡುವ ಉದ್ದೇಶ ಹೊಂದಿದ್ದಾರೆಯೇ ಎಂಬ ಅನುಮಾನ ಮೂಡಿದೆ.

ಹಾಲನ್ನೇ ನಂಬಿ ಬದುಕುತ್ತಿದ್ದ ಕುಟುಂಬವೊAದು ಈಗ ಆದಾಯವಿಲ್ಲದೆ ಕಂಗಾಲಾಗಿದೆ. ಈ ಸಂಬAಧ ಎಲೆಕ್ಟಾçನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಕಳ್ಳರ ಪತ್ತೆಗೆ ಜಾಲ ಬೀಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular