ಉಳ್ಳಾಲ : ಮುಡಿಪು ಕ್ರಿಕೆಟ್ ಅಸೋಸಿಯೇಷನ್ (MCA) 2026/27ನೇ ಸಾಲಿನ ನೂತನ ಕಮಿಟಿಯನ್ನು ಸೆ.20ರಂದು SK ಹಾಲ್ನಲ್ಲಿ ನಡೆದ ಸಭೆಯಲ್ಲಿ ರಚಿಸಲಾಯಿತು. ನೂತನ ಅಧ್ಯಕ್ಷರಾಗಿ ನಜೀರ್ ಮುಡಿಪು, ಪ್ರಧಾನ ಕಾರ್ಯದರ್ಶಿಯಾಗಿ ಅಯ್ಯುಬ್ ಮೊಂಟುಗೋಳಿ, ಕೋಶಾಧಿಕಾರಿಯಾಗಿ ಅನಿಲ್ ದಾಸ್ ನಾರ್ಯ ಹಾಗೂ ಗೌರವಾಧ್ಯಕ್ಷರಾಗಿ ಅಬ್ದುಲ್ ರಹಿಮಾನ್ ತೋಟಾಲ್ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಉಸ್ಮಾನ್ ಅಲ್ತಾಫ್ ಹಾಗೂ ನಾಸೀರ್ ಮೊಂಟುಗೋಳಿ, ಜೊತೆ ಕಾರ್ಯದರ್ಶಿಗಳಾಗಿ ಝುಬೈರ್ ಮುಡಿಪು ಹಾಗೂ ಇರ್ಷಾದ್ ಪಡಿಕ್ಕಲ್ ಆಯ್ಕೆಯಾಗಿದ್ದಾರೆ. ಇದರೊಂದಿಗೆ 11 ಮಂದಿ ಕಾರ್ಯಕಾರಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಮುಡಿಪು ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಕ್ರಿಕೆಟ್ ತಂಡಗಳು ಮತ್ತು ಪ್ರತಿಭಾವಂತ ಆಟಗಾರರಿಗೆ ಹೆಚ್ಚಿನ ಅವಕಾಶ ಕಲ್ಪಿಸುವುದು, ಕ್ರಿಕೆಟ್ ಚಟುವಟಿಕೆಗಳನ್ನು ವಿಸ್ತರಿಸುವುದು ಹಾಗೂ ಸ್ಥಳೀಯ ಮಟ್ಟದಲ್ಲಿ ಉತ್ತಮ ಕ್ರೀಡಾ ವಾತಾವರಣ ನಿರ್ಮಿಸುವುದು MCAಯ ಉದ್ದೇಶವಾಗಿದೆ. ಮುಂದಿನ ದಿನಗಳಲ್ಲಿ ವಾರದ ಪಂದ್ಯಕೂಟ ಸೇರಿದಂತೆ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಿ, ಸ್ಥಳೀಯ ತಂಡಗಳು ಹಾಗೂ ಆಟಗಾರರಿಗೆ ಉತ್ತಮ ವೇದಿಕೆ ಕಲ್ಪಿಸುವ ಮೂಲಕ ಸಂಘಟನೆಯನ್ನು ಮತ್ತಷ್ಟು ಬಲಪಡಿಸಲು ನೂತನ ಕಮಿಟಿ ಯೋಜಿಸಿದೆ.

