ಮಂಗಳೂರು : ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಸಲೀಂರವರು ಮಂಗಳೂರು ಕಮಿಷನರೇಟ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಹಿರಿಯ ಅಧಿಕಾರಿಗಳ ಜೊತೆ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಪ್ರಗತಿಪರಿಶೀಲನ ಸಭೆ ನಡೆಸಿದರು.
ಕಳೆದ ಕೆಲವು ವರ್ಷಗಳಿಂದ ನಗರದಲ್ಲಿ ಬೀಡು ಬಿಟ್ಟಿರುವ ಪೊಲೀಸ್ ಸಿಬ್ಬಂದಿಗಳ ಕುಟುಂಬಸ್ಥರು ಡಿಜಿ ಸಲೀಂರವರ ಭೇಟಿಗಾಗಿ ಡಿಜಿ ಉಳಿದುಕೊಂಡಿದ್ದ ಗೆಸ್ಟ್ ಹೌಸ್ ಬಳಿ ಹೋಗಿದ್ದರು ಆದರೆ ಇಲ್ಲಿ ಬೇಡ ಕಚೇರಿಗೆ ಬನ್ನಿ ಎಂದು ಹಿರಿಯ ಪೋಲೀಸ್ ಸಿಬ್ಬಂದಿ ಹೇಳಿ ಕಳುಹಿಸಿದ್ದರು. 4 ತಿಂಗಳ ಹಿಂದೆ 61 ಜನ ಕಾನ್ಸ್‌ಟೇಬಲ್ ಗಳ ವರ್ಗಾವಣೆ ಅದೇಶವಾಗಿದ್ದರು ರಿಲೀವ್ ಮಾಡದ ಹಿನ್ನೆಲೆ ಪೋಲೀಸರ ಕುಟುಂಬಸ್ಥರು. ಬೆಂಗಳೂರಿನ ಡಿಜಿ ಕಚೇರಿಗೆ ಹೋಗಿದ್ದರು ಅಲ್ಲಿ ಡಿಜಿ ಸಿಗದ ಹಿನ್ನೆಲೆ ವಾಪಾಸ್ ಆಗಿದ್ದರು.ಆದರೆ ಇಂದು ಉತ್ತರ ಕರ್ನಾಟಕ,ಈಶಾನ್ಯ ಕರ್ನಾಟಕ ಭಾಗದ ಪೊಲೀಸರು ಕುಟುಂಬಸ್ಥರು ಪೊಲೀಸ್ ಮಹಾ ನಿರ್ದೇಶಕರನ್ನು ಭೇಟಿ ಮಾಡಿದ್ದಾರೆ.ಜೊತೆಗೆ EL ರಜೆಗಳ ಅರ್ಜಿಗಳನ್ನು (ಡಿಸಿಪಿ) ಕ್ರೈಂ ರವರು ವಜಾಗೊಳಿಸಿರುತ್ತಾರೆಂದು ಸಿಬ್ಬಂದಿಗಳು ಮಾಧ್ಯಮದ ಮೂಲಕ ಅಳಲು ತೋಡಿಕೊಂಡಿದ್ದಾರೆ.
ಈ ಬಗ್ಗೆ ಕಾನ್ಸ್ಟೆಬಲ್ ಗಳ ವರ್ಗವಣೆಯ ವಿಚಾರದ ಬಗ್ಗೆ ಪ್ರತಿಕ್ರಿಹಿಸಿದ ಡಿ.ಜಿ ಸಲೀಂರವರು ದ.ಕ ಮತ್ತು ಮಂಗಳೂರು ವ್ಯಾಪ್ತಿಯಲ್ಲಿ ಉತ್ತರ ಕರ್ನಾಟಕ ಭಾಗದ ಪೋಲಿಸರು ಹೆಚ್ಚು ಜನ ಕಾರ್ಯನಿರ್ವಹಿಸುತ್ತಿದ್ದಾರೆ,ಈಗಾಗಲೇ ಹಲವು ಮಾನದಂಡಗಳನ್ನು ನಿರ್ದೇಶಿಸಲಾಗಿದೆ ಹಂತ ಹಂತವಾಗಿ 10 ವರ್ಷಕ್ಕಿಂತ ಹೆಚ್ಚು ವರ್ಷ ಕಾರ್ಯನಿರ್ವಹಿಸದ ಪೆದೆಗಳನ್ನು ವರ್ಗಾವಣೆ ಮಾಡುವ ಪ್ರಸ್ತಾವಣೆ ಇಡಲಾಗಿದೆ ಮುಂದಿನ ದಿನಗಳಲ್ಲಿ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
10 ವರ್ಷ ಸೇವೆ ಪೂರ್ಣಗೊಂಡ ಪೊಲೀಸ್ ಕಾನ್ಸ್‌ಟೇಬಲ್ ವರ್ಗಾವಣೆ. ಅದೇಶವಾಗಿ 4 ತಿಂಗಳಾದ್ರು ಸಿಗದ ನಿಯುಕ್ತಿ ಸಿಗದ ಹಿನ್ನೆಲೆ ಕರಣ ಕೇಳಿದರೆ ಕಮಿಷನರ್ ಸುದೀರ್ ಕುಮಾರ್ ರೆಡ್ಡಿಯವರು ಕೋಮುಗಲಭೆ ಕಾರಣ ಹೇಳುತ್ತಿದ್ದಾರೆ ಕೋಮುಗಲಭೆ ತಡೆಯಲು ಸ್ಪೆಷಲ್ ವಿಂಗ್ ಇದೆ, CAR ಸಿಬ್ಬಂದಿ ಗಳಿದ್ದಾರೆ ನಮ್ಮ ಮನೆಯವರನ್ನು ರಿಲೀವ್ ಮಾಡಿ ಎಂದು ಕುಟುಂಬಸ್ಥರು. ಡಿಜಿ ಎದುರು ಅಳಲು ತೋಡಿಕೊಂಡಿದ್ದಾರೆ. ಕೋಮುಗಲಭೆ ಕಾರಣಕೊಟ್ಟು ಕಮಿಷನರ್ ಸುದೀರ್ ರೆಡ್ಡಿ ರಿಲೀವ್ ಮಾಡಿಲ್ಲ.ಈ ಬಗ್ಗೆ ಕೇಳಲು ಡಿಜಿ ಬಳಿ ಹೋಗಿದ್ವಿ ಎಡಿಜಿಪಿ ಸಿಕ್ಕಿ, ಕಮಿಷನರ್ ಬಳಿ ಹೋಗುವಂತೆ ಹೇಳಿದ್ದರು, ಡಿಜಿ ಬಳಿ ಹೋಗಿದ್ರಲ್ಲಾ ಅಲ್ಲೇ ಮಾಡಿಸಿಕೊಳ್ಳಿ ಅಂತಾ ಕಮಿಷನರ್ ಸುದೀರ್ ರೆಡ್ಡಿ ಹೇಳಿದ್ದಾರೆ, ದೂರದ ಜಿಲ್ಲೆಗಳಿಂದ ಬಂದು 10 ವರ್ಷದಿಂದ ಇದ್ದೀವಿ. ಆರೋಗ್ಯ ಸಮಸ್ಯೆಗಳಿಗೆ, ಊರಿನಲ್ಲಿ ವಯಸ್ಸಾದವರಿದ್ದಾರೆ, ಇಲ್ಲಿ ವಯಸ್ಸಾದವರು, ಮಕ್ಕಳು ಇದ್ದಾರೆ, ಸ್ಕೂಲ್ ಅಡ್ಮಿಷನ್ ಮಾಡಿಸಬೇಕಾ ಬೇಡ್ವಾ ಅನ್ನೊ ಪರಿಸ್ಥಿತಿ ಉಂಟಾಗಿದೆ ನಮಗೆ ನ್ಯಾಯ ದೊರಕಿಸಿ ಕೊಡಿ ಇಲ್ಲದಿದ್ರೆ ಪ್ರತಿಭಟನೆ ಮಾಡುತ್ತೇವೆಂದು ಎಚ್ಚರಿಕೆ ನೀಡಿದ್ದಾರೆ.


