Saturday, July 18, 2026
Homeರಾಜಕೀಯಬೆಂಗಳೂರು : ಬಹುಕೋಟಿ ಬಿಟ್‌ಕಾಯಿನ್ ಹಗರಣ ಶಾಸಕ ಎನ್.ಎ.ಹ್ಯಾರಿಸ್ ನಲಪಾಡ್, ಹಕೀಬ್ ಖಾನ್ ನಿವಾಸಗಳ ಮೇಲೆ...

ಬೆಂಗಳೂರು : ಬಹುಕೋಟಿ ಬಿಟ್‌ಕಾಯಿನ್ ಹಗರಣ ಶಾಸಕ ಎನ್.ಎ.ಹ್ಯಾರಿಸ್ ನಲಪಾಡ್, ಹಕೀಬ್ ಖಾನ್ ನಿವಾಸಗಳ ಮೇಲೆ ದಾಳಿ.

ಬೆಂಗಳೂರು : ಬಹುಕೋಟಿ ಬಿಟ್‌ಕಾಯಿನ್ ಹಗರಣ ತನಿಖೆಯನ್ನು ತೀವ್ರಗೊಳಿಸಿರುವ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಸೋಮವಾರ ಹಗರಣದ ಪ್ರಮುಖ ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ಶಾಸಕ ಎನ್.ಎ.ಹ್ಯಾರಿಸ್ ಅವರ ಪುತ್ರ ಮಹಮ್ಮದ್ ನಲಪಾಡ್ ಹಾಗೂ ಮಾಜಿ ಕೇಂದ್ರ ಸಚಿವ ಕೆ.ರೆಹಮಾನ್ ಖಾನ್ ಮೊಮ್ಮಗ ಮಹಮ್ಮದ್ ಹಕೀಬ್ ಖಾನ್ ಸೇರಿದಂತೆ ಹಲವರ ಆಸ್ತಿಗಳ ಮೇಲೆ ದಾಳಿ ನಡೆಸಿ ತಪಾಸಣೆ ನಡೆಸಿದ್ದಾರೆ.

ಬಿಟ್‌ಕಾಯಿನ್ ಹಗರಣದ ತನಿಖೆ ನಡೆಸುತ್ತಿರುವ ರಾಜ್ಯ ಸರಕಾರದ ವಿಶೇಷ ತನಿಖಾ ತಂಡ (ಎಸ್‌ಐಟಿ) 2024ರಲ್ಲಿ ಶಾಸಕ ಹ್ಯಾರಿಸ್ ಪುತ್ರ ಮಹಮ್ಮದ್ ನಲಪಾಡ್ ಅವರನ್ನು ವಿಚಾರಣೆಗೆ ಒಳಪಡಿಸಿತ್ತು. ಅದಾದ ಬಳಿಕ ತನಿಖೆ ಆಮೆಗತಿಯಲ್ಲಿ ಸಾಗುತ್ತಿತ್ತು. ಅದಾದ ಬಳಿಕ ಇಡಿ ಅಧಿಕಾರಿಗಳು ಎಸ್‌ಐಟಿಯಿಂದ ತನಿಖೆಯ ಕೆಲವು ಕಡತಗಳನ್ನು ಪಡೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಸೋವiವಾರ ಬೆಳಗ್ಗೆ 6 ಗಂಟೆಗೆ ಬೆAಗಳೂರಿನ ಶಾಂತಿನಗರದಲ್ಲಿರುವ ನಲಪಾಡ್ ಅವರಿಗೆ ಸೇರಿದ ನಿವಾಸ, ಕಚೇರಿ, ಇತರ ಕಟ್ಟಡಗಳು ಸೇರಿದಂತೆ ಒಟ್ಟು 12 ಸ್ಥಳಗಳ ಮೇಲೆ ಏಕಕಾಲಕ್ಕೆ 100 ಕ್ಕೂ ಅಧಿಕ ಇಡಿ ಅಧಿಕಾರಿಗಳು ಕೇಂದ್ರೀಯ ಮೀಸಲು ಪಡೆಯ (ಸಿಆರ್‌ಪಿಎಫ್) ಯೋಧರ ಭದ್ರತೆಯೊಂದಿಗೆ ದಾಳಿ ನಡೆಸಿದ್ದಾರೆ ಎಂದು ಇಡಿ ಮೂಲಗಳು ಹೇಳಿವೆ. ಕ್ರಿಪ್ಟೋ ಕರೆನ್ಸಿಯ ವೆಬ್‌ಸೈಟ್‌ಗಳು ಮತ್ತು ವಾಲೆಟ್‌ಗಳನ್ನು ಹ್ಯಾಕ್ ಮಾಡಲಾಗಿದೆ.

ಶಾಂತಿನಗರದಲ್ಲಿರುವ ಶಾಸಕ ಹ್ಯಾರಿಸ್ ನಿವಾಸ, ಮಹಮದ್ ನಲ್ಪಾಡ್ ನಿವಾಸ, ಆತನ ಸಹೋದರ ಫಾರೂಕ್ ನಲಪಾಡ್ ಕಚೇರಿ, ನಲಪಾಡ್‌ಗೆ ಸೇರಿದ 4 ಕಚೇರಿಗಳು, ರೆಹಮಾನ್ ಖಾನ್ ಮೊಮ್ಮಗ ಹಕೀಬ್ ಮನೆ, ವೈಟ್‌ಫೀಲ್ಡ್ನಲ್ಲಿರುವ ಚಿಪ್ಸನ್ ಏವಿಯೇಷನ್ ಕಂಪನಿ, ಎಲೆಕ್ಟಾçನಿಕ್ ಸಿಟಿಯ ಇನ್ ಪೀಜಿ ಐಟಿ ಸೆಲ್ಯುಲೋಸ್, ಹೋರೋಸ್ ಕ್ರಿಪ್ಟೋ ಕಂಪನಿ ಕಚೇರಿಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಿಟ್‌ಕಾಯಿನ್ ಹಗರಣದ ಹ್ಯಾಕರ್ ಶ್ರೀಕಿ ಜತೆ ನಲಪಾಡ್ ಆರ್ಥಿಕ ವ್ಯವಹಾರ ಹೊಂದಿದ್ದ ಹಿನ್ನೆಲೆಯಲ್ಲಿ ಇಡಿ ದಾಳಿ ಮಾಡಿದೆ ಎನ್ನಲಾಗಿದೆ. ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರ ಎಸ್‌ಐಟಿ ರಚನೆ ಮಾಡಿದ್ದು,2020 ರಲ್ಲಿ. ಶ್ರೀಕಿ ಮೇಲೆ ಎಫ್‌ಐಆರ್ ದಾಖಲಾಗಿತ್ತು. 28 ಲಕ್ಷ ರೂ. ಬಿಟ್‌ಕಾಯಿನ್‌ನಲ್ಲಿ ಹೂಡಿಕೆ ಮಾಡಿದರೆ ೪೫ ಲಕ್ಷ ರೂ. ಲಾಭ ಸಿಗುತ್ತದೆ ಎಂಬುದಾಗಿ ಯಶೋಧಾದೇವಿ ಎಂಬುವವರಿಗೆ ಶ್ರೀಕಿ ನಂಬಿಸಿದ್ದ. ಆ ಬಳಿಕ ಲಾಭವಾಗಲಿ ಅಸಲಾಗಲಿ ನೀಡದೇ ವಂಚಿಸಿದ್ದಾರೆ ಎAದು ಆರೋಪಿಸಿ ಅವರು ಅಶೋಕನಗರ ಠಾಣೆಯಲ್ಲಿ ಶ್ರೀಕಿ, ರಾಬಿನ್ ಖಂಡೇಲವಾಲಾ ಮತ್ತು ಅಜಿತ್ ಖಂಡೇಲವಾಲಾ ವಿರುದ್ಧ ದೂರು ನೀಡಿದ್ದರು. ತನಿಖೆ ವೇಳೆ ನಲಪಾಡ್ ಹೆಸರು ಕೇಳಿಬಂದಿತ್ತು. ನಲಪಾಡ್ ಸಹೋದರ ಓಮರ್ ನಲಪಾಡ್ ಅವರ ಕ್ಲಾಸ್‌ಮೇಟ್ ಆಗಿದ್ದ ಶ್ರೀಕೃಷ್ಣ ಇದೇ ಕಾರಣಕ್ಕೆ ನಲಪಾಡ್ ಅವರಿಗೂ ಹತ್ತಿರವಾಗಿದ್ದ. ಬಿಟ್‌ಕಾಯಿನ್ ಹ್ಯಾಕ್ ಮಾಡಿ ಬಾಂಬೆ ಮೂಲದ ವ್ಯಕ್ತಿಗೆ ಶ್ರೀಕಿ ಕಳುಹಿಸಿದ್ದ. ಅವರಿಂದ 10 ಲಕ್ಷ ರೂ. ನಲಪಾಡ್ ಅವರ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗಿತ್ತು. ಇದರಲ್ಲಿ ಎಸ್‌ಐಟಿ ಈವರೆಗೂ ಚಾರ್ಜ್ಶೀಟ್ ಸಲ್ಲಿಸಿಲ್ಲ. ಇದೇ ಪ್ರಕರಣದಲ್ಲಿ ಇಡಿ ದಾಳಿ ನಡೆಸಿದೆ

RELATED ARTICLES

LEAVE A REPLY

Please enter your comment!
Please enter your name here

Most Popular