ನವದೆಹಲಿ : ಇಂಧನಕ್ಕೆ ಮೂಲವಾಗಿರುವ ಪಶ್ಚಿಮ ಏಷ್ಯಾ ಸಮರ ಬಿಕ್ಕಟ್ಟನ್ನು ಭಾರತದ ಎಲ್ಲ ರಾಜ್ಯಗಳೂ `ಟೀಂ ಇಂಡಿಯಾ’ ಮಾದರಿ ಯಲ್ಲಿ ಒಟ್ಟಾಗಿ, ಪರಸ್ಪರ ಸಹಯೋಗ ದೊಂದಿಗೆ ಎದುರಿಸಬೇಕು ಎಂದು ಶುಕ್ರವಾರ ಎಲ್ಲ ರಾಜ್ಯಗಳ ಮುಖ್ಯ ಮಂತ್ರಿಗಳಿಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆಕೊಟ್ಟಿದ್ದಾರೆ.
ಜತೆಗೆ ದೇಶದ ಮೇಲೆ ಆಗಬಹುದಾದ ಯುದ್ಧ ಪರಿಣಾಮ ತಡೆಯಲು ಟೀಂ ಇಂಡಿಯಾ ರೀತಿಯ, ಸಚಿವ ರಾಜನಾಥ್ ಸಿಂಗ್ ನೇತೃತ್ವದ ತಂಡವೊAದನ್ನು ರಚಿಸಿದ್ದು, ಅದರಲ್ಲಿ ಅಮಿತ್ ಶಾ, ಸೇರಿ ಇತರಿದ್ದಾರೆ. ದೇಶದ ಸಿಎಂಗಳ ಜತೆ ಶುಕ್ರವಾರ ಮೋದಿಯವರು ವಿಡಿಯೋ ಸಭೆ ನಡೆಸಿದ್ದು ಯುದ್ಧ ಬಿಕ್ಕಟ್ಟಿನ ದುಷ್ಪರಿಣಾಮವನ್ನು ಇಡೀ ದೇಶ `ಟೀಂ ಇಂಡಿಯಾ’ ಮಾದರಿ ಸ್ಫೂರ್ತಿಯೊಂದಿಗೆ ಒಟ್ಟಾಗಿ ಸವಾಲಾಗಿ ತೆಗೆದುಕೊಂಡು ಹೋರಾಡುವ ಅಗತ್ಯವಿದೆ
ಎಂಬುದನ್ನು ಮನದಟ್ಟು ಮಾಡುವ ಉದ್ದೇಶದಿಂದಲೇ ಈ ಸಭೆ ಕರೆದಿದ್ದಾಗಿ ಹೇಳಲಾಗಿದೆ.
ಸಭೆಯಲ್ಲಿ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು, ಜಮ್ಮು ಕಾಶ್ಮೀರ ಲೆ.ಗರ‍್ನರ್ ಮನೋಜ್ ಸಿನ್ಹಾ ಮತ್ತಿತರರು ಕೇಂದ್ರ ಸರ್ಕಾರ ತೈಲದ ಮೇಲಿನ ಅಬಕಾರಿ ಸುಂಕ ಕಡಿತ ಮಾಡಿದ ಕ್ರಮವನ್ನು ಶ್ಲಾಘಿಸಿದರು.
ಸಿದ್ದರಾಮಯ್ಯ ಗೈರು! : ಪಶ್ಚಿಮ ಏಷ್ಯಾ ಯುದ್ಧ ಬಿಕ್ಕಟ್ಟು ಎದುರಿಸಲು `ಟೀಂ ಇಂಡಿಯಾ’ ರೀತಿ ಕೆಲಸ ಮಾಡುವ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದರಾದರೂ, ಶುಕ್ರವಾರ ಮೋದಿ ಎಲ್ಲ ರಾಜ್ಯಗಳ ಮುಖ್ಯ ಮಂತ್ರಿಗಳೊAದಿಗೆ ಮೊದಲ ಬಾರಿಗೆ ನಡೆಸಿದ ವೀಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಕರ್ನಾಟಕದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿರಲಿಲ್ಲ!
ಮಧ್ಯಪ್ರಾಚ್ಯ ಯುದ್ಧ ಬಿಕ್ಕಟ್ಟಿನ ದುರ್ಲಾಭ ಪಡೆದು ತೈಲ ಬೆಲೆಗಳನ್ನು ಏರಿಸುವ ಪರಿಪಾಠಕ್ಕೆ ಕಡಿವಾಣ ಹಾಕಲೆಂದು ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ಗೆ 10 ರೂ. ಕಡಿತಗೊಳಿಸಿದೆ. ಇಂಧನ ಬಳಕೆದಾರರನ್ನು ಬೆಲೆ ಏರಿಕೆ ಬಿಸಿಯಿಂದ ರಕ್ಷಿಸಲು ಸರ್ಕಾರ ಈ ಕ್ರಮ ಕೈಗೊಂಡಿದೆ. ಇದರಿಂದಾಗಿ ಸರ್ಕಾರಕ್ಕೆ ಅಂದಾಜು 1.75 ಲಕ್ಷ ಕೋಟಿ ರೂ. ಹೊರೆಬೀಳಲಿದೆ. ಆದರೆ ಇದರಿಂದ ಜನರಿಗೆ ಹೊರೆ ಆಗುವುದಿಲ
ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ರಾಜ್ಯವಾರು ಹಂಚಿಕೆ ಪ್ರಮಾಣವನ್ನು ಕೇಂದ್ರವು ಯುದ್ಧಕ್ಕೂ ಮೊದಲಿನ ಬೇಡಿಕೆಯ ಶೇ.೫೦ರಿಂದ ಶೇ.೭೦ಕ್ಕೆ ಏರಿಸಿದೆ. ಹೊರ್ಮುಜ್ ಜಲಸಂಧಿ ದಾಟಲು ಇರಾನ್‌ನಿಂದ ದೊರೆತ ಅವಕಾಶ, ರಷ್ಯಾದಿಂದಸಿಗುತ್ತಿರುವ ತೈಲ ಯುದ್ಧ ಬಿಕ್ಕಟ್ಟಿನ ನಡುವೆ ಉಕ್ಕು, ವಾಹನೋದ್ಯಮ ಮತ್ತು ಕಾರ್ಮಿಕರನ್ನು ಆಧರಿಸಿದ ಕೈಗಾರಿಕೋದ್ಯಮಗಳ ಅಗತ್ಯತೆಗಳನ್ನು ಪೂರೈಸುವ ಸಲುವಾಗಿ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.


