Sunday, March 15, 2026
Flats for sale
Homeಕ್ರೀಡೆಲಂಡನ್ : ಪಾಕಿಸ್ತಾನದ ಸ್ಪಿನ್ನರ್ ಅಬ್ರಾರ್ ಅಹ್ಮದ್‌ ಖರೀದಿ,ಕಾವ್ಯ ಮಾರನ್ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ.

ಲಂಡನ್ : ಪಾಕಿಸ್ತಾನದ ಸ್ಪಿನ್ನರ್ ಅಬ್ರಾರ್ ಅಹ್ಮದ್‌ ಖರೀದಿ,ಕಾವ್ಯ ಮಾರನ್ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ.

ಲಂಡನ್ : ಭಾರತದ ಸನ್ ಗ್ರೂಪ್ ಒಡೆತನದ ಫ್ರಾಂಚೈಸಿಯಾದ ಸನ್‌ರೈಸರ್ಸ್ ಲೀಡ್ಸ್, ಇಂಗ್ಲೆAಡ್‌ನಲ್ಲಿ ನಡೆದ 2026 ರ ಹಂಡ್ರೆಡ್ ಹರಾಜಿನ ಸಂದರ್ಭದಲ್ಲಿ ಪಾಕಿಸ್ತಾನದ ಸ್ಪಿನ್ನರ್ ಅಬ್ರಾರ್ ಅಹ್ಮದ್‌ನನ್ನು ಖರೀದಿಸಿದ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶಗಳು ವ್ಯಕ್ತವಾಗಿವೆ.

ಆನ್‌ಲೈನ್‌ನಲ್ಲಿ ಬಿಸಿ ಬಿಸಿ ಚರ್ಚೆಗೆ ನಾಂದಿ ಹಾಡಿದೆ, ಅನೇಕ ಬಳಕೆದಾರರು ಈ ನಿರ್ಧಾರವನ್ನು ಟೀಕಿಸಿದ್ದರೆ, ಫ್ರಾಂಚೈಸಿಯ ಮಾಲೀಕತ್ವವನ್ನು ಪ್ರತಿನಿಧಿಸುವ ಕಾವ್ಯಾ ಮಾರನ್ ವಿರುದ್ಧ ತಮ್ಮ ಕೋಪವನ್ನು ವ್ಯಕ್ತಪಡಿಸಿದ್ದಾರೆ. ಇಂಗ್ಲೆAಡ್‌ನ 100-ಬಾಲ್ ಟೂರ್ನಮೆಂಟ್ `ದಿ ಹಂಡ್ರೆಡ್’ ನಲ್ಲಿ ಸ್ಪರ್ಧಿಸುತ್ತಿರುವ ಲೀಡ್ಸ್ ಮೂಲದ ತಂಡವಾದ ಸನ್‌ರೈಸರ್ಸ್ ಲೀಡ್ಸ್, ನಿಗೂಢ ಸ್ಪಿನ್ನರ್ ಅಬ್ರಾರ್ ಅಹ್ಮದ್‌ಗೆ 190,೦೦೦ ಯೂರೋಗಳನ್ನು ಅಂದ್ರೆ, ಭಾರತದ ಕರೆನ್ಸಿಗೆ ಹೋಲಿಸಿದರೆ, ಸುಮಾರು 2.34 ಕೋಟಿ ನೀಡಿ ಖರೀದಿಸಿದ್ದಾರೆ. ಟ್ರೆಂಟ್ ರಾಕೆಟ್ಸ್ ಜೊತೆಗಿನ ಬಿಡ್ಡಿಂಗ್ ಸ್ಪರ್ಧೆಯ ನಂತರ ಗುರುವಾರದ ಹರಾಜಿನಲ್ಲಿ ಈ ಒಪ್ಪಂದವನ್ನು ದೃಢಪಡಿಸಲಾಗಿದೆ.

ಟ್ರೆಂಟ್ ರಾಕೆಟ್ಸ್ ಜೊತೆ ಪೈಪೋಟಿಗೆ ಬಿದ್ದು ಅಬ್ರಾರ್‌ರನ್ನು ಖರೀದಿಸಬೇಕಾದ ಅನಿವಾರ್ಯ ಏನಿತ್ತು ಎಂಬುದೇ ಈಗ ಪ್ರಶ್ನಾರ್ಹವಾಗಿದೆ. ಬಿಡ್ಡಿಂಗ್‌ನಲ್ಲಿ ಪಾಲ್ಗೊಂಡಿದ್ದ ಕಾವ್ಯ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ನ ಸಿಇಒ ಮತ್ತು ಹೊಸದಾಗಿ ರೂಪುಗೊಂಡ ಸನ್‌ರೈಸರ್ಸ್ ಲೀಡ್ಸ್ ಫ್ರಾಂಚೈಸಿಯ ಸಹಮಾಲೀಕ ಕಾವ್ಯಾ ಮಾರನ್ ಹರಾಜಿನಲ್ಲಿ ಭಾಗವಹಿಸಿ ವಿಜೇತ ಬಿಡ್ ಮಾಡಿದರು. ಈ ತಂಡವು ಚೆನ್ನೈ ಮೂಲದ ಮಾಧ್ಯಮ ಸಮೂಹ ಸನ್ ಗ್ರೂಪ್‌ನ
ಒಡೆತನದಲ್ಲಿದೆ. ಈ ಒಪ್ಪಂದವು ಫ್ರಾಂಚೈಸಿ ಕ್ರಿಕೆಟ್‌ನಲ್ಲಿಗಮನಾರ್ಹವಾಗಿದೆ.

ಕಾವ್ಯ ಮಾಡಿದ ಎಡವಟ್ಟಿನಿಂದ ಅಬ್ರಾರ್ ಅಹ್ಮದ್ `ದಿ ಹಂಡ್ರೆಡ್’ನಲ್ಲಿ ಭಾರತೀಯ ಘಟಕದ ಒಡೆತನದ ತಂಡದಿAದ ಆಯ್ಕೆಯಾದ ಮೊದಲ ಪಾಕಿಸ್ತಾನಿ ಕ್ರಿಕೆಟಿಗ ಎನ್ನಿಸಿಕೊಂಡಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವಿನ ರಾಜತಾಂತ್ರಿಕ ಸಂಬಂಧಗಳು ಹದಗೆಟ್ಟಿರುವುದರಿಂದ 2009 ರಿಂದ ಪಾಕಿಸ್ತಾನಿ ಆಟಗಾರರನ್ನು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಭಾಗವಿಸುವುದನ್ನು ನಿಷೇಧಿಸಲಾಗಿದ್ದರೂ, ಅಂತಹ ನಿಬAðಧಗಳು ವಿದೇಶಿ ಲೀಗ್‌ಗಳಲ್ಲಿ
ಅನ್ವಯಿಸುವುದಿಲ್ಲ.

ಐಪಿಎಲ್ ಅಂಗಳದಲ್ಲಿ ಸದಾ ತನ್ನ ಹಾವಭಾವಗಳಿಂದಲೇ ಕಾವ್ಯ ಮಾರನ್ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಪ್ರತಿ ಸನ್‌ರೈಸರ್ಸ್ ಹೈದ್ರಾಬಾದ್ ಪಂದ್ಯದಲ್ಲಿ ವಿಐಪಿ ಗ್ಯಾಲರಿಯಲ್ಲಿ ಕೂರುತ್ತಿದ್ದ ಕಾವ್ಯಳನ್ನು ಸ್ಟೇಡಿಯಂನಲ್ಲಿದ್ದ ಅಭಿಮಾನಿಗಳು ನೋಡಿ ಮೆಚ್ಚುಕೊಂಡಿದ್ದರು. ಸನ್‌ರೈಸರ್ಸ್ ಹೈದ್ರಾಬಾದ್ ತಂಡದ ಯಶಸ್ಸಿನ ಹಿಂದೆ ಕಾವ್ಯಳ ಶ್ರಮವಿತ್ತು. ಆದ್ರೆ, ಅಬ್ರಾರ್ ಖರೀದಿ ನಂತರ, ಕಾವ್ಯಳ ಶ್ರಮವೆಲ್ಲಾ ನೀರಿನಲ್ಲಿ ಹೋಮ ಮಾಡಿದಂತಾಗಿದೆ.

ಅಬ್ರಾರ್ ಅಹ್ಮದ್ ಭಾರತೀಯರ ಪಾಲಿಗೆ ವಿಲನ್ ಎಂದರೂ ತಪ್ಪಾಗುವುದಿಲ್ಲ. ಆಪರೇಷನ್ ಸಿಂಧೂರ್ ಅನ್ನು ಅಣುಕಿಸಿದ್ದ ಈತ, ಮೈದಾನದಲ್ಲೂ ಭಾರತೀಯ ವಿಕೆಟ್‌ಗೆ ಸಂಭ್ರಮಿಸಿದ ರೀತಿಯೂ ವಿವಾದಕ್ಕೇ ಒಳಗಾಗಿತ್ತು. ಪಾಕ್‌ನ ಮತ್ಯಾವ ಆಟಗಾರನನ್ನೂ ಯಾವ ಭಾರತೀಯ ಮೂಲದ ಫ್ರಾಂಚೈಸಿ ಖರೀದಿಸಿಲ್ಲ. ಆದ್ರೆ, ಈತನನ್ನೇ ಕಾವ್ಯ ಮಾರನ್ ಖರೀದಿಸಿದ್ದಕ್ಕೆ ಹಲವು ಟೀಕೆಗಳನ್ನು ಎದುರಿಸಬೇಕಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular