Sunday, March 15, 2026
Flats for sale
Homeದೇಶಬೆಂಗಳೂರು : ಅಡುಗೆ ಹಾಗೂ ವಾಣಿಜ್ಯ ಸಿಲಿಂಡರ್‌ಗೆ ದೇಶದಲ್ಲಿ ಯಾವುದೇ ಕೊರತೆ ಇಲ್ಲ : ಕೇಂದ್ರ...

ಬೆಂಗಳೂರು : ಅಡುಗೆ ಹಾಗೂ ವಾಣಿಜ್ಯ ಸಿಲಿಂಡರ್‌ಗೆ ದೇಶದಲ್ಲಿ ಯಾವುದೇ ಕೊರತೆ ಇಲ್ಲ : ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ.

ಬೆಂಗಳೂರು : ಅಡುಗೆ ಹಾಗೂ ವಾಣಿಜ್ಯ ಸಿಲಿಂಡರ್‌ಗೆ ದೇಶದಲ್ಲಿ ಯಾವುದೇ ಕೊರತೆ ಇಲ್ಲ. ಆದರೆ ಸಿಲಿಂಡರ್ ಪೂರೈಕೆ ವಿಷಯದಲ್ಲಿ ಕಾಂಗ್ರೆಸ್ ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡು ತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದರು.

ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿ , ಗ್ಯಾಸ್ ಸಿಲಿಂಡರ್ ಸಂಬಂಧ ಜನರನ್ನು ಗೊಂದಲಕ್ಕೀಡು ಮಾಡು ವ ಪ್ರಯತ್ನ ಕಾಂಗ್ರೆಸ್ ಮಾಡುತ್ತಿದೆ. ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕೊರತೆ ಆಗುತ್ತದೆ ಎಂದು ರಾಹುಲ್ ಗಾಂಧಿ ನಿನ್ನೆ ಹೇಳಿದ್ದಾರೆ. ಇದು ಸುಳ್ಳು. ಇಡೀ ದೇಶದಲ್ಲಿ ಈಗಲೂ ಮತ್ತು ಮುಂದೆಯೂ ಪೆಟ್ರೋಲಿಯಂ ಉತ್ಪನ್ನಗಳ ಕೊರತೆ ಆಗುವುದಿಲ್ಲ. ಕೊರತೆ ಆಗದಂತೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಸಮರ್ಥಿಸಿಕೊಂಡರು.

ಅಡುಗೆ ಮತ್ತು ವಾಣಿಜ್ಯ ಸಿಲಿಂಡರ್ ಪೂರೈಕೆಗೆ ಹಲವು ಮೂಲಗಳಿಂದ ಪ್ರಯತ್ನ ಮಾಡಲಾಗಿದೆ . ಈ ಮೊದಲು ೨೦ರಿಂದ 22 ದೇಶಗ ಳಿಂದ ಪೆಟ್ರೋಲಿಯಂ ಉತ್ಪನ್ನಗಳನ್ನು ಭಾರತ ಆಮದು ಮಾಡಿಕೊಳ್ತಿತ್ತು. ಈಗ 40 ದೇಶಗಳಿಗೆ ಹೆಚ್ಚಿದೆ ಎಂದು ಹೇಳಿದರು . ಅಡುವೆ ಅನಿಲ ಸಿಲಿಂಡರ್ ಕೊರತೆ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ . ರಾಹುಲ್ ಗಾಂಧಿ ಅಪ್ರಫುದ್ದ ಮತ್ತು ಪ್ರೌಢಿಮೆ ಇಲ್ಲದ ನಾಯಕ. ಅಡುಗೆ ಸಿಲಿಂಡರ್ ಕೊರತೆಗೆ ಮುಷ್ಕರ ಮಾಡಿ ಎಂದು ಆಡಳಿತಾರೂಢ ಪಕ್ಷದ ಮುಖ್ಯಮಂತ್ರಿಗಳು
ಕರೆ ನೀ ಡುವುದು ದುರ್ದೈವ. ಅದು ಅವರ ಬೇಜವಬ್ದಾರಿತನದ ಪರಮಾವಧಿ ತೋರಿಸುತ್ತದೆ ಎಂದು ದೂರಿದರು.

RELATED ARTICLES

LEAVE A REPLY

Please enter your comment!
Please enter your name here

Most Popular