Friday, February 27, 2026
Flats for sale
Homeಕ್ರೈಂಮಂಗಳೂರು : ಸೈಬರ್ ಪೋಲೀಸರ ಮಿಂಚಿನ ಕಾರ್ಯಾಚರಣೆ : ಹೈದರಾಬಾದ್ ನಲ್ಲಿ ಕುಳಿತು ಸೈಬರ್ ವಂಚನ...

ಮಂಗಳೂರು : ಸೈಬರ್ ಪೋಲೀಸರ ಮಿಂಚಿನ ಕಾರ್ಯಾಚರಣೆ : ಹೈದರಾಬಾದ್ ನಲ್ಲಿ ಕುಳಿತು ಸೈಬರ್ ವಂಚನ ಜಾಲದಲ್ಲಿ ಕಾರ್ಯಚರಿಸುತ್ತಿದ್ದ 6 ಮಂದಿ ವಂಚಕರ ಬಂಧನ.

ಮಂಗಳೂರು : ಮಂಗಳೂರು ಸೈಬರ್ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿದ್ದು 6 ಮಂದಿ ಕದೀಮರನ್ನು ಬಂಧಿಸಿದ್ದಾರೆ. ನಗರದ ಬಂದರು ನಿವಾಸಿ ಮೊಹಮ್ಮದ್ ಇನ್ಸಾಲ್ ರವರು ತಮ್ಮ ಸ್ನೇಹಿತ ಇಬ್ರಾಹಿಂ ಎಂಬಾತನು ಕರೆಂಟ್ ಖಾತೆಯನ್ನು ವ್ಯವಹಾರದ ಉದ್ದೇಶಕ್ಕಾಗಿ ನೀಡುವಂತೆ ದೂರುದಾರರಲ್ಲಿ ಕೇಳಿಕೊಂಡಿದ್ದು, ದೂರು ದಾರರು ಅದಕ್ಕೆ ಒಪ್ಪಿ ತಮ್ಮ ಬ್ಯಾಂಕ್ ಖಾತೆಯ ಪಾಸ್ ಬುಕ್, ಎ.ಟಿಎಂ ಕಾರ್ಡ, ಚೆಕ್ ಬುಕ್ ಹಾಗೂ ಖಾತೆಗೆ ಲಿಂಕ್ ಆಗಿದ್ದ ಏರ್ ಟೆಲ್ ಕಂಪನಿಯ ಸಿಮ್ ಕಾರ್ಡನ್ನು ನೀಡಿದ್ದು, ಸೈಬರ್ ವಂಚಕರು ಖಾತೆಯನ್ನು ದುರುಪಯೋಗಪಡಿಸಿಕೊಂಡ ಬಗ್ಗೆ ಸೈಬರ್ ಅಪರಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣದಲ್ಲಿ ತನಿಖೆ ಕೈಗೊಂಡು ತಾಂತ್ರಿಕ ಸಾಕ್ಷ್ಯಧಾರಗಳನ್ನು ಕಲೆ ಹಾಕಿ ಪರಿಶೀಲನೆ ನಡೆಸದಾಗ ಹೈದರಬಾದ್ ನಲ್ಲಿ ಸೈಬರ್ ವಂಚನ ತಂಡ ಕಾರ್ಯಚರಿಸುತ್ತಿರುವುದು ತಿಳಿದುಬಂದಿದ್ದು, ಸೈಬರ್ ಅಪರಾಧ ಪೊಲೀಸ್ ಠಾಣೆಯ ತಂಡವು ಹೈದರಬಾದ್ ಗೆ ತೆರಳಿ ಸೈಬರ್ ವಂಚನ ತಂಡವನ್ನು ಪತ್ತೆ ಮಾಡಿ 5 ಜನರನ್ನು ಆರೋಪಿತರನ್ನು ಹೈದರಾಬಾದ್ ನಲ್ಲಿ ಹಾಗೂ ಓರ್ವ ಆರೋಪಿತನನ್ನು ಮಂಗಳೂರಿನಲ್ಲಿ ದಸ್ತಗಿರಿ ಮಾಡಿ ,ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

ಬಂಧಿತ ಆರೋಪಿಗಳನ್ನು ಆಂಧ್ರ ಪ್ರದೇಶದ ಶೇಖ್ ಕರೀಮುಲ್ಲಾ @ ರಸೂಲ್ (27) ಬುಡಿದಿನ್ನೆ ವಂಶಿ @ ಗುರು (21) ಪಂಡಿತಿ ಕ್ರಾಂತಿ ಕುಮಾರ್ (36) ಮುಲ್ಕಿ ನಿವಾಸಿ ಇಬ್ರಾಹಿಂ ಪ್ರಾಯ (೩೫)ತೆಲಂಗಾಣ ನಿವಾಸಿ ಬಡೆ ಶ್ರೀನಿವಾಸ್ (38) ಹಾಗೂ ಉತ್ಸಲ ಸಂತೋಷ್ ಕೃಷ್ಣ (35) ಎಂದು ತಿಳಿದುಬಂದಿದೆ. ಆರೋಪಿಗಳಿಂದ 18 -ಮೊಬೈಲ್ ಫೋನ್,1- ಲ್ಯಾಪ್ಟಾಪ್.12-ಸಿಮ್ ಕಾರ್ಡ್,15- ಚೆಕ್ ಬುಕ್,೧೨ ಬ್ಯಾಂಕ್ ಪಾಸ್ ಬುಕ್,ಹಾಗೂ 18 – ಡೆಬಿಟ್ ಕಾರ್ಡ್ ಗಳನ್ನೂ ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ಸಾಮಾಜಿಕ ಮಾಧ್ಯಮಗಳ ಮುಖಾಂತರ ಅಕರ್ಷಕ ಜಾಹೀರಾತುಗಳನ್ನು ನೀಡಿ ಬ್ಯಾಂಕ್ ಖಾತೆದಾರರಿಗೆ ಶೇಕಡ 4 ರಿಂದ 6 ರಷ್ಟು ಕಮೀಷನ್ ನೀಡುವುದಾಗಿ ತಿಳಿಸಿ, ದುರಾಸೆಗೊಳಗಾದ ಬ್ಯಾಂಕ್ ಖಾತೆದಾರರಿಂದ ಸಂಪೂರ್ಣ ವಿವರ ವನ್ನು ಪಡೆದು ಓಟಿಪಿಯನ್ನು ಪಡೆದುಕೊಂಡು ವಿದೇಶದಲ್ಲಿರುವ ಸೈಬರ್ ವಂಚಕರಿಗೆ ರವಾನಿಸುತ್ತಿರುವುದು ತನಿಖೆಯ ವೇಳೆ ತಿಳಿದುಬಂದಿದೆ.

ಸೈಬ‌ರ್ ಅಪರಾಧ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದ ಒಂದು ಬ್ಯಾಂಕ್ ಖಾತೆಯ ಮೇಲೆ ದೇಶದದ್ಯಾಂತ NCRP PORTAL ನಲ್ಲಿ ಸುಮಾರು 05 ದೂರು ಗಳು ವರದಿಯಾಗಿವೆ. ಆರೋಪಿಗಳಿಂದ ಸ್ವಾಧೀನಪಡಿಸಿದ ಮೊಬೈಲ್ ಫೋನ್ ಹಾಗೂ ಲ್ಯಾಪ್ ಟಾಪ್ ಗಳನ್ನು ಪರಿಶೀಲನೆ ನಡೆಸಿದಾಗ ಒಟ್ಟು 72 ಖಾತೆಗಳ ವಿವರಗಳು ಕಂಡುಬಂದಿದ್ದು, ಅದರಲ್ಲಿ 30 ಬ್ಯಾಂಕ್ ಖಾತೆಗಳ ಮೇಲೆ ಒಟ್ಟು 272 ಕ್ಕೂ ಹೆಚ್ಚು NCRP PORTAL ನಲ್ಲಿ ದೂರುಗಳು ದಾಖಲಾಗಿದೆ. ಫೆ. ೨೬ ರಂದು ಒಂದೇ ದಿನ ಸೈಬರ್ ವಂಚನ ತಂಡವು 2 ಕೋಟಿಗೂ ಹೆಚ್ಚಿನ ಹಣವನ್ನು ವಹಿವಾಟು ನಡೆಸಿರುವುದು ತಿಳಿದುಬಂದಿದೆ. ಸೈಬರ್ ವಂಚಕರು ವಂಚನೆಗೆ ಬಳಕೆ ಮಾಡಿರುವ ಬ್ಯಾಂಕ್ ಖಾತೆಗಳ ಮೇಲೆ ದಾಖಲಾಗಿರುವ ಪ್ರಕರಣಗಳು ಹಾಗೂ ಹಣಕಾಸು ವಹಿವಾಟಿನ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular