ನವದೆಹಲಿ : ತೆಲಂಗಾಣದ ಒಂದು ಹೈದರಾಬಾದಿ ಬಿರಿಯಾನಿ ಅಂಗಡಿಯಲ್ಲಿ ನಡೆದ ತೆರಿಗೆ ವಂಚನೆ ಬಗ್ಗೆ ಬೆಳಕು ಚೆಲ್ಲಿದಾಗ, ದೇಶಾದ್ಯಂತ ಇಂಥ ರೆಸ್ಟೋರೆಂಟ್‌ಗಳಿAದ 70,೦೦೦ ಕೋಟಿ ರೂ. ತೆರಿಗೆ ವಂಚನೆ ಬೆಳಕಿಗೆ ಬಂದಿದೆ.
ಅನೇಕ ರೆಸ್ಟೋರೆಂಟ್‌ಗಳು ತಾವು ಗಳಿಸುತ್ತಿರುವುದಕ್ಕಿಂತ ಕಡಿಮೆ ಲೆಕ್ಕ ತೋರಿಸಿ, ತೆರಿಗೆ ವಂಚನೆ ಮಾಡುತ್ತಿವೆ. ರೆಸ್ಟೋರೆಂಟ್‌ಗಳು ಬಿಲ್ಲಿAಗ್ ಮಾಡುತ್ತಿರುವ ಕಂಪ್ಯೂಟರ್ ಮಾಹಿತಿಯನ್ನು ಪರಿಶೀಲಿಸಿದಾಗ ಈ ಮಾಹಿತಿ ಹೊರಬಿದ್ದಿದೆ. ಸುಮಾರು 1.77 ಲಕ್ಷ ರೆಸ್ಟೋರೆಂಟ್‌ಗಳು ಬಿಲ್ಲಿಂಗ್ ಸಾಫ್ಟ್ವೇರ್ ಬಳಸುತ್ತಿದ್ದು, ಕಂಪ್ಯೂಟರ್ ಟೂಲ್ಸ್ ಮತ್ತು ಎಐ ಬಳಸಿ 60 ಟರ‍್ರಾಬೈಟ್ಸ್ ಡೇಟಾ ವಿಶ್ಲೇಷಿಸಲಾಗಿದೆ. ಅದರಿಂದ ತಿಳಿದುಬಂದಿರುವ
ಮಾಹಿತಿಯೆAದರೆ, ಗ್ರಾಹಕರು ಹಣ ನೀಡಿದ ನಂತರ ಸಿಸ್ಟಂ ಒಳಗೇ ಬಿಲ್‌ಗಳನ್ನು ಅಳಿಸಿಹಾಕಲಾಗುತ್ತದೆ. ಈ ಮೂಲಕ ಕಡಿಮೆ ಆದಾಯ
ತೋರಿಸಲಾಗುತ್ತಿದೆ.
ಹೋಟೆಲ್ ಕ್ಯಾಶಿಯರ್ ಅಥವಾ ಸಿಬ್ಬಂದಿ ಮಾಲೀಕರನ್ನು ವಂಚಿಸದಂತೆ ಬಿಲ್ಲಿಂಗ್ ಸಾಫ್ಟ್ವೇರ್ ಬಳಸಲಾಗುತ್ತಿದೆ. ಎಲ್ಲ ಮಾರಾಟ ಸಾಫ್ಟ್ವೇರ್‌ನಲ್ಲಿ
ಎಂಟ್ರಿ ಮಾಡಲಾಗುತ್ತದೆ. ನಗದು ಮೂಲಕ ನಡೆ ಯುವ ವಹಿವಾಟಿನ ಕೆಲ ವೊಂದು ಬಿಲ್‌ಗಳನ್ನು ಮಾಲೀಕರು ಅಳಿಸಿ ವಂಚಿಸಲಾಗುತ್ತದೆ.
13,೦೦೦ ಕೋಟಿ ರೂ. ಮೌಲ್ಯದ ಬಿಲ್ ಡೆಲಿಟ್ ಆಗಿರುವುದು ಪತ್ತೆಯಾಗಿದ್ದು 6 ವರ್ಷಗಳಲ್ಲಿ ಬದಲಾಯಿಸಿದ ಬಿಲ್‌ಮೌಲ್ಯ 19,4೦೦ ಕೋ. ರೂ.ಆಗಿದೆ.
ಕರ್ನಾಟಕದಲ್ಲೇ ಅತಿ ಹೆಚ್ಚು ಬಿಲ್ ಡಿಲೀಟ್ ಮಾಡಲಾಗಿದೆ.ಕರ್ನಾಟಕದಲ್ಲಿ ಡಿಲೀಟ್ ಆದ ಬಿಲ್ ಮೊತ್ತ ೨೦೦೦ ಕೋಟಿ ರೂ ಯಾಗಿದೆ. ತೆಲಂಗಾಣದಲ್ಲಿ ಅಳಿಸಿಹಾಕಲಾದ ಬಿಲ್ ಮೊತ್ತ 15೦೦ ಕೋಟಿ ರೂ.ಯಾಗಿದೆ.


