Saturday, July 18, 2026
Homeದೇಶಮುಂಬೈ : ಬಾಂಗ್ಲಾದೇಶದ ಹಿಂದೂಗಳು ಹಕ್ಕುಗಳಿಗಾಗಿ ಹೋರಾಟಕ್ಕೆ ಇಳಿದರೆ ವಿಶ್ವದ ಎಲ್ಲಾ ಹಿಂದೂಗಳು ಸಹಾಯಕ್ಕೆ ಬರಲಿದ್ದೇವೆ...

ಮುಂಬೈ : ಬಾಂಗ್ಲಾದೇಶದ ಹಿಂದೂಗಳು ಹಕ್ಕುಗಳಿಗಾಗಿ ಹೋರಾಟಕ್ಕೆ ಇಳಿದರೆ ವಿಶ್ವದ ಎಲ್ಲಾ ಹಿಂದೂಗಳು ಸಹಾಯಕ್ಕೆ ಬರಲಿದ್ದೇವೆ : ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್.

ಮುಂಬೈ : ಬಾಂಗ್ಲಾದೇಶದ ಹಿಂದೂಗಳು ಅವರ ಹಕ್ಕುಗಳಿಗಾಗಿ ಹೋರಾಟಕ್ಕೆ ಇಳಿದರೆ ವಿಶ್ವದ ಎಲ್ಲಾ ಹಿಂದೂಗಳು ಅವರ ಸಹಾಯಕ್ಕೆ ಬರಲಿದ್ದೇವೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸಂಘದ ಉಪನ್ಯಾಸ ಮಾಲಿಕೆ ಕಾರ್ಯಕ್ರಮದಲ್ಲಿ ಬಾಂಗ್ಲಾ ಮಧ್ಯಂತರ ಸರ್ಕಾರಕ್ಕೆ ಎಚ್ಚರಿಕೆಯ
ಸಂದೇಶ ರವಾನಿಸಿದ್ದಾರೆ.

ಮುಂಬೈಯಲ್ಲಿ ನಡೆದ ಸಂಘದ `ನೂರು ವರ್ಷಗಳ ಪಯಣ: ಹೊಸ ದಿಗಂತ’ ಎಂಬ ಉಪನ್ಯಾಸ ಮಾಲಿಕೆಯ ಎರಡನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿ, ಬಾಂಗ್ಲಾದಲ್ಲಿ 1.25 ಕೋಟಿ ಹಿಂದುಗಳಿದ್ದು, ಅವರು ಅಲ್ಲಿಯೇ ನೆಲೆಸಿ ಅವರ ಹಕ್ಕುಗಳಿಗಾಗಿ ಹೋರಾಟ ಮಾಡಿದರೆ ವಿಶ್ವದಲ್ಲಿರುವ ಎಲ್ಲಾ ಹಿಂದೂಗಳು ಅವರ ಬೆಂಬಲಕ್ಕೆ ನಿಂತು ಸಹಾಯ ಮಾಡುತ್ತೇವೆ ಎಂದು ವಿಶ್ವ ಹಿಂದೂ ಸಮಾಜಕ್ಕೆ ಒಗ್ಗಟ್ಟಿನ ಮಂತ್ರ ಸಾರಿದ್ದಾರೆ.

ಸಂಘ ಕೆಳಗೆ ಇಳಿಎನ್ನುವ ತನಕ ಮುನ್ನಡೆಸುತ್ತೇನೆ ಆರೆಸ್ಸೆಸ್ ಕೆಳಗಿಳಿಯುವಂತೆ ಹೇಳಿದರೆ ಸರಸಂಘಚಾಲಕರಾಗಿಇರುತ್ತೇನೆ ಎಂದು ಮೋಹನ್ ಭಾಗವತ್ ಹೇಳಿಕೊಂಡಿದ್ದಾರೆ. ಆರೆಸ್ಸೆಸ್ ಮುಖ್ಯಸ್ಥರ ಆಯ್ಕೆಗೆ ಚುನಾವಣೆ ನಡೆಯುವುದಿಲ್ಲ. ವಿಭಾಗೀಯ ಮುಖ್ಯಸ್ಥರಲ್ಲಿ ಯಾರಾದರೂ ಉತ್ತಮ ಸಂಘಟಕರನ್ನು ಸAಘದ ಮುಖ್ಯಸ್ಥರನ್ನಾಗಿ ನೇಮಿಸಲಾಗುತ್ತದೆ. ಆದರೆ ೭೫ ತುಂಬಿದ ನಂತರ ಯಾವ ಹುದ್ದೆ ಹೊಂದದೇ ಸಂಘದಲ್ಲಿ ಕಾರ್ಯನಿರ್ವಹಿಸಬೇಕೆಂಬ ಪದ್ಧತಿ ಇದೆ ಎಂದರು.

ಆರೆಸ್ಸೆಸ್‌ನಲ್ಲಿ ಸಮುದಾಯ ಆಧಾರಿತ ಪ್ರಾತಿನಿಧ್ಯ ಇಲ್ಲ. ತಮ್ಮ ಕಾರ್ಯನಿರ್ವಹಣೆ ಮೇಲೆ ಹಂತಹAತವಾಗಿ ಶ್ರೇಣಿಗಳ ಮೂಲಕ ಸ್ವಯಂಸೇವಕರು ಬಡ್ತಿ ಪಡೆಯುತ್ತಾರೆ. ಬ್ರಾಹ್ಮಣ ಸಮುದಾಯ ಆರೆಸ್ಸೆಸ್ ಸಂಘಟನೆ ಯನ್ನು ಹುಟ್ಟುಹಾಕಿದ್ದರಿಂದ ಬ್ರಾಹ್ಮಣ ಸಂಘಟನೆ ಎಂದು ಹಣೆಪಟ್ಟಿ ಹಾಕಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular