Tuesday, July 21, 2026
Homeರಾಜ್ಯಕೋಲಾರ : ಸೇನೆಗೆ ತೆರಳಬೇಕಿದ್ದ ಯೋಧ ಹೃದಯಾಘಾತದಿಂದ ಸಾವು..!

ಕೋಲಾರ : ಸೇನೆಗೆ ತೆರಳಬೇಕಿದ್ದ ಯೋಧ ಹೃದಯಾಘಾತದಿಂದ ಸಾವು..!

ಕೋಲಾರ : ಇಂದು ಸೇನೆಗೆ ತೆರಳಬೇಕಿದ್ದ ಯೋಧ ಹೃದಯಾಘಾತದಿಂದ ಸಾವನಪ್ಪಿದ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲುಕಿನ ಆಚಂಪಲ್ಲಿ ಗ್ರಾಮದಲ್ಲಿ ನಡೆದಿದೆ. ಮುನಿನಾರಾಯಣ (36) ಸಾವನ್ನಪ್ಪಿರುವ ಯೋಧ.

ಆ.18 ರಿಂದ, ಸೆಪ್ಟೆಂಬರ್ 18 ವರೆಗೂ ರಜೆಯ ಮೇಲೆ ಬಂದಿದ್ದ ಮುನಿನಾರಾಯಣ ಬರ್ಮಾ ಗಡಿಯಲ್ಲಿ ಕೆಲಸಕ್ಕೆ ನಿಯೋಜನೆ ಆಗಿದ್ದರು. ಸೆಪ್ಟೆಂಬರ್ 18 ಕ್ಕೆ ಕರ್ತವ್ಯಕ್ಕೆ ವಾಪಾಸ್ ಆಗಲು, ನಾಳೆ ಹೊರಡಬೇಕಿದ್ದ ಮುನಿನಾರಾಯಣ ಇಂದು ಮನೆಯಲ್ಲಿ ನಿದ್ರಾಸ್ತಿತಿಯಲ್ಲಿಯೇ ಹೃದಯಾಘಾತ ಸಂಭವಿಸಿದೆ.

ಕಳೆದ 17 ವರ್ಷದಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮುನಿನಾರಾಯಣ ಮದುವೆಯಾಗಿ ಪತ್ನಿ, ಇಬ್ಬರು ಮಕ್ಕಳು ಹಾಗೂ ತಾಯಿಯನ್ನು ಅಗಲಿದ್ದಾರೆ.
ಯೋಧ ಮುನಿನಾರಾಯಣ ನಿಧನಕ್ಕೆ ಸ್ನೇಹಿತರು ಗ್ರಾಮಸ್ತರ ಸಂತಾಪ ವ್ಯಕ್ತಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular