ಮಂಗಳೂರು : 78 ನೇ ಸ್ವಾತಂತ್ರೋತ್ಸವದ ಪ್ರಯುಕ್ತ ಸೆಂಟ್ .ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ .ಆಪರೇಟಿವ್ ಸೊಸೈಟಿ ಉರ್ವ ಶಾಖೆ ವತಿಯಿಂದ ಮಂಗಳೂರು ನಗರದ ಕಾರ್ಸ್ಟ್ರೀಟ್ ಬಳಿ ಇರುವ ಚೇತನ ಸ್ಪೆಷಲ್ ಸ್ಕೂಲ್ ನ 120 ವಿದ್ಯಾರ್ಥಿಗಳಿಗೆ ಅಗತ್ಯ ವಸ್ತುಗಳ ವಿತರಣಾ ಕಾರ್ಯಕ್ರಮ ಇಂದು ಇಂದು ಶಾಲೆಯಲ್ಲಿ ನಡೆಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ರವರು ನೆರೆವೇರಿಸಿದರು.ಉದ್ಘಾಟನೆಯ ಬಳಿಕ ಮಾತನಾಡಿದ ಶಾಸಕ ವೇದವ್ಯಾಸ್ ಕಾಮತ್, ಸೆಂಟ್ .ಮಿಲಾಗ್ರಿಸ್ ಸೌಹಾರ್ದ ಕೋ .ಆಪರೇಟಿವ್ ಸೊಸೈಟಿ ಉರ್ವ ಶಾಖೆ ಚೇತನ ವಿಶೇಷ ಶಾಲೆಗೆ ನೀಡಿದ ಕೊಡುಗೆಯನ್ನು ಶ್ಲಾಘಿಸಿದರು. ಸಮಾಜದಲ್ಲಿ ಕೋ .ಆಪರೇಟಿವ್ ಸೊಸೈಟಿ ಸಂಸ್ಥೆಗಳು ಇಂತಹ ಕಾರ್ಯದಲ್ಲಿ ತೊಡಗಿಸಿಕೊಂಡು ಸಮಾಜದ ಏಳಿಗೆಗೆ ಕೈಜೋಡಿಸಿಕೊಂಡಿರುವುದು ಒಂದು ಉತ್ತಮವಾದ ಕೆಲಸವೆಂದರು.ಇದರಂತೆಯೇ ಈ ಸೊಸೈಟಿಯ ಸಿಬ್ಬಂದಿಗಳು ಮುಂದಿನ ದಿನಗಳಲ್ಲಿ ಇನ್ನಷ್ಟು ಇಂತಹ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಿ ಎಂದು ಆಶಿಸಿದರು. ಈ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.






ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೇವಾ ಭಾರತೀಯ (ಸಿಇಓ)ಪ್ರಥ್ವಿ ಪಾಲ್ ರವರು ವಹಿಸಿದರು. ಕಾರ್ಯಕ್ರಮವನ್ನುಶ್ರೀಮತಿ ಪ್ರತಿಮಾ ನಿರೂಪಿಸಿದರು,ಈ ಸಂಸ್ಥೆಯ ಕಿರು ಪರಿಚವನ್ನು ಕುಮಾರಿ ರಕ್ಷಿತಾರವರು ವಿವರಿಸಿದರು ಹಾಗೂ ಸ್ವಾಗತ ಭಾಷಣವನ್ನು ಕುಮಾರಿ ಸಿಂಚನ ನೆರೆವೇರಿಸಿ ಧನ್ಯವಾದವನ್ನು ಮನೀಶ್ ರವರು ನೆರೆವೇರಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಸ್ಥಳೀಯ ಕಾರ್ಪೊರೇಟರ್ ಪೂರ್ಣಿಮಾ , ರಾಮಣ್ಣ ಶೆಟ್ಟಿ ಶಾಲೆ ತೋಕೂರಿನ ಮುಖ್ಯೋಪಾಧ್ಯಾಯರಾದ ಶ್ರೀಲತಾ ರಾವ್,ಉದ್ಯಮಿ ಶ್ರೀನಿವಾಸ್ ಕಾಮತ್ ,ಶ್ರೀಮತಿ ಸುಪ್ರಿತಾ ಹಾಗೂ ನಾಗರಾಜ್ ಮಡಿವಾಳ್ (ಡೆವೆಲೊಪೇಮೆಂಟ್ ಮ್ಯಾನೇಜರ್ ) ಹಾಗೂ ಬ್ರಾಂಚ್ ಮ್ಯಾನೇಜರ್ ಅಮಿತ್ ಶೆಟ್ಟಿ ಯವರು ಉಪಸ್ಥಿತರಿದ್ದರು.


