Friday, November 22, 2024
Flats for sale
Homeಜಿಲ್ಲೆಮಂಗಳೂರು ; ಕಾಂಗ್ರೆಸ್ ಗೆ ಕರ್ನಾಟಕ ಎಂ ಟಿ ಎಂ ಇದ್ದ ಹಾಗೆ ; ಅಣ್ಣ...

ಮಂಗಳೂರು ; ಕಾಂಗ್ರೆಸ್ ಗೆ ಕರ್ನಾಟಕ ಎಂ ಟಿ ಎಂ ಇದ್ದ ಹಾಗೆ ; ಅಣ್ಣ ಮಲೈ.

ಮಂಗಳೂರು ; ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ಗ್ರಾಮ ವಿಕಾಸ ಯಾತ್ರೆ ಸಮಾರೋಪ ಸಮಾರಂಭ ವನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಿಂಗಂ ಅಣ್ಣ ಮಲೈ.

ಹಿಂದೆ ಕೋಮು ಗಲಭೆಗಳಿಂದ ಬಂಟ್ವಾಳ ನಲುಗಿತ್ತು ,ಕಳೆದ ನಾಲ್ಕು ವರೆ ವರ್ಷ ದಲ್ಲಿ ಬಂಟ್ವಾಳ ಚಿತ್ರಣ ಬದಲಾಗದೆ. ಬಂಟ್ವಾಳ ಶಾಂತವಾಗಿದೆ ಬಹಳ ಅಭಿವೃದ್ದಿ ಯಾಗಿದೆ, ಬಂಟ್ವಾಳದಲ್ಲಿ ಸಾಮರಸ್ಯ ನೆಲೆ ಸಿದೆ

ತಮಿಳು ನಾಡಿನಲ್ಲಿ ಡಿ ಎಂ ಕೆ ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದೆ, ಡಿ ಎಂ ಕೆ ಮತ್ತು ಕಾಂಗ್ರೆಸ್ ನವರು ಹೇಳಿದ ಸುಳ್ಳನ್ನೇ ಕರ್ನಾಟಕ ದಲ್ಲಿ ರಿಪೀಟ್ ಆಗ್ತಿದೆ.ತಮಿಳು ನಾಡಿನ ರೇಷನ್ ಕಾರ್ಡ್ ಗೆ ಪ್ರತಿ ತಿಂಗಳು 1000 ಸಾವಿರ ಕೊಡುವುದಾಗಿ ಹೇಳಿದ್ದರು

21 ತಿಂಗಳಾಯಿತು ಯಾವೊಬ್ಬರಿಗೂ ಈ ವರವಗೂ 1ರೂಪಾಯಿ ಬಂದಿಲ್ಲ
ಕೇವಲ ಸುಳ್ಳು ಹೇಳಿಕೊಂಡೆ ಅಧಿಕಾರಕ್ಕೆ ಬಂದಿದ್ದಾರೆ.ಅದೇ ರೀತಿ ಕರ್ನಾಟಕ ದಲ್ಲಿ ಕಾಂಗ್ರೆಸ್ ಮತ್ತೇ ಸುಳ್ಳು ಭರವಸೆ ನೀಡುತ್ತಿದೆ , ಪ್ರಿಯಾಂಕಾ ಗಾಂಧಿ ಅವರು ಬಂದು ಪ್ರತಿ ಮನೆಯ ಮಹಿಳೆಗೆ 2000 ಸಾವಿರ ಕೊಡುತ್ತೇವೆ ಅಂತ ಹೇಳುತಿದ್ದಾರೆ.ಕರ್ನಾಟಕ ದ ಜನ ಈ ಸುಳ್ಳು ಭರವಸೆ ನಂಬ ಬಾರದು ಜಾಗೃತ ರಾಗ ಬೇಕು, ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದು ಈ ಎ ಟಿ ಎಂ ಬಳಸಿಕೊಳ್ಳಲು ಪ್ಲಾನ್ ಮಾಡಿದೆ ,ಮುಂದಿನ ಲೋಕಸಭಾ ಚುನಾವಣೆಗೆ ಈ ಎ ಟಿ ಎಂ ಅನ್ನು ಬಳಸಿಕೊಳ್ಳಲು ಕಾಂಗ್ರೆಸ್ ಪ್ಲಾನ್ ಮಾಡಿದೆ.ಇದಕ್ಕೆ ಕರ್ನಾಟಕದ ಜನ ಅವಕಾಶ ನೀಡ ಬಾರದು ಎಂದು ಗರಂ ಆಗಿದ್ದಾರೆ.

ಸಮಾರೋಪ ಸಮಾರಂಭದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿ ಇತ್ತೀಚೆಗೆ ಇಲ್ಲಿಗೆ ಕಾಂಗ್ರೆಸ್ ನ ಪ್ರಜಾಧ್ವನಿ ಯಾತ್ರೆ ಬಂದಿತ್ತು,ಪ್ರಜೆಗಳ ಧ್ವನಿ ಕೇಳಿದ್ರೆ ಮಕ್ಕಳ ಅನ್ನ ಕಿತ್ತವರು ಅನ್ನೋ ಧ್ವನಿ ಕೇಳ್ತಾ ಇತ್ತು, ಕಲ್ಲಡ್ಕದ‌ ಮಕ್ಕಳ ಅನ್ನ ‌ಕಿತ್ತ ಪಾಪಿಗಳು ಅನ್ನ ಧ್ವನಿ ಕೇಳ್ತಾ ಇತ್ತು, ಇಲ್ಲಿನ ಕೊಲೆಗಳು‌ ಮತ್ತು ಕೊಲೆ ಹಿಂದೆ ಇರೋರಿಗೆ ಬೆಂಬಲಕ್ಕೆ ನಿಂತ ಕೊಲೆಗಡುಕರು ಅನ್ನೋ ಧ್ವನಿ ಕೇಳ್ತಾ ಇತ್ತು,ಎದ್ದರೆ ಕೂರಲು ಆಗದ, ಕೂತರೆ ನಿಲ್ಲಲು ಆಗದ ಶಾಸಕ ನಮ್ಮವರಲ್ಲ , ಇವರ ಪ್ರಜಾಧ್ವನಿ ಯಾತ್ರೆ ಕೇವಲ ಬಿಜೆಪಿ ಬೈಯ್ಯುವ ಯಾತ್ರೆ , ದೈವ ವಿರೋಧಿಗಳು, ಕುಂಕುಮ ಕಂಡ್ರೆ ಭಯ ಪಡೋರು ನೈಜ ಹಿಂದುಗಳಲ್ಲ ,ಕೇಸರಿ ಕಂಡರೆ ಭಯ ಪಡೋರು ನೈಜ ಹಿಂದುಗಳಲ್ಲ,ನೈಜ ಹಿಂದುಗಳು ಪಂಜುರ್ಲಿ ದೈವ ,ದೇವರ ಹತ್ರ ಹೋಗ್ತಾರೆ ,ಆದರೆ ಈ ನಕಲಿ ಹಿಂದೂಗಳು ಅದರ ಬಳಿ ಯಾವತ್ತೂ ಹೋಗಲ್ಲ,ಜೈ ಶ್ರೀರಾಮ್ ಅನ್ನೋರು, ರಾಮ ಮಂದಿರದ ತುಡಿತ ಇದ್ದವರು ನೈಜ ಹಿಂದೂಗಳು,ರಾಮ ಮಂದಿರ ವಿರೋಧಿಸಿದವರು ನಕಲಿ ಹಿಂದೂಗಳು

ಪ್ರಜಾಧ್ವನಿಯಲ್ಲಿ ನಿನ್ನೆ ವೇದಿಕೆ ಮೇಲೆ ಮಾತನಾಡಿದವರೆಲ್ಲಾ ನಕಲಿ ಹಿಂದುಗಳು ,ಈಗ 200 ಯುನಿಟ್ ಕರೆಂಟ್ ಫ್ರೀ ಕೊಡ್ತಾರಂತೆ , ಬೆಳ್ಳಾರೆಯ ಸಾಯಿ ಗಿರಿಧರ್ ಕರೆಂಟ್ ಇಲ್ಲ ಅಂತ ಡಿಕೆಶಿ ಗೆ ಕಾಲ್ ಮಾಡಿದ್ರು,ಎಂಥ ಮಾರ್ರೆ ಸಾವು ಕರೆಂಟ್ ಇಲ್ಲ ಅಂತ ಗಿರಿಧರ್ ರೈ ಹೇಳಿದ್ರು,ಆದರೆ ನನ್ನ ಸಾವಿನ ಬಗ್ಗೆ ಮಾತನಾಡಿದ ಅಂತ ಡಿಕೆಶಿ, ಗಿರಿಧರ್ ರೈಯನ್ನ ಪೊಲೀಸ್ ಮೂಲಕ ಅರೆಸ್ಟ್ ಮಾಡಿಸಿದ್ರು,ಇಂಥವರು ಇನ್ನೂರು ಯುನಿಟ್ ಕರೆಂಟ್ ಫ್ರೀ ಕೊಡ್ತಾರಂತೆ.

ಮಕ್ಕಳ ಮನಸ್ಸಲ್ಲೂ ಜಾತಿ ವಿಷ ಬೀಜ ಭಿತ್ತುವ ಕೆಲಸ ಕಾಂಗ್ರೆಸ್ ಮಾಡಿತ್ತು,ಮುಂಚೆ ಒಬ್ಬ ಇಲ್ಲಿ ವಿವಾದಿತ ರಾಜಕಾರಣಿ ಇದ್ರು,ಆದ್ರೆ ನಮ್ಮ‌ ರಾಜೇಶ್ ನಾಯ್ಕ್ ವಿವಾದ ಇಲ್ಲದ ರಾಜಕಾರಣಿ,ಪ್ರಜೆಗಳ ಧ್ವನಿ ಅಂದ್ರೆ ಪ್ರಜೆಗಳು ಅಭಿಮಾನದಿಂದ ‌ಮಾತನಾಡೋದು,ನಕಲಿ ಹಿಂದುಗಳ ಬಗ್ಗೆ ಎಚ್ಚರವಿರಲಿ, ಜೇಬುಗಳ್ಳರಿದ್ದಾರೆ ಎಚ್ಚರಿಕೆ ಎನ್ನುವ ಹಾಗೆ ಎಂದು ಸಿ.ಟಿ ರವಿ ಹೇಳಿದ್ದಾರೆ.

ಈ ಸಂದರ್ಭದಲ್ಲಿ ಪಕ್ಷದ ಮುಖಂಡರುಗಳು ,ಕಾರ್ಯಕರ್ತರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular