Saturday, March 14, 2026
Flats for sale
Homeರಾಜ್ಯರಾಮನಗರ : ಮೈಕ್ರೋಫೈನಾನ್ಸ್ ನವರ ಕಿರುಕುಳ ; ಸಾಲ ಪಡೆದು ಕಟ್ಟಲಾಗದೆ ಮನೆಗೆ ಬೀಗ ಹಾಕಿ...

ರಾಮನಗರ : ಮೈಕ್ರೋಫೈನಾನ್ಸ್ ನವರ ಕಿರುಕುಳ ; ಸಾಲ ಪಡೆದು ಕಟ್ಟಲಾಗದೆ ಮನೆಗೆ ಬೀಗ ಹಾಕಿ ಊರು ತೊರೆದ 8 ಕುಟುಂಬ..!

ರಾಮನಗರ : ಮೈಕ್ರೋಫೈನಾನ್ಸ್ನಲ್ಲಿ ಸಾಲ ಪಡೆದು ಕಟ್ಟಲಾಗದೆ ಊರು ತೊರೆದು ಮನೆಗೆ ಬೀಗ ಹಾಕಿ ಹೋಗಿರುವ ಘಟನೆ ರಾಮನಗರ ತಾಲ್ಲೂಕಿನ ಕೂಟಗಲ್ ಹೋಬಳಿಯ ಕೂನಮುದ್ದನಹಳ್ಳಿಯಲ್ಲಿ ನಡೆದಿದೆ.

ಕೂಲಿ ನಾಲಿ ಮಾಡಿ ಜೀವನ ಕಟ್ಟಿಕೊಂಡಿದ್ದ ಇರುಳಿಗ ಕುಟುಂಬಗಳು ಮೈಕ್ರೋಫೈನಾನ್ಸ್ನಲ್ಲಿ ಪಡೆದ ಸಾಲ ಕಟ್ಟಲಾಗದೆ ಗ್ರಾಮದಲ್ಲಿ 8 ಕುಟುಂಬಗಳು ಮನೆಗೆ ಬೀಗಹಾಕಿ ಹೆಂಡತಿ, ಮಕ್ಕಳು ಸಮೇತ ಊರು ಬಿಟ್ಟಿದ್ದಾರೆ. ಗ್ರಾಮೀಣ ಭಾಗದಲ್ಲಿ ಮೈಕ್ರೋಫೈನಾನ್ಸ್ ನವರು ಸುಲಭವಾಗಿ ಸಾಲ ನೀಡಿ ವಾರದ ಕಂತುಗಳಲ್ಲಿ ಸಾಲ ಮರುಪಾವತಿಸಿಕೊಳ್ಳುವ ಕಾರಣ ಇಂತಹ ಕೂಲಿ ನಾಲಿ ಮಾಡುವ ಕುಟುಂಬಗಳನ್ನೇ ಹೆಚ್ಚಾಗಿ ಆಯ್ಕೆ ಮಾಡಿಕೊಂಡು ಮೂರು, ನಾಲ್ಕು ಜನರು ಸೇರಿ ಒಂದು ಗುಂಪಾಗಿ ಮಾಡಿಕೊಂಡು ಸಾಲ ನೀಡಿ ಹಾಗೆಯೇ ವಸೂಲಾತಿಯನ್ನು ಕಟ್ಟು ನಿಟ್ಟಾಗಿ ಮಾಡುತ್ತವೆ.

ಕೂನಮುದ್ದನಹಳ್ಳಿಯಲ್ಲಿ ಸಾಲ ಪಡೆದ ಇರುಳಿಗ ಕುಟುಂಬಗಳಿಗೆ ಯಾವುದೇ ಜಮೀನು ಇಲ್ಲ ಚಿಕ್ಕ ಚಿಕ್ಕ ಮನೆಗಳೇ ಇವರ ಆಧಾರ ಸಣ್ಣಪುಟ್ಟ ಕೂಲಿ ಕೆಲಸ, ಮೇಕೆ, ಕುರಿ ಸಾಕಣೆ ಇವರ ದಿನನಿತ್ಯದ ಕಾಯಕವಾಗಿದೆ. ಇಂತಹ ಸನ್ನಿವೇಶದಲ್ಲಿ ಸಾಲ ತೀರಿಸಲಾಗದೆ ಅವರ ವಸೂಲಾತಿ ಕಾಟ ತಾಳಲಾರದೆ ಮನೆ ಬಿಟ್ಟು ಹೋಗಿದ್ದಾರೆ.

ಕೂನಮುದ್ದನಹಳ್ಳಿಯಲ್ಲಿ ಇರುಳಿಗ ಕುಟುಂಬದ ಸುಮಾರು 60 ಮನೆಗಳಿದ್ದು ಇಲ್ಲಿರುವ ಬಹುತೇಕ ಕುಟುಂಬಗಳು ಕೂಲಿ ಮಾಡಿ ಜೀವನ ನಡೆಸಬೇಕು. ಇಂತಹ ಸಂದರ್ಭದಲ್ಲಿ ಫೈನಾನ್ಸ್ ನವರು ಬಂದು ಸಾಲ ನೀಡಿದ್ದಾರೆ. ಮೊದ ಮೊದಲು ಸರಿಯಾಗೇ ಸಾಲ ಪಾವತಿ ಮಾಡುತ್ತಿದ್ದ ಇವರಿಗೆ ನಂತರದಲ್ಲಿ ಇವರ ಮೇಲೆ ಇನ್ನೂ ಹೆಚ್ಚಿನ ನಂಬಿಕೆ ಬಂದು ಲಕ್ಷಗಟ್ಟಲೆ ಸಾಲ ನೀಡಿದ್ದಾರೆ.

ಸಾಲ ಪಡೆದವರ ಕುಟುಂಬಗಳ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ ಅಂದು ಕೂಲಿ ಮಾಡಿದರೆ ಜೀವನ ಎನ್ನುವಂತ ಪರಿಸ್ಥಿತಿ ಇಂತಹ ಸಂಧರ್ಭದಲ್ಲಿ ಪ್ರತೀವಾರ ಕಂತು ರೂಪದಲ್ಲಿ ಹಣ ಪಾವತಿಸಬೇಕಿರುವ ಕಾರಣ ಪಡೆದ ಸಾಲ ವಾರಕ್ಕೆ ಕಟ್ಟಲಾಗದೆ ಜೊತೆಗೆ ಮೈಕ್ರೋಫೈನಾನ್ಸ ನವರ ಕಿರುಕುಳ ತಾಳದೆ ಮನೆ ಬಿಟ್ಟು ಹೋಗಿದ್ದಾರೆ ಎಂದು ಸ್ಥಳೀಯರು ಹೇಳುತ್ತಾರೆ. ಜಿಲ್ಲೆಯಲ್ಲಿ ಎಗ್ಗಿಲ್ಲದೆ ಮೈಕ್ರೋಫೈನಾನ್ಸ್ ಹಾವಳಿ ಹೆಚ್ಚಾಗಿದೆ ಹೆಚ್ಚಿನ ಬಡ್ಡಿ ವಿತರಿಸಿ ಸಾಲ ಕಟ್ಟುವಂತೆ ಕಿರುಕುಳ ಮಾನಸಿಕ ಒತ್ತಡ ಮೈಕ್ರೋಫೈನಾನ್ಸ್ ಮಾಡುತ್ತಿದೆ.

ಇದರ ಉಪಟಳ ತಡೆಗಟ್ಟಬೇಕು ಎಂದು ಇತ್ತೀಚೆಗೆ ರಾಮನಗರದಲ್ಲಿ ಮಹಿಳಾ ಸಂಘಟನೆಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. ಆದರೂ ಮೈಕ್ರೋ ಫೈನಾನ್ಸ ರವರು ಕಿರುಕುಳ ನೀಡುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular