Thursday, March 12, 2026
Flats for sale
Homeಸಿನಿಮಾಉಡುಪಿ : ನಟ ದರ್ಶನ್‌ ಬಿಡುಗಡೆಗೆ ಪತ್ನಿ ವಿಜಯಲಕ್ಷ್ಮಿಯಿಂದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ನವ ಚಂಡಿಕಾ...

ಉಡುಪಿ : ನಟ ದರ್ಶನ್‌ ಬಿಡುಗಡೆಗೆ ಪತ್ನಿ ವಿಜಯಲಕ್ಷ್ಮಿಯಿಂದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ನವ ಚಂಡಿಕಾ ಹೋಮ!

ಉಡುಪಿ : ಸಂಕಟ ಬಂದಾಗ ವೆಂಕಟರಮನ ಎಂಬ ಮಾತಿನಂತೆ ರೇಣುಕಾ ಸ್ವಾಮಿ ಮರ್ಡರ್​ ಕೇಸ್​ನಲ್ಲಿ ಎ2 ಆಗಿರುವ ದರ್ಶನ್​ ಅವರು ಜೈಲಿನಲ್ಲಿ ದಿನ ಕಳೆಯುತ್ತಿದ್ದು ಅವರಿಗೆ ಜಾಮೀನು ಕೊಡಿಸಲು ಕುಟುಂಬದವರು ಕಷ್ಟಪಡುತ್ತಿದ್ದಾರೆ.ಈ ನಡುವೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಅವರು ಆಪ್ತರ ಜೊತೆ ಭೇಟಿ ನೀಡಿ ದೇವಸ್ಥಾನದಲ್ಲಿ ಗುರುವಾರ ಬೆಳಗ್ಗೆ ದರ್ಶನ್‌ ಬಿಡುಗಡೆ ಸಂಬಂಧ ನವ ಚಂಡಿಕಾ ಹೋಮ ಪೂಜೆಯಾ ಮೊರೆಹೋಗಿದ್ದಾರೆ. ಮುಂಜಾನೆ ಯಾಗಶಾಲೆಯಲ್ಲಿ ಚಂಡಿಕಾಹೋಮ ನಡೆದ ಬಳಿಕ ದರ್ಶನ್ ಬಂಧಮುಕ್ತಿಗಾಗಿ ವಿಜಯಲಕ್ಷ್ಮಿ ಪ್ರಾರ್ಥನೆ ಮಾಡಿದ್ದಾರೆ.

ಕಾನೂನಿನ ಹೋರಾಟದ ಬಗ್ಗೆ ವಕೀಲರ ಜೊತೆ ಸಮಾಲೋಚನೆ ನಡೆಸುತ್ತಿದ್ದಾರೆ. ಈ ನಡುವೆ ವಿಜಯಲಕ್ಷ್ಮಿ ಅವರು ದೇವರ ಮೊರೆ ಹೋಗಿದ್ದಾರೆ. ಈ ನಡುವೆ ವಿವಿಧ ದೇವಾಲಯಗಳಿಗೆ ತೆರಳುತ್ತಿದ್ದು ವಿಜಯಲಕ್ಷ್ಮಿ ಅವರು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.

ಮನೆಯಿಂದ ಊಟ, ಹಾಸಿಗೆ ಮತ್ತು ಬಟ್ಟೆ ತರಿಸಿಕೊಳ್ಳಲು ದರ್ಶನ್​ ಅವರಿಗೆ ಅವಕಾಶ ಸಿಕ್ಕಿಲ್ಲ. ಇದರಿಂದಾಗಿ ಅವರಿಗೆ ಜೈಲುವಾಸ ಇನ್ನಷ್ಟು ಕಷ್ಟ ಆಗಲಿದೆ. ಊಟದ ಸಮಸ್ಯೆಯಿಂದ ಅವರು ದೇಹದ ತೂಕ ಕಳೆದುಕೊಳ್ಳುತ್ತಿದ್ದಾರೆ. ಅಲ್ಲದೇ ಅವರಿಗೆ ಅಜೀರ್ಣ, ಅತಿಸಾರ ಮುಂತಾದ ಸಮಸ್ಯೆಗಳು ಕಾಣಿಸಿಕೊಂಡಿವೆ ಎನ್ನಲಾಗಿದೆ. ಜಾಮೀನು ಸಿಗುವ ತನಕ ಜೈಲಿನಲ್ಲೇ ಕಾಲ ಕಳೆಯಬೇಕಿದೆ. ಒಟ್ಟಿನಲ್ಲಿ ರೇಣುಕಾ ಸ್ವಾಮಿ ಹತ್ಯೆ ಪ್ರಕರಣ ನಟ ದರ್ಶನ ಗೆ ಜೈಲೂಟ ಗ್ಯಾರಂಟಿಯಾದಂತಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular