Wednesday, July 22, 2026
Homeಜಿಲ್ಲೆಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಖಾಝಿಯಾಗಿ ಸೈಯ್ಯದ್ ನಾಸರ್ ತಂಜಳ್ ಅಧಿಕಾರ ಸ್ವೀಕಾರ.

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಖಾಝಿಯಾಗಿ ಸೈಯ್ಯದ್ ನಾಸರ್ ತಂಜಳ್ ಅಧಿಕಾರ ಸ್ವೀಕಾರ.

ಮಂಗಳೂರು : ತ್ಯಾಖಾ ಅಹ್ಮದ್ ಮುಸ್ಲಿಯಾರ್ ಅವರ ನಿಧನದಿಂದ ತೆರವಾದ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಹುದ್ದೆಗೆ ಪಾಣಕ್ಕಾಡ್ ಸೈಯ್ಯದ್ ನಾಸರ್ ಅಬ್ದುಲ್ ಹಯ್ ಶಿಹಾಬುದ್ದೀನ್ ತಂಜಳ್ ಅವರು ಬುಧವಾರ ಅಧಿಕಾರ ಸ್ವೀಕರಿಸಿದರು.

ಕೇರಳದ ಮಲಪ್ಪುರಂ ಜಿಲ್ಲೆಯ ಪೂವಾಡ್ ಮೂಲದ ತಂಜಳ್ ಅವರು ಧಾರ್ಮಿಕ ಶಿಕ್ಷಣ ಕ್ಷೇತ್ರದಲ್ಲಿ ದೀರ್ಘ ಅನುಭವ ಹೊಂದಿದ್ದು, ಹಲವು ಮಸೀದಿಗಳು ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಖತೀಬ್, ಮುದರ್ರಿಸ್ ಮತ್ತು ಖಾಝಿಯಾಗಿ ಸೇವೆ ಸಲ್ಲಿಸಿದ್ದಾರೆ. 2009ರಿಂದ ಕಲ್ಲಿಕೋಟೆಯ ಗ್ರಾಂಡ್ ಖಾಝಿಯಾಗಿ ಕಾರ್ಯನಿರ್ವಹಿಸುತ್ತಿರುವ ಅವರು, ಪ್ರಸ್ತುತ ಕಲ್ಲಿಕೋಟೆ, ಮಲಪ್ಪುರಂ, ಪಾಲಕ್ಕಾಡ್ ಹಾಗೂ ತ್ರಿಶೂರ್ ಜಿಲ್ಲೆಗಳ 370ಕ್ಕೂ ಹೆಚ್ಚು ಮೊಹಲ್ಲಾಗಳ ಖಾಝಿಯಾಗಿದ್ದಾರೆ.

ವಯನಾಡಿನ ಇಮಾಮ್ ಗಝಾಲಿ ಅಕಾಡೆಮಿ ಹಾಗೂ ರಶೀದಿಯಾ ಅರಬಿಕ್ ಕಾಲೇಜಿನ ಪ್ರಾಂಶುಪಾಲರಾಗಿರುವ ತಂಜಳ್ ಅವರು, ಸುನ್ನಿ ಮಹಲ್ಸ್ ಫೆಡರೇಶನ್, ಜಿಲ್ಲಾ ಮಸ್ಲಹತ್ ಸಮಿತಿ ಸೇರಿದಂತೆ ಹಲವು ಧಾರ್ಮಿಕ ಹಾಗೂ ಸಾಮಾಜಿಕ ಸಂಘಟನೆಗಳಲ್ಲಿ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ.

ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಸಯ್ಯದುಲ್ ಉಮ್ಮ ಸ್ವಾಧಿಕ್ ಅಲಿ ಶಿಹಾಬ್ ತಂಜಳ್‌, ಸಮಸ್ತ ಮುಶಾವರ ಕಾರ್ಯದರ್ಶಿ ಶೈಖುನಾ ಎಂ.ಟಿ. ಅಬ್ದುಲ್ಲಾ ಮುಸ್ಲಿಯಾರ್, ಕೋಶಾಧಿಕಾರಿ ಕೊಯ್ಯೋಡು ಉಮ್ಮರ್ ಮುಸ್ಲಿಯಾರ್, ಸೈಯ್ಯದ್ ಅಬ್ಬಾಸ್ ಅಲಿ ಶಿಹಾಬ್ ತಂಬಳ್, ಸೈಯ್ಯದ್ ಹಮೀದ್ ಅಲಿ ಶಿಹಾಬ್ ತಂಜಳ್‌, ಸೈಯ್ಯದ್ ಆಟಕೋಯ ಕುಂಬೋಳ್ ತಂಬಳ್, ಸೈಯ್ಯದ್ ಅಲಿ ತಂಬಳ್ ಕುಂಬೋಳ್‌, ಲಕ್ಷದ್ವೀಪ ಖಾಝಿ ಇ.ಪಿ. ಸೈದಾಲಿ ತಂಬಳ್, ಸೈಯ್ಯದ್ ಝನುಲ್ ಅಬಿದೀನ್ ತಂಬಳ್, ಉಸ್ಮಾನುಲ್ ಫೈಝಿ ತೋಡಾರ್, ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ್‌, ಅಬ್ದುಲ್ ಸಮದ್ ಪೂಕೋಟೂರು, ಮಾಜಿ ಮೇಯ‌ರ್ ಕೆ. ಅಶ್ರಫ್‌ ಸೇರಿದಂತೆ ಧಾರ್ಮಿಕ ಮುಖಂಡರು ಹಾಗೂ ಗಣ್ಯರು ಉಪಸ್ಥಿತರಿದ್ದರು. ನೂತನ ಜಿಲ್ಲಾ ಖಾಝಿಗೆ ಶುಭ ಹಾರೈಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular