ಶಿವಮೊಗ್ಗ ; ಶಿವಮೊಗ್ಗದಲ್ಲಿ ಜೋಕಾಲಿ ಆಡಲು ಹೋಗಿ, ಕುಣಿಕೆ ಬಿಗಿದು ಬಾಲಕಿ ಸಾವನಪ್ಪಿದ ದುರ್ಘಟನೆ ತಾಲೂಕಿನ ಲಕ್ಕಿನಕೊಪ್ಪದಲ್ಲಿ ನಡೆದಿದೆ.
ಶಿವಮೊಗ್ಗ ವಿದ್ಯಾನಗರದ ಪ್ರಣಮ್ಯ(9) ಮೃತ ದುರ್ದೈವಿ.
ರೂಮ್ ಬಾಗಿಲು ಹಾಕಿ, ಜೋಕಾಲಿ ಆಡುತ್ತಿದ್ದ ವೇಳೆ ನಡೆದ ದುರ್ಘಟನೆ ತಡವಾಗಿ ಬೆಳಕಿಗೆ ಬಂದಿದೆ.
3 ದಿನದ ಹಿಂದೆ ನಡೆದ ಘಟನೆ ನಡೆದಿದ್ದು ಪ್ರಣಮ್ಯ ಬೇಸಿಗೆ ರಜೆ ಕಳೆಯಲು ಶಿವಮೊಗ್ಗ ತಾಲೂಕು ಲಕ್ಕಿನಕೊಪ್ಪದಲ್ಲಿದ್ದ. ಚಿಕ್ಕಮ್ಮನ ಮನೆಗೆ ಹೋಗಿದ್ದಳು ಪಂಚೆ ಕಟ್ಟಿ ಜೋಕಾಲಿ ಮಾಡಿಕೊಂಡು ಆಡುತ್ತಿದ್ದಾಗ ಈ ಘಟನೆ ನಡೆದಿದೆ.
ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.


