Sunday, April 26, 2026
Flats for sale
Homeಜಿಲ್ಲೆಉಡುಪಿ : ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮಾವಿನಕಾಯಿ ಕೊಯ್ಯುವಾಗ ವಿದ್ಯುತ್ ಸ್ಪರ್ಶ – ಜಿಲ್ಲಾಧಿಕಾರಿ ಕಚೇರಿ...

ಉಡುಪಿ : ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮಾವಿನಕಾಯಿ ಕೊಯ್ಯುವಾಗ ವಿದ್ಯುತ್ ಸ್ಪರ್ಶ – ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಸಾವು.

ಉಡುಪಿ: ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮಾವಿನಕಾಯಿ ಕೊಯ್ಯುವ ವೇಳೆ ಹೈಟೆನ್ಷನ್ ವಿದ್ಯುತ್ ತಂತಿ ಸ್ಪರ್ಶಿಸಿ ಕಚೇರಿ ಗುಮಾಸ್ತರೊಬ್ಬರು ಸಾವನ್ನಪ್ಪಿದ ದುರ್ಘಟನೆ ಇಂದು ಬೆಳಗ್ಗೆ ನಡೆದಿದೆ.

ಕುಕ್ಕೆಕಟ್ಟೆ ಡಯಾನ ಟಾಕೀಸ್ ಬಳಿಯ ಕೃಷ್ಣಾಂಜನೇಯ ನಿಲಯದ ನಿವಾಸಿ ಸದಾನಂದ ಶೇರಿಗಾರ್ (53) ಮೃತರು. ಇಂದು ಬೆಳಗ್ಗೆ ಮಾವಿನಕಾಯಿ ಕೊಯ್ಯುವ ವೇಳೆ ಅಲ್ಲೇ ಹಾದು ಹೋಗಿದ್ದ ಹೈಟೆನ್ಷನ್ ವಿದ್ಯುತ್ ತಂತಿಗೆ ತಾಗಿದ್ದು, ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಅವರು ಮಗಳನ್ನು ಶಾಲೆ ಬಿಟ್ಟು ಕಚೇರಿಗೆ ಬಂದಿದ್ದು ತನ್ನ ಬೈಕ್ ನ್ನು ಅದೇ ಮಾವಿನ ಮರದ ಶೆಡ್ ನ ಕೆಳಗೆ ನಿಲ್ಲಿಸಿದ್ದರು.ಮಾವಿನ ಮರದಲ್ಲಿದ್ದ ಒಂದಷ್ಟು ಹಣ್ಣನ್ನು ಕೊಯ್ಯುವಂತ ಸಂದರ್ಭದಲ್ಲಿ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ. ಮೃತರು ಪತ್ನಿ, ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular