Monday, May 25, 2026
Flats for sale
Homeದೇಶಲಕ್ನೋ : ಹಸುವನ್ನು ರಾಷ್ಟ್ರೀಯ ಪ್ರಾಣಿ ಘೋಷಿಸಲು ಮುಸ್ಲಿಂ ಸಂಘಟನೆಗಳ ಆಗ್ರಹ.

ಲಕ್ನೋ : ಹಸುವನ್ನು ರಾಷ್ಟ್ರೀಯ ಪ್ರಾಣಿ ಘೋಷಿಸಲು ಮುಸ್ಲಿಂ ಸಂಘಟನೆಗಳ ಆಗ್ರಹ.

ಲಕ್ನೋ : ಈದ್-ಉಲ್-ಅಝಾ (ಬಕ್ರೀದ್) ಹಬ್ಬಕ್ಕೆ ಮುನ್ನ ಹಸುವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಬೇಕೆಂಬ ಬೇಡಿಕೆ ಇದೀಗ ಕೆಲವು ಮುಸ್ಲಿಂ ಸಂಘಟನೆಗಳಿಂದ ಕೇಳಿಬರುತ್ತಿದೆ. ಜಮೀಯತ್ ಉಲೇಮಾ -ಈ -ಹಿಂದ್ ಅಧ್ಯಕ್ಷ ಮೌಲಾನಾ ಅರ್ಷದ್ ಮದನಿ ಈ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.

ಗೋಹತ್ಯೆ ವಿಚಾರದ ರಾಜಕೀಯ ದುರುಪಯೋಗ ತಡೆಯಲು ಹಾಗೂ ಗೋವಿನ ಹೆಸರಿನಲ್ಲಿ ನಡೆಯುವ ಗುಂಪು ಹಲ್ಲೆ ಮತ್ತು ದೌರ್ಜನ್ಯಗಳನ್ನು ಕಡಿಮೆ ಮಾಡಲು ಇದು ಸಹಕಾರಿಯಾಗಲಿದೆ ಎಂದು ಸಂಘಟನೆಗಳ ಅಭಿಪ್ರಾಯವಾಗಿದೆ.

ಈ ವಿಚಾರದಲ್ಲಿ ಸಮುದಾಯದೊಳಗೆ ಒಮ್ಮತ ಮೂಡಿಸಲು ಕೆಲವು ಸಂಘಟನೆಗಳು ಮುಂದಾಗಿದ್ದು, ಪ್ರಧಾನಿ ಮತ್ತು ಮುಖ್ಯಮಂತ್ರಿಗಳನ್ನು ಭೇಟಿ ಮಾಡುವ ಯೋಚನೆಯನ್ನೂ ವ್ಯಕ್ತಪಡಿಸಿವೆ. ಉತ್ತರ ಪ್ರದೇಶ ಸೇರಿದಂತೆ ಮುಸ್ಲಿಂ ಜನಸಂಖ್ಯೆ ಹೆಚ್ಚಿರುವ ಪ್ರದೇಶಗಳಿಂದಲೇ ಇಂತಹ ಬೇಡಿಕೆಗಳು ಕೇಳಿಬರುತ್ತಿರುವುದು ಗಮನಾರ್ಹವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular