Wednesday, July 22, 2026
Homeರಾಜ್ಯಮೈಸೂರು : ನಶೆಗಾಗಿ ಕೇಕ್ ತಯಾರಿಸಲು ತರಿಸಿದ್ದ ಎಸೆನ್ಸ್ ಕುಡಿದ ಕೈದಿಗಳು; ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು...

ಮೈಸೂರು : ನಶೆಗಾಗಿ ಕೇಕ್ ತಯಾರಿಸಲು ತರಿಸಿದ್ದ ಎಸೆನ್ಸ್ ಕುಡಿದ ಕೈದಿಗಳು; ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಸಾವು ..!

ಮೈಸೂರು : ನಶೆಗಾಗಿ ಕೇಕ್ ತಯಾರಿಸಲು ತರಿಸಿದ್ದ ಎಸೆನ್ಸ್ ಕುಡಿದ ಕೈದಿಗಳು ಅಸ್ವಸ್ಥರಾದ ಘಟನೆ ಮೈಸೂರಿನಲ್ಲಿ ಡಿ.28 ರಂದು ನಡೆದಿದೆ .ಅಸ್ವಸ್ಥರಾಗಿದ್ದ ಕೈದಿಗಳನ್ನು ಆಸ್ಪತ್ರೆಗೆ ದಾಖಲಿಸಿದ್ದು ನಿನ್ನೆ ಓರ್ವ ಮೃತಪಟ್ಟಿದ್ದು ಮತ್ತೊಬ್ಬ ಕೈದಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾನೆ. ಮೃತ ಕೈದಿಯನ್ನು ಚಾಮರಾಜನಗರದ ನಾಗರಾಜು ಎಂದು ತಿಳಿದುಬಂದಿದೆ.

ಹೊಸವರ್ಷದ ಕೇಕ್ ತಯಾರಿಸಲು ತರಿಸಲಾಗಿದ್ದ ಎಸೆನ್ಸ್ ಬೇಕರಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಮೂವರು ಕೈದಿಗಳು ಡಿ 28 ರೆಂದು ಕುಡಿದಿದ್ದು ಯಾರಿಗೂ ಹೇಳದೆ ಸುಮ್ಮನಾಗಿದ್ದರು. ಮೂವರಿಗೂ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆ ಜೈಲಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಹೊಟ್ಟೆ ನೋವು ಕಡಿಮೆಯಾಗದ ಹಿನ್ನೆಲೆ ಕೆ ಆರ್ ಆಸ್ಪತ್ರೆಗೆ ದಾಖಲಿಸಿದ್ದರು ಅಲ್ಲಿಯೂ ಕೈದಿಗಳು ಎಸೆನ್ಸ್ ಕುಡಿದ ವಿಷಯ ಮುಚ್ಚಿಟ್ಟಿದ್ದು ಬಳಿಕ ವೈದ್ಯರು ಈ ಬಗ್ಗೆ ಪ್ರಶ್ನಿಸಿದಾಗ ಮೂವರು ಸತ್ಯ ಹೇಳಿದ್ದಾರೆ. ಅದಾಗಲೇ ಸಾಕಷ್ಟು ವಿಳಂಬವಾದ ಹಿನ್ನೆಲೆ ಚಿಕಿತ್ಸೆ ಫಲಕಾರಿಯಾಗದೆ ಹಿನ್ನೆಲೆ ಮೈಸೂರಿನ ಸಾತಗಳ್ಳಿಯ ಮಾದೇಶ್ ಮೃತಪಟ್ಟಿದ್ದು ಇಂದು ಮತ್ತೋರ್ವ ಮೃತಪಟ್ಟಿದ್ದಾನೆ. ಮತ್ತೊಬ್ಬ ಕೈದಿ ರಮೇಶ್ ರವರ ಪರಿಸ್ಥಿತಿ ಸಹಾ ಗಂಭೀರವಾಗಿದ್ದು ತೀವ್ರನಿಗಾದಲ್ಲಿ ಚಿಕೆತ್ಸೆ ಪಡೆಯುತ್ತಿದ್ದಾರೆ.ಈ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular