Thursday, July 23, 2026
Homeರಾಜ್ಯಬೆಂಗಳೂರು : 6 ಮಂದಿ ನಕ್ಸಲರು ಸಿಎಂ ಗೃಹ ಕಚೇರಿಯಲ್ಲಿ ಇಂದು ಸರೆಂಡರ್..!

ಬೆಂಗಳೂರು : 6 ಮಂದಿ ನಕ್ಸಲರು ಸಿಎಂ ಗೃಹ ಕಚೇರಿಯಲ್ಲಿ ಇಂದು ಸರೆಂಡರ್..!

ಚಿಕ್ಕಮಗಳೂರು : ಹಲವು ದಿನಗಳ ಹಿಂದೆ ವಿಕ್ರಂಗೌಡ ಎನ್‌ಕೌಂಟರ್ ಪ್ರಕರಣದ ಬೆನ್ನಲ್ಲೇ ಕರ್ನಾಟಕದ ಮುಂಡಗಾರು ಲತಾ, ಸುಂದರಿ ಕುತ್ಲೂರು, ವನಜಾಕ್ಷಿ ಬಾಳೆಹೊಳೆ, ಮಾರಪ್ಪ ಅರೋಲಿ, ತಮಿಳುನಾಡಿನ ಕೆ ವಸಂತ ಮತ್ತು ಕೇರಳದ ಟಿಎನ್ ಜೀಶಾ ಶಸ್ತ್ರಾಸ್ತ್ರ ತೊರೆದು ಮುಖ್ಯವಾಹಿನಿಗೆ ಬರಲು ಒಪ್ಪಿದ್ದು ಕರ್ನಾಟಕದಲ್ಲಿ ಆರು ನಕ್ಸಲರುಮುಖ್ಯ ವಾಹಿನಿಗೆ ಬರಲು ಮುಂದಾಗಿದ್ದಾರೆ ಎಂಬ ಮಾಹಿತಿ ದೊರೆತಿದೆ. ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಆ್ಯಕ್ಟಿವ್ ಆಗಿದ್ದ ನಕ್ಸಲರನ್ನ ಶಾಂತಿಗಾಗಿ ನಾಗರೀಕ ವೇದಿಕೆ ಹಾಗೂ ಶರಣಾಗತಿ ಕಮಿಟಿ ಕಾಡಿನೊಳಗೆ ಭೇಟಿಯಾಗಿ ಸಭೆ ನಡೆಸಿದ್ದಾರೆ.

6 ಮಂದಿ ನಕ್ಸಲರ ಶರಣಾಗತಿಯಲ್ಲಿ ಧಿಡೀರ್ ಬದಲಾವಣೆಯಾಗಿದ್ದು, ಸಿಎಂ ಗೃಹ ಕಚೇರಿ ಯಲ್ಲಿ ನಕ್ಸಲರು ಸರೆಂಡರ್ ಆಗಲಿದ್ದಾರೆ. ಈ ಹಿನ್ನೆಲೆ ಬಾಳೆಹೊನ್ನೂರಿನಿಂದ ಬೆಂಗಳೂರಿಗೆ 6 ಮಂದಿ ನಕ್ಸಲರು ಪ್ರಯಾಣ ಬೆಳೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಮೊದಲು ಚಿಕ್ಕಮಗಳೂರಿನ ಡಿಸಿ ಕಚೇರಿಯಲ್ಲಿ ಆರು ಮಂದಿ ನಕ್ಸಲರು ಶರಣಾಗಲಿದ್ದಾರೆ ಎಂದು ಹೇಳಲಾಗಿತ್ತು, ಇದೀಗ ಧಿಡೀರ್ ಆಗಿ ಬದಲಾವಣೆಯಾಗಿದೆ. ಸಿಎಂ ಸಿದ್ದರಾಮಯ್ಯ ಸೂಚನೆ ಮೇರೆಗೆ ಸಿಎಂ ಗೃಹ ಕಚೇರಿ ಯಲ್ಲಿ ನಕ್ಸಲರು ಸರೆಂಡರ್ ಆಗಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular