ಮೈಸೂರು ; ಜಿಲ್ಲೆಯಲ್ಲಿ ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ ಎಂಟು ಜನರ ಪೈಕಿ ಆರು ಮಂದಿ ದುರ್ಘಟನೆಯಲ್ಲಿ ಮೃತಪಟ್ಟಿರುವ ಘಟನೆ ಸಂಭವಿಸಿದೆ. ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.

ಘಟನೆ ಕೃಷ್ಣರಾಜನಗರ ಪಟ್ಟಣದ ಸಮೀಪದ ಹಳೆ ಎಡತೊರೆ ಪ್ರದೇಶದಲ್ಲಿರುವ ಅರ್ಕೇಶ್ವರ ಸ್ವಾಮಿ ದೇವಸ್ಥಾನದ ಬಳಿಯ ಕಾವೇರಿ ನದಿಯಲ್ಲಿ ನಡೆದಿದೆ. ಹಜರತ್ ಖಾದರ್ ಲಿಂಗವಳ್ಳಿ ಉರುಸ್ ವೀಕ್ಷಿಸಲು ಬಂದಿದ್ದವರು ಈಜಲು ನದಿಗೆ ಇಳಿದ ವೇಳೆ ಈ ದುರಂತ ಸಂಭವಿಸಿದೆ.
ಈಜಲು ತೆರಳಿದ್ದ ಎಂಟು ಜನರಲ್ಲಿ ಆರು ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೃತರನ್ನು ಐಮನ್ (13) – ಬೆಂಗಳೂರು,ಅಫೀಫ್ (13) – ಕೆಆರ್ ನಗರ,ಯಾಸಿನ್ (23) – ಬೆಂಗಳೂರು,ನೇಹಾ (22) – ಬೆಂಗಳೂರು
ಫಾತಿಮಾ (30) – ಊಟಿ,ಉಮೆರ್ (5) – ಮೈಸೂರು ಎಂದು ಗುರುತಿಸಲಾಗಿದೆ. ಇನ್ನಿಬ್ಬರು ಗಾಯಾಳುಗಳ ಸ್ಥಿತಿ ಗಂಭೀರವಾಗಿದ್ದು, ತಕ್ಷಣ ಮೈಸೂರಿಗೆ ಕಳುಹಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.


